ಶಕ್ತಿಪೀಠ ಕ್ಯಾಂಪಸ್ ಕಲ್ಲಿನ ಕೋಟೆ ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವುದರಿಂದ, ಬಾರತ ದೇಶದಲ್ಲಿರುವ ಎಲ್ಲಾ ವಿಧವಾದ ರಾಕ್ಸ್ ಕಲೆಕ್ಷನ್ ಸೆಂಟರ್ ಮಾಡಬೇಕೆಂಬ ಚಿಂತನೆ ಮೊಳಕೆಯೊಡಿದಿದೆ.
ಕ್ಯಾಂಪಸ್ ನಲ್ಲಿ ಸುಮಾರು 2755 ಮೀ ರಸ್ತೆ, ದಾರಿ ಮತ್ತು ವಾಕಿಂಗ್ ಪಾತ್ ಬರಲಿದೆ. ರಸ್ತೆಗೆ ಟಾರ್, ಸಿಮೆಂಟ್ ಹಾಕುವ ಬದಲು ವಿವಿಧ ಜಾತಿಯ ಚಪ್ಪಡಿಗಳನ್ನು ಹಾಕುವ ಮೂಲಕ ರಾಕ್ಸ್ ಸಂಗ್ರಹಣೆ ಮಾಡಬೇಕೆ ಅಥವಾ ಕ್ಯಾಂಪಸ್ ಸುತ್ತಲೂ ಬಂಡೆಗಳ ಗುಡ್ಡೆಗಳನ್ನು ಮಾಡಬೇಕೆ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.
ಇದು ಒಂದೆರಡು ತಿಂಗಳುಗಳಲ್ಲಿ ಆಗುವ ಕೆಲಸ ಅಲ್ಲ, ಆದರೂ ದೇಶದಲ್ಲಿ ಎಷ್ಟು ಜಾತಿಯ ಬಂಡೆಗಳು ಇವೆ, ಅವುಗಳು ಎಲ್ಲೆಲ್ಲಿ ಇವೆ, ಹೇಗೆ ಸಂಗ್ರಹಣೆ ಮಾಡಬೇಕಾಗುವುದು, ಎಷ್ಟು ಹಣ ಖರ್ಚಾಗಬಹುದು, ಎಂಬ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಆರಂಭವಾಗಿದೆ.
ಬಂಡೆಗಳ ಸಂಗ್ರಹಣೆಯನ್ನು ಹೊರಗುತ್ತಿಗೆ ಆಧಾರದಲ್ಲಿ ನೀಡಲು ಯೋಚಿಸಲಾಗಿದೆ. ಆಸಕ್ತಿ ಇರುವವರು ಸಂಪರ್ಕಿಸಬಹುದು.