25th April 2024
Share

TUMKURU:SHAKTHI PEETA FOUNDATION

ತುಮಕೂರು ಜಿಲ್ಲಾ ದಿಶಾ ಸಮಿತಿ ತುಮಕೂರು ಸಂಸದರಿಗೆ ಒಂದು ವೆಬ್ ಸೈಟ್ ರಚಿಸಿದೆ. ಸ್ವಾತ0ತ್ರ್ಯ ಬಂದಾಗಿನಿಂದ ಯಾವ ಸಂಸದರು ತುಮಕೂರು ಜಿಲ್ಲೆಗೆ ಯಾವ ಯೋಜನೆ ಕೊಡುಗೆ ನೀಡಿದ್ದಾರೆ. ಅವರು ಯಾವ ರೀತಿ ಕ್ಷೇತ್ರದ ಮತದಾರ ಪ್ರಭುಗಳಿಗೆ ಶ್ರಮಿಸಿದ್ದಾರೆ ಎಂಬ ಇಂಚಿಂಚು ಮಾಹಿತಿಯನ್ನು ಅಪ್ ಡೇಟ್ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈಗಿನ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ನಾನೂ ಇನ್ನೂ ಏನು ಮಾಡಬೇಕು’ ಎಂಬ ಬಗ್ಗೆ ಸಲಹೆ ನೀಡಲು ಸಾರ್ವಜನಿಕರಿಗೆ, ಸಂಘ ಸಂಸ್ಥೆಗೆಗಳಿಗೆ ಮತ್ತು ಇಲಾಖಾ ಅಧಿಕಾರಿಗಳು ಮನವಿಯನ್ನು ಮಾಡಿದ್ದಾರೆ. ಮುಂದಿನ ತಿಂಗಳಿನಿಂದ ಈ ವೆಬ್ ಸೈಟ್ ಸಾರ್ವಜನಿಕರಿಗೂ ಮುಕ್ತವಾಗಲಿದೆ.

ಆದರಿಂದ ಮೊದಲು ಎಲ್ಲಾ ಇಲಾಖೆಗಳು ಲಾಗಿನ್ ಪಾಸ್‍ವರ್ಡ್ ಪಡೆದು ಮಾಹಿತಿಗಳನ್ನು ಅಪ್ ಡೇಟ್ ಮಾಡುವ ಡಿಜಿಟಲ್ ಆಂದೋಲನ ಆರಂಭವಾಗಿದೆ. ಇದೇ ರೀತಿ 5 ನೇ ಬಾರಿ ಲೋಕಸಭಾ ಸದಸ್ಯರಾದ ನಂತರ ಸಂಸದರ ಕಚೇರಿಯ ಎಲ್ಲ ವ್ಯವಹಾರಗಳನ್ನು ಅಪ್ ಡೇಟ್ ಮಾಡಬೇಕಿದೆ. ಸಂಸದರ ಆಪ್ತ ಸಹಾಯಕ ರಿಂದ ಆರಂಭಿಸಿ ವಾಹನದ ಸಾರಥಿ ರವರು ಅಪ್ ಡೇಟ್ ಮಾಡುವ ವಿಚಾರದಲ್ಲಿ ಚರ್ಚಿಸಿ, ಇರುವ ಪೋಟೋಗಳು, ಪತ್ರ ಬರೆದ ಮಾಹಿತಿಗಳು, ಇತ್ಯಾದಿ ಎಲ್ಲಾ ವಿವರಗಳನ್ನು ಯೋಜನಾವಾರು ಪ್ರಕಟಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ.

ದಿಶಾ ಸಮಿತಿ ಸದಸ್ಯರು ಹಾಗೂ ಅಭಿವೃದ್ಧಿ ಚಿಂತಕರಾದ ಶ್ರೀ ಟಿ.ಆರ್.ರಘೋತ್ತಮರಾವ್ ಅವರ ಸಹಕಾರ ಪಡೆದು ಜುಲೈ 30 ರೊಳಗೆ ಎಲ್ಲಾ ಮಾಹಿತಿ ಅಪ್ ಡೇಟ್ ಮಾಡುವ ಮೂಲಕ ಇತರೆ ಇಲಾಖೆಯ ಅಧಿಕಾರಿಗಳಿಗೆ ಮಾರ್ಗದರ್ಶಕರಾಗಿ ಹಾಗೂ ಎಚ್ಚರಿಕೆಯ ಗಂಟೆಯೂ ಆಗಬೇಕಿದೆ.’

75 ನೇ ಸ್ವಾತ0ತ್ರ್ಯ  ದಿನಾಚರಣೆ ಅಂಗವಾಗಿ ನಡೆಸುವ 75 ಸಭೆಗಳ ಬಗ್ಗೆ ಸಂಸದರು ಬರೆದ ಪತ್ರ ಮತ್ತು ಪಾಲೋ ಮಾಡಿದ ವಿವರಗಳನ್ನು ಅಪ್ ಡೇಟ್ ಮಾಡಿ. ಅಧಿಕಾರಿಗಳೊಂದಿಗೆ ಸನಮಾಲೋಚನೆ ನಡೆಸಿದ ಪೋಟೋಗಳನ್ನು ಸಹ ಅಪ್‍ಡೇಟ್ ಮಾಡಿ. ಇವೆಲ್ಲಾ ಮುಂದಿನ ಸಭೆಯಲ್ಲಿ ಚರ್ಚಿಸಲು ದಾಖಲೆಗಳಾಗಲಿವೆ.

ಮುಂದಿನ ಸಭೆಯಲ್ಲಿ ಸಂಸದರ ಕಚೇರಿಯ ನೌಕರರು ಸಹ ಪಾಲನಾ ವರದಿ ನೀಡಬೇಕಾಗಿದೆ. ಮೊದಲು ನಿಮ್ಮ ಕಚೇರಿಯು ಶಿಸ್ತಿನಿಂದ ನಡೆಯುವುದು ಅನಿವಾರ್ಯವಾಗಿದೆ. ಈಗಾಗಲೇ ನಾನು ಸ್ಪಷ್ಟವಾಗಿ ತಿಳಿಸಿದ್ದೇನೆ.