12th October 2024
Share

ಕುಂದರನಹಳ್ಳಿಯ ಡಾ.ಶಿವಕುಮಾರ ಸ್ವಾಮೀಜಿ ತಪೋವನದಲ್ಲಿ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಜಿಐಎಸ್ ಪಾಠ ಮಾಡಲಾಯಿತು.

TUMAKURU:SHAKTHIPEETA FOUNDATIN

ದಿನಾಂಕ:13.07.2021 ರಂದು ಜಲಜೀವನ್ ಯೋಜನೆಗೆ ಸಂಬಂದಿಸಿದಂತೆ  ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಭೆಯ ನಿರ್ಣಯದಂತೆ ಇಂದು ತುಮಕೂರು ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯಿತಿಗಳಿಗೂ ನಕ್ಷೆ ರವಾನಿಸಲು ಜಿಲ್ಲೆಯ ಎಲ್ಲಾ 10 ತಾಲೂಕಗಳ ಇಓಗಳಿಗೆ ನಕ್ಷೆಗಳನ್ನು ರವಾನಿಸುವ ಮೂಲಕ ತುಮಕೂರು ಜಿಲ್ಲಾ ಪಂಚಾಯತ್ ಮತ್ತು ಎನ್ ಆರ್ ಡಿಎಂಎಸ್ ಮಿಂಚಿನ ವೇಗದಲ್ಲಿ ಕೆಲಸ ಆರಂಭಿಸಿದೆ.

330 ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಗಳು ಸಹ ಇದೇ ವೇಗದಲ್ಲಿ ತಮ್ಮ ವ್ಯಾಪ್ತಿಗೆ ಬರುವ ನೀರಿಗೆ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳ ಮಾಹಿತಿಗಳನ್ನು ಕರಾರು ವಕ್ಕಾಗಿ ನಕ್ಷೆಯಲ್ಲಿ ನಮೂದಿಸಬೇಕಿದೆ. ಮೊದಲನೇ ಹಂತದಲ್ಲಿ ಪ್ರಿಹ್ಯಾಂಡ್ ನಕ್ಷೆ ಸಿದ್ಧಪಡಿಸಿ, ನಂತರ ಜಿಐಎಸ್ ಆಧಾರಿತ ನಕ್ಷೆ ಮಾಡಬಹುದಾಗಿದೆ. ಇದು ಜಲಜೀವನ್ ಮಿಷನ್ ಮಾರ್ಗದರ್ಶಿ ಸೂತ್ರದಲ್ಲಿಯೇ ಇದೆ.

ದಿನಾಂಕ:24.06.2021 ರಂದು  ಜಲಜೀವನ್ ಯೋಜನೆಗೆ ಸಂಬಂದಿಸಿದಂತೆ  ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಭೆಯಲ್ಲಿ ಒಂದು ತಿಂಗಳ ಕಾಲಮಿತಿ ನಿಗದಿ ಪಡಿಸಲಾಗಿತ್ತು. ಸುಮಾರು 20 ದಿವಸಗಳು ಕಳೆದರೂ ನಕ್ಷೆಗಳನ್ನು ಪಂಚಾಯಿತಿಗಳಿಗೆ ಕಳುಹಿಸಿರಲಿಲ್ಲ. ನಿನ್ನೆ ಪುನಃ ಸಭೆ ನಡೆಸಿದ ಸಂಸದರಾದ  ಶ್ರೀ ಜಿ.ಎಸ್.ಬಸವರಾಜ್ ರವರು ಅಧಿಕಾರಿಗಳ ಮನಸ್ಸು ಗೆಲ್ಲುವ ಮೂಲಕ ಕಾಲಮಿತಿ ಬಗ್ಗೆ ಗಮನ ಸೆಳೆದಿದ್ದರು.

  ಒಂದೇ ದಿವಸದಲ್ಲಿ ರವಾನಿಸಿ ಇಮೇಲ್ ಸಾಕ್ಷಿ ನೀಡುವ ಮೂಲP ಕಾಲಮಿತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇಓಗಳು ಸಭೆ ನಡೆಸಿ ಮಿಷನ್ ಅಂತ್ಯೋದಯ ಯೋಜನೆಯ 148 ಅಂಶಗಳ ಬಗ್ಗೆ ನಕ್ಷೆಯಲ್ಲಿ ನಮೂದಿಸಿದರೆ ಬಹುತೇಕ ನೀರಿನ ಯೋಜನೆಗಳು ಅಲ್ಲಿಯೇ ಇರಲಿವೆ.

ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿರುವುದರಿಂದ ಎಲ್ಲಾ ಮಾಹಿತಿಗಳನ್ನು ಜಿಐಎಸ್ ಆಧಾರದಲ್ಲಿ ನಕ್ಷೆಗೆ ನಮೂದಿಸಲು ನೋಡೆಲ್ ಆಫಿಸರ್ ಶ್ರೀ ರಮೇಶ್ ರವರು ಪಂಚಾಯಿತಿ ಪಿಡಿಓ ರವರಾದ ಶ್ರೀ ಮತಿ ತನುಜರವರಿಗೆ ಈಗಾಗಲೇ ಸೂಚಿಸಿದ್ದಾರೆ. ನಾನು ಸಹ ಪಿಡಿಓ ರವರಿಗೆ ಜಿಐಎಸ್ ಪಾಠ ಮಾಡಿದ್ದೇನೆ,

ಪಿಡಿಓ ರವರು ಒಂದು ವಾರದೊಳಗೆ ಎಷ್ಟೆ ಕಷ್ಟವಾದರೂ ಮಾಹಿತಿಗಳ ತಾಜಾ ಡಾಟಾ ಸಂಗ್ರಹಿಸುವ ಭರವಸೆ ನೀಡಿದ್ದಾರೆ. ನೋಡೋಣ?