22nd December 2024
Share

TUMAKURU:SHAKTHIPEETA FOUNDATION

   ತುಮಕೂರು ಜಿಲ್ಲಾ ದಿಶಾ ಸಮಿತಿ 2022 ರೊಳಗೆ ತುಮಕೂರು ಜಿಲ್ಲೆಯನ್ನು ಡಾಟಾ ಜಿಲ್ಲೆ’ ಎಂದು ಘೋಶಿಸಲು ನಿರ್ಣಯ ಕೈಗೊಂಡಿದೆ. ದಿಶಾ ಸದಸ್ಯ ಕಾರ್ಯದರ್ಶಿಯವರಾದ ಜಿಲ್ಲಾ ಪಂಚಾಯತ್ ಸಿಇಓ ರವರಿಗೆ ದಿಶಾ ಸಭೆಯಲ್ಲಿ ಏನೇನು ಮಾಡಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.

ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತೊಮ್ಮೆ ಪತ್ರ ಬರೆದು ಯಾವ ಇಲಾಖೆ ಯಾವ ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ  ಸಲಹೆ ನೀಡಿದ್ದಾರೆ. ಆದರೇ ಎನ್.ಐ.ಸಿ ಮತ್ತು ಎನ್.ಆರ್.ಡಿ.ಎಂ.ಎಸ್ ನಲ್ಲಿ ನೌಕರರ ಕೊರತೆಯಿದೆ. ನೌಕರರು ಇಲ್ಲದೆ ಕೆಲಸ ಮಾಡಲು ಸಾದ್ಯಾವಾಗುವುದಿಲ್ಲಾ. ಬೇರೆ,À ಬೇರೆ ಇಲಾಖೆಯವರ ಡಾಟಾ ಅಫರೇಟರ್ ಬಳಸಿಕೊಳ್ಳುವುದು ಹಾಗೂ ಒಂದು ವರ್ಷದ ಅವಧಿಗೆ ಅಗತ್ಯವಿರುವ ನೌಕರರನ್ನು ನೇಮಿಸಿಕೊಳ್ಳುವುದು ಅಗತ್ಯವಾಗಿದೆ.

ಇಲ್ಲದೇ ಇದ್ದಲ್ಲಿ ಬಾಯಿ ಮಾತಿನಲ್ಲಿ ಡಾಟಾ ಜಿಲ್ಲೆ ನಶಿಸಿ ಹೋಗಲಿದೆ’. ಅದ್ದರಿಂದ ಕೂಡಲೇ ಶೀಘ್ರವಾಗಿ ಈ ಸಮಸ್ಯೆ ಬಗ್ಗೆ ಒಂದು ನಿಧಾರ ಕೈಗೊಳ್ಳುವಿರಾ? ಸರ್ಕಾರದಲ್ಲಿ ನೌಕರರನ್ನು ನೇಮಿಸಿಕೊಳ್ಳಲು ಸಾದ್ಯವಾಗದೇ  ಇದ್ದಲ್ಲಿ ಸಂಸದರೇ ಅಗತ್ಯ ನೌಕರರನ್ನು ನೇಮಿಸಿಕೊಳ್ಳಲು ಸರ್ಕಾರದ ಗಮನ ಸೆಳೆಯಲಿದ್ದಾರೆ , ದಯವಿಟ್ಟು ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಮನವಿ.

ಈ ಪತ್ರದಲ್ಲಿರುವ ಎಲ್ಲಾ ಇಲಾಖೆಗಳ ಸಭೆ ಕರೆದು ಚರ್ಚಿಸಲು ಮತ್ತೊಮ್ಮೆ ಜಿಲ್ಲಾಧಿಕಾರಿ ಶ್ರೀ ವೈ.ಎಸ್. ಪಾಟೀಲ್ ರವರು ಮತ್ತು ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಶ್ರೀ ಮತಿ ವಿದ್ಯಾಕುಮಾರಿ ರವರಲ್ಲಿ ಮನವಿ.