TUMAKURU:SHAKTHI PEETA FOUNDATION
ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:29.06.2021 ರಂದು ನಡೆಯುವ ದಿಶಾ ಸಮಿತಿ ಸಭೆಯಲ್ಲಿ ಕಳೆದ ಎರಡು ವರ್ಷಗಳಿಂದ ನಡೆದ ದಿಶಾ ಸಭೆಗಳ ನಿರ್ಣಯಗಳಂತೆ ‘ಮಹತ್ವದ ಘೋಷಣೆ’ ಮಾಡಲಿದ್ದಾರೆ.
- ದಿನಾಂಕ:27.06.2016 ರಂದು ಕೇಂದ್ರ ಸರ್ಕಾರ ದಿಶಾ ಸಮಿತಿ ರಚಿಸಿರುವುದರಿಂದ ಪ್ರತಿ ವರ್ಷ ಜುಲೈ ತಿಂಗಳು ‘ದಿಶಾ ಸಂಸ್ಥಪನಾ ದಿನಾಚರಣೆ’ ಮಾಡುವ ಮೂಲಕ ದೇಶಕ್ಕೆ ಮಾದರಿ ಯಾಗಲಿದ್ದಾರೆ.
- ತುಮಕೂರು ಜಿಲ್ಲಾ ಮಟ್ಟದ ‘ದಿಶಾ ಪೋರ್ಟಲ್’ ನ್ನು ವಿಶೇಷ ಮಾದರಿಯಲ್ಲಿ ವೆಬ್ ಸೈಟ್ ಮಾಡಿ 2022 ರೊಳಗೆ ಸಂಪೂರ್ಣ ಮಾಹಿತಿ ಅಫ್ ಲೋಡ್ ಮಾಡಲು ಚಾಲನೆ ನೀಡಲಿದ್ದಾರೆ.
- ಪ್ರತಿಯೊಂದು ಇಲಾಖೆಯವರು ಡಿಜಿಟಲ್ ಲೈವ್ ಮಾಹಿತಿ ಅಫ್ ಲೋಡ್ ಮಾಡಲು ಲಾಗಿನ್ ಪಾಸ್ ವಾರ್ಡ್ ನೀಡಿ ಯಾವ ರೀತಿ ಅಫ್ ಲೋಡ್ ಮಾಡ ಬಹುದು ಎಂಬ ಬಗ್ಗೆ ‘ಲಾಗಿನ್ ಪಾಸ್ ವರ್ಡ್ ಆಂದೋಲನ’ ಆರಂಭಿಸಲಿದ್ದಾರೆ.
- ಕೇಂದ್ರ ಸರ್ಕಾರ 2014 ರಿಂದ 2024 ರವರೆಗೆ ಕಾಲಮಿತಿ ಘೋಷಣೆ ಮಾಡಿರುವ ಹಲವಾರು ಯೋಜನೆಗಳ ಜಾರಿ ಮಾಡುವ ಮೂಲಕ ‘2022 ರ ಗಡುವಿನ ಯಶಸ್ಸಿ’ಗೆ ಆಂದೋಲನ ಆರಂಭ ಮಾಡಲಿದ್ದಾರೆ.
- 2022 ರ ವೇಳೆಗೆ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ‘75 ಯೋಜನೆಗಳನ್ನು ಉದ್ಘಾಟನೆ’ ಮಾಡಲು ಯೋಜನೆಗಳ ಪಟ್ಟಿ ಮಾಡಲು ಆರಂಭಿಸಿಲಿದ್ದಾರೆ.
- 2024 ರ0ಳಗೆ ದೇಶದ ಎಲ್ಲಾ ಮನೆಗೂ ನಲ್ಲಿ ನೀರು ಸರಬರಾಜು ಮಾಡುವ ಜಲಜೀವನ್ ಮಿಷನ್ ಯೋಜನೆಯ ‘ವಿಲೇಜ್ ಆಕ್ಷನ್ ಪ್ಲಾನ್’ ಮಾಡಲು ಆಂದೋಲನ ಆರಂಭಿಸಿಲಿದ್ದಾರೆ.
- ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಮತ್ತು ಯೋಜನಾವಾರು ಪರಿಣಿತರು ತಮ್ಮ ಸಲಹೆ ಅಭಿಪ್ರಾಯಗಳನ್ನು ಲೋಕಸಭಾ ಸದಸ್ಯರ ಅಧಿಕೃತ ‘ಸೋಶಿಯಲ್ ಮೀಡಿಯಾ’ ಮೂಲಕ ನೀಡುವ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ.
- 2022 ರ ವೇಳೆಗೆ ಪೂರ್ಣ ಪ್ರಮಾಣದ ‘ಅಭಿವೃದ್ಧಿ ವಾರ್ ರೂಮ್’ ಆರಂಭಿಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ.
- 2022 ರ ವೇಳೆಗೆ ತುಮಕೂರು ಜಿಲ್ಲೆಯನ್ನು ‘ಡಿಜಿಟಲ್ ಡಾಟಾ ಜಿಲ್ಲೆ’ ಎಂದು ಘೋಶಿಸಲು ವಿವಿಧ ಯೋಜನಾವಾರು 75 ಸಭೆಗಳನ್ನು ಮಾಡುವ ಪರಿಕಲ್ಪನೆಗೆ ಚಾಲನೆ ನೀಡಲಿದ್ದಾರೆ.