5th December 2022
Share

TUMAKURU:SHAKTHIPEETA FOUNDATION

ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಕುಂದರನಹಳ್ಳಿ ಗೇಟ್-ಅದಲಗೆರೆ-ಸಾಗಸಂಧ್ರ – ಬೋಗಸಂದ್ರ ರಸ್ತೆಗೆ ಅನುದಾನ ನೀಡಿದ್ದಾರೆ.

ಇತ್ತೀಚೆಗೆ ಕುಂದರನಹಳ್ಳಿಯಲ್ಲಿ ಶಂಕುಸ್ಥಾಪನೆ ಮಾಡಿದ್ದರು.

ಶೀಘ್ರವಾಗಿ ಕಾಮಗಾರಿಯನ್ನು ಆರಂಭಿಸಿದ್ದಾರೆ, ದಿನಾಂಕ:25.06.2021 ರಂದು ಕಾಮಗಾರಿ ಹೇಗೆ ಆರಂಭವಾಗಿದೆ ಎಂಬ ಬಗ್ಗೆ ತಪಾಸಣೆ ಮಾಡಲು ಹೋಗಿದ್ದೆ.

 ಇದೊಂದು ಬಹಳ ಒಳ್ಳೆಯ ರಸ್ತೆ ಎಂದು ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್. ಶ್ರೀನಿವಾಸ್ ರವರು ಶಂಕುಸ್ಥಾಪನಾ ಸಮಯದಲ್ಲಿ ನನಗೆ ಹೇಳಿದಾಗ, ಬಹಳ ಒಳ್ಳೆಯ ಕಾಮಗಾರಿಯೂ ನಡೆಯ ಬೇಕು ಎಂದು ಹೇಳಿದ್ದೆ.

ಅಧಿಕಾರಿಗಳು ಮತ್ತು ಗುತ್ತಿಗೆ ದಾರರು ತಪ್ಪು ಮಾಡಿದ ಮೇಲೆ ಟೀಕೆ ಮಾಡುವುಕ್ಕಿಂತ ಮೊದಲೇ ಕಾಮಗಾರಿ ಗಮನಿಸೋಣ ಎಂಬ ಅನಿಸಿಕೆಯಿಂದ ಕಾಮಗಾರಿ ನಡೆಯುವ ಸ್ಥಳವಲ್ಲದೆ ಸಂಪೂರ್ಣ ರಸ್ತೆಯ ಉದ್ದದಲ್ಲೂ ಪ್ರವಾಸ ಮಾಡಿದೆ.

ನನಗೆ  ಸತ್ಯ ಸಂಗತಿಗಳು ಕಣ್ಣಿಗೆ ಕಂಡಿದ್ದು ಮತ್ತು ತಿಳಿದಿದ್ದು.

ರಸ್ತೆ ಟೆಂಡರ್ ಕರೆದ ನಂತರ ಇತ್ತೀಚೆಗೆ ಒಂದು ಆವರಣ ಗೋಡೆ ನಿರ್ಮಾಣವಾಗಿದೆ.

ಒಬ್ಬರು ಮುಳ್ಳು ತಂತಿ ಕಂಬ  ನೆಟ್ಟಿದ್ದಾರೆ.

ಇನ್ನೊಬ್ಬರೂ ಚರಂಡಿ ತೆಗೆದು ಅಡಿಕೆ ಗಿಡ ಹಾಕಿದ್ದಾರೆ.

ಉಳಿದಂತೆ ಕಾಮಗಾರಿ ಆರಂಭವಾಗಿದೆ, ಜನರು ಖುಷಿಯಾಗಿದ್ದಾರೆ ಇಷ್ಟು ಒಳ್ಳೆಯ ರಸ್ತೆ ನಮ್ಮ ಊರಿನ ಮುಖಾಂತರ ಹಾದು ಹೋಗಲಿದೆ ಶೀಘÀ್ರವಾಗಿ ಪೂರ್ಣಗೊಳಿಸಿ ಎನ್ನುತ್ತಿದ್ದಾರೆ.

ಈ ರಸ್ತೆ ಕಾನೂನು ಮತ್ತು ತಾಂತ್ರಿಕವಾಗಿ ಒಂದು ಸಣ್ಣ ತಪ್ಪು ನಡೆಯಬಾರದು, ಎಷ್ಟೆ ಅಡಚಣೆಗಳು ಬಂದರೂ ಬಗೆಹರಿಸಿ ಒಂದು ಉತ್ತಮವಾದ ರಸ್ತೆ ನಿರ್ಮಾಣ ಮಾಡಲೇ ಬೇಕು ಎಂಬ ಮನಸ್ಸು ನನ್ನದಾಗಿದೆ.

ಅಧಿಕಾರಿಗಳು ಏನು ಮಾಡುತ್ತಾರೆ ಕಾದು ನೋಡೋಣ?