22nd December 2024
Share

TUMAKURU:SHAKTHIPEETA FOUNDATION

ನಿನ್ನೆ ನಾನು ಆಯುಷ್ ಥೀಮ್ ಪಾರ್ಕ್’ ಬಗ್ಗೆ  ಬರೆದ ಆರ್ಟಿಕಲ್ ಗೆ ಹಲವಾರು ಜನರು ಉತ್ತಮವಾದ ಸಲಹೆಗಳನ್ನು ವೈಯಕ್ತಿಕವಾಗಿ ತಿಳಿಸಿದ್ದಾರೆ. ಅವರೆಲ್ಲರ ಸಲಹೆಗಳನ್ನು ಸ್ವೀಕರಿಸಲಾಗುವುದು.

ನಾಟಿ ವೈಧ್ಯರ ತಂಡವೊಂದರ ಪ್ರಮುಖರೊಬ್ಬರೂ ಮಾತನಾಡಿ, ಸಾರ್ ನಮಗೆ ಏನಾದರೂ ಮುಕ್ತಿಕೊಡಿಸಿ ನಾವುಗಳು ಪುರಾತನ ಕಾಲದಿಂದಲೂ ಗ್ರಾಮೀಣ ಪ್ರದೇಶಗಳ್ಲಿ ಸೇವೆ ಸಲ್ಲಿಸುತ್ತಿದ್ದೇವೆ ,ಯಾವುದೇ ಸರ್ಕಾರ ಇಂಥಹ ಕೊರೊನಾ ವೇಳೆಯಲ್ಲೂ ನಮ್ಮನ್ನು ನೋಡಲಿಲ್ಲ ಎಂಬ ಅಳಲನ್ನು ತೋಡಿಕೊಂಡಿದ್ದಾರೆ.

ರಾಜ್ಯದಲ್ಲಿ ನಾಟಿವೈದ್ಯರ ಸಂಘಟನೆಗಳು ಒಡೆದು ನಾಲ್ಕು ವಿಭಾಗಗಳು ಆಗಿವೆಯಂತೆ, ಅವರೆಲ್ಲರ ಅಭಿಪ್ರಾಯ ಪಡೆದು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತು ಪ್ರಧಾನಿಯವರಾದ  ಶ್ರೀ ನರೇಂದ್ರಮೋದಿಯವರಿಗೆ ಮನವಿ ಸಲ್ಲಿಸಲು ಚಿಂತನೆ ನಡೆಸಲಾಗಿದೆ.

ಆಗಸ್ಟ್ ತಿಂಗಳಲ್ಲಿ ಸಭೆ ನಡೆಸುವ ಬಗ್ಗೆ ನಾಟಿ ವೈದ್ಯರೊಬ್ಬರೂ ತಿಳಿಸಿದ್ದಾರೆ. ಅವರು ಶಕ್ತಿಪೀಠಕ್ಕೆ ಬಂದು ಶಕ್ತಿದೇವತೆಯ ಪ್ರಾರ್ಥನೆ ಮಾಡಿ, ನನ್ನ ಜೀವಮಾನದಲ್ಲಿ ನಾಟಿ ವೈದ್ಯರನ್ನು ಸರ್ಕಾರ ಗುರುತಿಸಿ ಒಂದು ಗುರುತಿನ ಪತ್ರ’ ನೀಡಿಸಲು ಶಕ್ತಿ ಕೊಡು ತಾಯಿ ಎಂದು ಪ್ರಾರ್ಥಿಸಿದ್ದಾರೆ.

ನಾನು ಈಗಾಗಲೇ ಅವರ ಮನವಿ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ಆರಂಭಿಸಿದ್ದೇನೆ.

ತಮ್ಮ ಸಲಹೆಗಳು ಮತ್ತು ಅನುಭವ ಹಂಚಿಕೊಳ್ಳಲು ಮನವಿ.