9th October 2024
Share

TUMAKURU:SHAKTHI PEETA FOUNDATION

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:29.06.2021 ರಂದು ನಡೆಯುವ ದಿಶಾ ಸಮಿತಿ ಸಭೆಯಲ್ಲಿ ಕಳೆದ ಎರಡು ವರ್ಷಗಳಿಂದ ನಡೆದ ದಿಶಾ ಸಭೆಗಳ ನಿರ್ಣಯಗಳಂತೆ ಮಹತ್ವದ ಘೋಷಣೆ’ ಮಾಡಲಿದ್ದಾರೆ.

  1. ದಿನಾಂಕ:27.06.2016 ರಂದು ಕೇಂದ್ರ ಸರ್ಕಾರ ದಿಶಾ ಸಮಿತಿ ರಚಿಸಿರುವುದರಿಂದ            ಪ್ರತಿ ವರ್ಷ ಜುಲೈ ತಿಂಗಳು ದಿಶಾ ಸಂಸ್ಥಪನಾ ದಿನಾಚರಣೆ ಮಾಡುವ ಮೂಲಕ ದೇಶಕ್ಕೆ ಮಾದರಿ ಯಾಗಲಿದ್ದಾರೆ.
  2. ತುಮಕೂರು ಜಿಲ್ಲಾ ಮಟ್ಟದ ದಿಶಾ ಪೋರ್ಟಲ್ ನ್ನು ವಿಶೇಷ ಮಾದರಿಯಲ್ಲಿ ವೆಬ್ ಸೈಟ್ ಮಾಡಿ 2022 ರೊಳಗೆ ಸಂಪೂರ್ಣ ಮಾಹಿತಿ ಅಫ್ ಲೋಡ್ ಮಾಡಲು ಚಾಲನೆ ನೀಡಲಿದ್ದಾರೆ.
  3. ಪ್ರತಿಯೊಂದು ಇಲಾಖೆಯವರು ಡಿಜಿಟಲ್ ಲೈವ್ ಮಾಹಿತಿ ಅಫ್ ಲೋಡ್ ಮಾಡಲು ಲಾಗಿನ್ ಪಾಸ್ ವಾರ್ಡ್ ನೀಡಿ ಯಾವ ರೀತಿ ಅಫ್ ಲೋಡ್ ಮಾಡ ಬಹುದು ಎಂಬ ಬಗ್ಗೆ ಲಾಗಿನ್ ಪಾಸ್ ವರ್ಡ್ ಆಂದೋಲನ ಆರಂಭಿಸಲಿದ್ದಾರೆ.
  4. ಕೇಂದ್ರ ಸರ್ಕಾರ 2014 ರಿಂದ 2024 ರವರೆಗೆ ಕಾಲಮಿತಿ ಘೋಷಣೆ ಮಾಡಿರುವ ಹಲವಾರು  ಯೋಜನೆಗಳ ಜಾರಿ ಮಾಡುವ ಮೂಲಕ ‘2022 ಗಡುವಿನ ಯಶಸ್ಸಿ’ಗೆ ಆಂದೋಲನ ಆರಂಭ ಮಾಡಲಿದ್ದಾರೆ.
  5. 2022 ರ ವೇಳೆಗೆ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ‘75 ಯೋಜನೆಗಳನ್ನು ಉದ್ಘಾಟನೆ ಮಾಡಲು ಯೋಜನೆಗಳ ಪಟ್ಟಿ ಮಾಡಲು ಆರಂಭಿಸಿಲಿದ್ದಾರೆ.
  6. 2024 ರ0ಳಗೆ ದೇಶದ ಎಲ್ಲಾ ಮನೆಗೂ ನಲ್ಲಿ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ಯೋಜನೆಯ ವಿಲೇಜ್ ಆಕ್ಷನ್ ಪ್ಲಾನ್ ಮಾಡಲು ಆಂದೋಲನ ಆರಂಭಿಸಿಲಿದ್ದಾರೆ.
  7. ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಮತ್ತು ಯೋಜನಾವಾರು ಪರಿಣಿತರು ತಮ್ಮ ಸಲಹೆ ಅಭಿಪ್ರಾಯಗಳನ್ನು ಲೋಕಸಭಾ ಸದಸ್ಯರ ಅಧಿಕೃತ ಸೋಶಿಯಲ್ ಮೀಡಿಯಾ ಮೂಲಕ ನೀಡುವ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ.
  8. 2022 ರ ವೇಳೆಗೆ ಪೂರ್ಣ ಪ್ರಮಾಣದ ಅಭಿವೃದ್ಧಿ ವಾರ್ ರೂಮ್ ಆರಂಭಿಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ.
  9. 2022 ರ ವೇಳೆಗೆ ತುಮಕೂರು ಜಿಲ್ಲೆಯನ್ನು ಡಿಜಿಟಲ್ ಡಾಟಾ ಜಿಲ್ಲೆ ಎಂದು ಘೋಶಿಸಲು  ವಿವಿಧ ಯೋಜನಾವಾರು 75 ಸಭೆಗಳನ್ನು ಮಾಡುವ ಪರಿಕಲ್ಪನೆಗೆ ಚಾಲನೆ ನೀಡಲಿದ್ದಾರೆ.