22nd December 2024
Share

TUMAKURU:SHAKTHIPEETA FOUNDATION

  ತುಮಕೂರು ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರ ಮಾದರಿಯಲ್ಲಿ ‘75 ನೇ ಸ್ರ್ಯಾತಂತ್ರ್ಯ ದಿವಸದ ಅಂಗವಾಗಿ 75 ಯೋಜನಾವಾರು/ವಿಷಯವಾರು ದಿಶಾ ಸಮಿತಿ ಸಭೆ ನಡೆಸಲು’ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ   ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಯಾವ ವಿಷಯಕ್ಕೆ ಸಂಭಂದಿಸಿದ ಯೋಜನೆಗಳಾಗಿರುತ್ತವೋ ಆಯಾ ಅಧಿಕಾರಿಗಳು ಯೋಜನಾವಾರು/ವಿಷಯವಾರು ಅವರ ಕಚೇರಿಯಲ್ಲಿ ಅಥವಾ ಸ್ಥಳ ಸಾಕಾಗದೆ ಇದ್ದಲ್ಲಿ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ದಿಶಾ ಸಮಿತಿ ಸಭೆಗಳನ್ನು ಕರೆಯಲು ಚಿಂತನೆ ನಡೆಸಿದ್ದಾರೆ.

ಯೋಜನೆಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಇದು ಬಹಳ ಉಪಕಾರಿಯಾಗಲಿದೆ. 75 ಸಭೆಗಳನ್ನು ಆಯೋಜಿಸಲು ಒಂದು ವಿಷನ್ ಗ್ರೂಪ್ ರಚಿಸಲು ಸಹ ಉದ್ದೇಶಿಸಿದ್ದಾರೆ.

ಈ ಎಲ್ಲಾ ಸಭೆಗಳ ಮಾಹಿತಿ ಮತ್ತು ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಸಂಸದರ ವೆಬ್ ಸೈಟ್/ದಿಶಾ ಪೋರ್ಟಲ್‍ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಸಾರ್ವಜನಿಕರಿಗೂ ವೀಕ್ಷಣೆಗೆ ಅವಕಾಶ ಕಲ್ಪಿಸಲಿದ್ದಾರೆ.