TUMAKURU:SHAKTHI PEETA FOUNDATION
ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷೆ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ದೇಶದ ಮನೆ ಮನೆಗೆ ನಲ್ಲಿ ಮೂಲಕ ಶಾಶ್ವತವಾದ ಕುಡಿಯುವ ನೀರನ್ನು 2024 ರೊಳಗೆ ನೀಡುತ್ತೇವೆ ಎಂದು ಪ್ರಧಾನಿ ಶ್ರೀ ನರೇಂದ್ರಮೋದಿಯವರು ಘೋಷಣೆ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ಸಭೆಯನ್ನು ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ:24.06.2021 ರಂದು ನಡೆಸಿತು.
ಈ ಸಭೆಯ ಕೆಲವು ಅಂಶಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
- ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಜಲಜೀವನ್ ಮಿಷನ್ ಯೋಜನೆ ಸಭೆಗೆ ಸಂಬಂದ ಪಟ್ಟ ಇಲಾಖಾ ಅಧಿಕಾರಿಗಳ ಜೊತೆಗೆ ಎಲ್ಲಾ ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರಿಗೆ ನೋಟೀಸ್ ನೀಡದೇ ಇರುವುದು ಸರಿಯಲ್ಲ- ಮುಂದಿನ ಸಭೆಯಿಂದ ನೀಡುತ್ತೇವೆ ಸಾರ್..
- ತುಮಕೂರು ಜಿಲ್ಲೆಯಲ್ಲಿ ಯಾವ ನದಿ ನೀರಿನಿಂದ ಯಾವ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಯೋಚಿಸಿದ್ದೀರಿ – ನಿಖರವಾದ ಮಾಹಿತಿ ಯಾರ ಬಳಿಯೂ ಇಲ್ಲ.
- ಹಾಲಿ ಜಿಲ್ಲೆಯಲ್ಲಿ ಎಷ್ಟು ಬಹುಗ್ರಾಮ ಕುಡಿಯುವ ನೀರು ಸರಬರಾಜು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಎಷ್ಟು ವಿಫಲವಾಗಿವೆ, ಎಷ್ಟು ಯೋಜನೆ ಸಫಲವಾಗಿವೆ, ವಿಫಲವಾಗಿದ್ದರೆ ಏಕೆ ವಿಫಲವಾಗಿವೆ ಎಂಬ ಮಾಹಿತಿ ನೀಡಿ – ನಿಖರವಾದ ಮಾಹಿತಿ ಯಾರ ಬಳಿಯೂ ಇಲ್ಲ.
- ಯಾವ ಗ್ರಾಮ ಪಂಚಾಯಿತಿಗೆ ಯಾವ ಕೆರೆಯಿಂದ ಯಾವ ನದಿ ನೀರು ತುಂಬಿಸಲು ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಮಾಹಿತಿ ನೀಡುವಿರಾ – ನಿಖರವಾದ ಮಾಹಿತಿ ಯಾರ ಬಳಿಯೂ ಇಲ್ಲ.
- ಸಾಕು ಪ್ರಾಣಿಗಳಿಗೆ ನೀರು ಸರಬರಾಜು ಮಾಡಲು ಯೋಜನೆಯಲ್ಲಿ ಅಳವಡಿಸಲಾಗಿದೆಯೇ- ಇಲ್ಲ ಸಾರ್ ಮಾರ್ಗದರ್ಶಿ ಸೂತ್ರದಲ್ಲಿ ಇಲ್ಲ.
- ಗ್ರಾಮ ಪಂಚಾಯಿತಿವಾರು/ನಗರ ಸ್ಥಳೀಯ ಸಂಸ್ಥೆವಾರು ಹಾಲಿ ಕುಡಿಯುವ ನೀರಿನ ವ್ಯವಸ್ಥೆಗಳ ಜಿಐಎಸ್ ಲೇಯರ್ ಮಾಡಿದ್ದೀರಾ- – ನಿಖರವಾದ ಮಾಹಿತಿ ಯಾರ ಬಳಿಯೂ ಇಲ್ಲ.
- ಈಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ತೊಂದರೆ ಇದೆಯಾ – ನಿಖರವಾದ ಮಾಹಿತಿ ಯಾರ ಬಳಿಯೂ ಇಲ್ಲ.
- ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ತುಮಕೂರು ಜಿಲ್ಲೆಗೆ ಜಲಜೀವನ್ ಮಿಷನ್ ಯೋಜನೆ ರೂಪಿಸಲು ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಆದೇಶ ಮಾಡಿದ್ದ ಪ್ರತಿ ನೀಡಿ – ನಾನು ಹೊಸದಾಗಿ ಬಂದಿದ್ದೇನೆ ನಮಗೆ ಗೊತ್ತಿಲ್ಲ. ಸರ್ಕಾರದಲ್ಲಿ ವಿಚಾರಿಸಿ ತರುತ್ತೇವೆ ಸಾರ್.
- ತುಮಕೂರು ಜಿಲ್ಲೆಗೆ ಸಣ್ಣ ನೀರಾವರಿ ಇಲಾಖೆಯ ಎಷ್ಟು ಕೆರೆಗಳಿಗೆ ಹೇಮಾವತಿ ನದಿ ನೀರಿನಿಂದ ತುಂಬುತ್ತಿವೆ – ಮಾಹಿತಿ ಗೊತ್ತಿಲ್ಲ ಸಾರ್ ಮುಂದಿನ ಸಭೆಯಲ್ಲಿ ಹೇಳುತ್ತೇವೆ.
- ತುಮಕೂರು ಜಿಲ್ಲೆಗೆ ಕುಡಿಯುವ ನೀರಿಗೆ ಎಷ್ಟು ನದಿ ನೀರು ಅಲೋಕೇಷನ್ ಆಗಿದೆ, ಎಷ್ಟು ಟಿ.ಎಂ.ಸಿ ಅಡಿ ನೀರು ಬರಲಿದೆ – ನಿಖರವಾದ ಮಾಹಿತಿ ಯಾರ ಬಳಿಯೂ ಇಲ್ಲ.
- ಜಿ.ಎಸ್.ಬಸವರಾಜ್ ರವರು ಬೇಸತ್ತು ಕುಂದರನಹಳ್ಳಿ ರಮೇಶ್ ಕೇಳುವ ಮಾಹಿತಿ ಸರಿ ಇದೆಯಾ? ಅಥವಾ ತಪ್ಪು ಇದೆಯಾ ಎಂದು ಕೇಳಿದ್ದಕ್ಕೆ ಸರಿ ಇದೆ ಸಾರ್. ಮತ್ತೆ ಎಷ್ಟು ದಿವಸದಲ್ಲಿ ಈ ಎಲ್ಲಾ ಮಾಹಿತಿ ನೀಡಲು ಸಾಧ್ಯಾ – ಒಂದು ತಿಂಗಳೊಳಗಾಗಿ 330 ಗ್ರಾಮ ಪಂಚಾಯಿತಿ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಜಿಐಎಸ್ ಆಧಾರಿತ ನಕ್ಷೆಯಲ್ಲಿ ಸಿದ್ಧಪಡಿಸಿ ಮಾಹಿತಿ ನೀಡುತ್ತೇವೆ.
- ಜಿಲ್ಲಾ ಪಂಚಾಯತ್ ಸಿಇಓ ರವರು ರೀ ಒಂದು ತಿಂಗಳಿನಲ್ಲಿ ಇಷ್ಟು ಮಾಹಿತಿ ನೀಡಲು ಸಾಧ್ಯವಾ – ಖಚಿತವಾಗಿ ನೀಡುತ್ತೇವೆ ಮೇಡಂ.
ಆಯಿತು ಒಂದು ತಿಂಗಳೊಳಗಾಗಿ ಮಾಹಿತಿ ನೀಡಿ,
ಅಧಿಕಾರಿಗಳಿಗೆ ಸಂಸದರು ಹೇಳಿದ್ದು ಸಭೆಯಲ್ಲಿ ನೀವೂ ಹೇಳುವುದನ್ನು ನಾನು ಕೇಳುವುದಿಲ್ಲಾ, ನಾನು ಕೇಳಿದ ಮಾಹಿತಿಗೆ ಮಾತ್ರ ನೀವೂ ಉತ್ತರಿಸಿ.
‘ಪ್ರಗತಿ ಪರಿಶೀಲನೆ ಸಭೆ ಎಂದರೆ ಒಂದು ಸಿದ್ಧ ವರದಿ ಇರುತ್ತದೆ, ಮಕ್ಕಳು ಹೋಮ್ ವರ್ಕ್ ಹೇಳಿದ ಹಾಗೆ ಹೇಳಿದರೆ ಮುಗಿಯಿತು ಎಂಬ ಕುರುಡು ಪದ್ಧತಿಗೆ ಅಕ್ಷರಷಃ ಅಧಿಕಾರಿಗಳು ನಾವೂ ಬದಲಾಗಲೇ ಬೇಕು ಎಂಬ ದೃಢ ನಿರ್ಧಾರಕ್ಕೆ ಬಂದಂತೆ ಕಾಣಿಸಿತು.’
ಯಾವ ಮಾಹಿತಿಯನ್ನು ಹೇಗೆ ಒಂದು ಕಡೆ ಸಂಗ್ರಹಿಸ ಬೇಕು, ಎಲ್ಲೆಲ್ಲಿ ಯಾವ ಮಾಹಿತಿ ಸಾಪ್ಟ್ ಕಾಪಿ ಇದೆ, ಎಂಬ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.
‘ಸಭೆಯಲ್ಲಿ ಭಾಗವಹಿಸಿದ್ದ ಒಬ್ಬ ಮುಖ್ಯ ಇಂಜಿನಿಯರ್ ಸಭೆ ಮುಗಿದ ನಂತರ ಹೇಳಿದ್ದು ಬಹಳ ಒಳ್ಳೆಯ ಸಭೆ, ಸಭೆಗಳು ಈ ರೀತಿ ಅರ್ಥ ಪೂರ್ಣವಾಗಿ ನಡೆಯ ಬೇಕು’.