16th September 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ದಿಶಾ ಮಾನಿಟರಿಂಗ್ ಸೆಲ್

ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷ ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯ ಕೆಲವು ಪ್ರಮುಖ ಅಂಶಗಳ ಮಾಹಿತಿ.

ದಿನಾಂಕ:15.08.2021 ರೊಳಗೆ ಜಿಲ್ಲಾ ಪಂಚಾಯತ್ ಕಚೇರಿ ಕಟ್ಟಡದಲ್ಲಿ ತುಮಕೂರು ಜಿಲ್ಲಾ ದಿಶಾ ಮಾನಿಟರಿಂಗ್ ಸೆಲ್ ಆರಂಭವಾಗಲಿದೆ. ದಿನಾಂಕ:15.08.2022 ರೊಳಗೆ ತುಮಕೂರು ಜಿಲ್ಲೆ ಡಿಜಿಟಲ್ ಲೈವ್ ಡಾಟಾ ಜಿಲ್ಲೆಯಾಗಿ ಘೋಷಣೆಯಾಗಲಿದೆ. ತುಮಕೂರು ಜಿಲ್ಲಾ ದಿಶಾ ಮಾನಿಟರಿಂಗ್ ಸೆಲ್ ಗೆ ಆರಂಭಿಕ ವೆಚ್ಚಗಳಿಗಾಗಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಅನುದಾನ ಕೊಡುವ ಭರವಸೆ ನೀಡಿದ್ದಾರೆ. ಪೂರ್ಣ ಪ್ರಮಾಣದ ಅನುದಾನಕ್ಕಾಗಿ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ.

ತುಮಕೂರು ಜಿಲ್ಲೆ ಡಿಜಿಟಲ್ ಲೈವ್ ಡಾಟಾ ಜಿಲ್ಲೆ’ಯಾಗಿ ಘೋಷಣೆಯಾಗಬೇಕಾದರೆ ಏನೇನು ರೂಪುರೇಷೆ ಸಿದ್ಧತೆಯಾಗ ಬೇಕು ಎನ್ನುವ ಮಾಹಿತಿ ಇಲ್ಲಿದೆ.

ಇದರಿಂದ ಏನು ಪ್ರಯೋಜನ:

ತುಮಕೂರು ಜಿಲ್ಲೆಯ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ, ನಿರ್ಗತಿಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆ, ಅನಗತ್ಯ ಖರ್ಚುವೆಚ್ಚಗಳಿಗೆ ಕಡಿವಾಣ ಮತ್ತು ನೂರಾರು ಕೋಟಿ ಹಣದ ದುರ್ಭಳಕೆಗೆ ತಿಲಾಂಜಲಿ. ಒಬ್ಬ ಲೋಕಸಭಾ ಸದಸ್ಯ ಏನು ಮಾಡಬೇಕು?ಏನು ಮಾಡಬಹುದು? ಏನು ಮಾಡಿದ್ದಾರೆ? ಎಂಬ ಅಭಿವೃದ್ಧಿ ಮಾಹಿತಿ ಬೆರಳ ತುದಿಯಲ್ಲಿ ಪ್ರತಿಯೊಬ್ಬರಿಗೂ ತಲುಪುವ ಪಾರದರ್ಶಕ ವ್ಯವಸ್ಥೆ ಮತ್ತು ದಿಶಾ ಗ್ರಂಥಾಯಲದಲ್ಲಿ ಎಲ್ಲರಿಗೂ ಅಧ್ಯಯನ ಮಾಡಲು ದಾಖಲೆಗಳು ಲಭ್ಯವಾಗಲಿವೆ.

ಎನ್.ಐ.ಸಿ:

 ಜಿಲ್ಲಾ ದಿಶಾ ಮಾನಿಟರಿಂಗ್ ಸೆಲ್ ಗಾಗಿ ಇಬ್ಬರು ಡೆವಲಪರ್‍ಗಳನ್ನು ಒಂದು ವರ್ಷದವರೆಗೆ ನೇಮಿಸಿಕೊಳ್ಳಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಜಿಲ್ಲಾಧಿಕಾರಿ, ಸಿಇಓ, ಸಿಪಿಓ, ಅಂಕಿ ಅಂಶಗಳ ಇಲಾಖೆ ಅಧಿಕಾರಿ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ರವರ ಸಮ್ಮುಖದಲ್ಲಿ ರೂಪುರೇಷೆ ನಿರ್ಧರಿಸುವುದು. ಇವರಿಗೆ ವೇತನದ ಬಗ್ಗೆ  ಸಭೆ ನಡೆಸಿ ಸರ್ಕಾರ ಅಥವಾ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅಂತಿಮ ನಿರ್ಧಾರ ಕೈಗೊಳ್ಳುವುದು.

ದಿನಾಂಕ:24.07.2021 ರೊಳಗೆ 330 ಗ್ರಾಮ ಪಂಚಾಯಿತಿ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ನೀರು ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಪಾಸ್‍ವರ್ಡ್ ನೀಡಿ ಸೂಕ್ತ ತರಬೇತಿ ನೀಡುವುದು.

ದಿನಾಂಕ:15.08.2021 ರೊಳಗೆ ತುಮಕೂರು ಜಿಲ್ಲೆಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಪಾಸ್‍ವರ್ಡ್ ನೀಡಿ ಸೂಕ್ತ ತರಬೇತಿ ನೀಡುವುದು.

(ಕ್ರಮ: ಜಿಲ್ಲಾಧಿಕಾರಿ)

ಎನ್.ಆರ್.ಡಿ.ಎಂ.ಎಸ್ ಮತ್ತು ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್:

ಇದೂವರೆಗೂ ಸಿದ್ಧಪಡಿಸಿರುವ ಎಲ್ಲಾ ಇಲಾಖೆಗಳ ವಿವಿಧ ಜಿಐಎಸ್ ಲೇಯರ್ ಸಹಿತ 330 ಗ್ರಾಮಪಂಚಾಯಿತಿ ನಕ್ಷೆಗಳನ್ನು ಗ್ರಾಮಪಂಚಾಯಿತಿಗಳಿಗೆ ರವಾನಿಸುವುದು.

ಎಲ್ಲಾ ತಾಲ್ಲೂಕುಗಳ ಇಓಗಳು ನಿರಂತರವಾಗಿ ಸಭೆ ನಡೆಸಿ, ಲೇಯರ್ ಪರಿಶೀಲಿಸಿ ಗ್ರಾಮ ಪಂಚಾಯಿತಿಗಳು ನಿಖರವಾದ ಮಾಹಿತಿ ಅಪ್‍ಲೋಡ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದು.

ಮೊದಲನೇ ಹಂತದಲ್ಲಿ ಪ್ರತಿ ಗ್ರಾಮಪಂಚಾಯಿತಿ ಪಿಡಿಓಗಳು ಗ್ರಾಮ ನೀರು ಸರಬರಾಜು ಮತ್ತು ಗ್ರಾಮ ನೈರ್ಮಲ್ಯ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿ ನೀರು ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳ ಬಗ್ಗೆ ಸಮಾಲೋಚನೆ ನಡೆಸುವುದು, ಪ್ರಿಹ್ಯಾಂಡ್ ನಕ್ಷೆ ತಯಾರಿಸಿ ಗ್ರಾಮವಾರು, ಸರ್ವೆ ನಂಬರ್ ವಾರು ನಕ್ಷೆಯಲ್ಲಿ ನಮೂದಿಸಿ ಇಂಡೆಕ್ಸ್ ಸಿದ್ಧಪಡಿಸುವುದು. ನಂತರ ಜಿಐಎಸ್ ಲೇಯರ್ ಗಳನ್ನು ಎನ್.ಆರ್.ಡಿ.ಎಂ.ಎಸ್ ನಲ್ಲಿ ಅಪ್ ಲೋಡ್ ಮಾಡುವುದು.

(ಕ್ರಮ: ಜಿಲ್ಲಾ ಪಂಚಾಯತ್ ಸಿಇಓ & ಡಿಎಸ್-2)

ಕೆ.ಎಂ.ಡಿ.ಎಸ್ :

ತುಮಕೂರು ಜಿಲ್ಲೆಯ ಎಲ್ಲಾ 11 ನಗರ ಸ್ಥಳೀಯ ಸಂಸ್ಥೆಗಳ ನಕ್ಷೆಯಲ್ಲಿ ಹಾಲಿ ಇರುವ ಎಲ್ಲಾ ಮಾಹಿತಿಗಳ ಜಿಐಎಸ್ ಲೇಯರ್ ತಪಾಸಣೆ ನಡೆಸುವುದು.

ಮೊದಲನೇ ಹಂತದಲ್ಲಿ ನೀರು ಮತ್ತು ಕುಡಿಯುವ ನೀರಿನ ಎಲ್ಲಾ ಲೇಯರ್‍ಗಳನ್ನು ಸಭೆಯಲ್ಲಿ ಸಮಾಲೋಚನೆ ಮಾಡಿ, ಅಂತಿಮ ಗೊಳಿಸುವುದು.

ತುಮಕೂರು ಸ್ಮಾರ್ಟ್ ಸಿಟಿ ಸಿದ್ಧಪಡಿಸುರುವ ಎಲ್ಲಾ ಜಿಐಎಸ್ ಲೇಯರ್ ಬಗ್ಗೆ ತಪಾಸಣೆ ಮಾಡಿ ವರದಿ ನೀಡುವುದು. ಐಸಿಸಿಸಿಯ ರೂಪುರೇಷೆಗಳ ಬಗ್ಗೆ ವರದಿ ನೀಡುವುದು.

ಯಾರು ಯಾರು ಏನೇನು ಮಾಡಬೇಕು ಎಂಬ ಬಗ್ಗೆ ಹಂಚಿಕೆ ಮಾಡಿ ದಿನಾಂಕ:24.07.2021 ರೊಳಗೆ  ಪೋನ್  ರ್ ಸಹಿತ ಪಟ್ಟಿ ನೀಡುವುದು.

(ಪಿಡಿ.ಜಿಲ್ಲಾ ನಗರಾಭಿವೃದ್ಧಿ ಕೋಶ)

ಉಪಸಮಿತಿ ರಚನೆ:

2022 ರ ಅಗಸ್ಟ್ ವೇಳೆಗೆ ತುಮಕೂರು ಜಿಲ್ಲೆಯನ್ನು ಜಿಐಎಸ್ ಡಾಟಾ ಜಿಲ್ಲೆ ಎಂದು ಘೋಶಿಸಲು ನಿರ0ತರವಾಗಿ ಶ್ರಮಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾ ಪಂಚಾಯತ್ ಸಿಪಿಓ, ಅಂಕಿ ಅಂಶಗಳ ಇಲಾಖೆ ಅಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಪಿಡಿ, ಎನ್.ಐ.ಸಿ, ಎನ್.ಆರ್.ಡಿ.ಎಂ.ಎಸ್, ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ಕೆ.ಎಂ.ಡಿ.ಎಸ್  ಮತ್ತು ಕುಂದರನಹಳ್ಳಿ ರಮೇಶ್ ರವರು ಸೇರಿದಂತೆ ಒಂದು ಉಪಸಮಿತಿ ರಚಿಸುವುದು. ಈ ಹಿಂದೆ ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಜಿಐಎಸ್ ಗೆ ಸಂಬಂಧಿಸಿದಂತೆ ನಡೆದ ವಾರಕ್ಕೊಂದು ಅಥವಾ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ವಾರಕ್ಕೆ ಎರಡು ಸಭೆ ನಡೆಸಿ 2022 ರೊಳಗೆ ಸಂಪೂರ್ಣ ಮಾಹಿತಿಗಳನ್ನು ಡಿಜಿಟಲ್ ಲೈವ್ ಮಾಹಿತಿಗಳನ್ನು ಪೂರ್ಣಗೊಳಿಸುವುದು. ಈ ಸಭೆಗೆ ತುಮಕೂರು ಲೋಕಸಭಾ ಸದಸ್ಯರನ್ನು ಆಹ್ವಾನಿಸುವುದು.

ಪ್ರತಿ ಸಭೆಯ ನಡವಳಿಕೆ ಮಾಡಿ ತುಮಕೂರು ಜಿಲ್ಲಾ ದಿಶಾ ಪೋರ್ಟಲ್‍ನಲ್ಲಿ ಅಪ್ ಲೋಡ್ ಮಾಡುವುದು.

ಇದೂವರೆಗೂ ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯಗಳು ಮತ್ತು ವಿವಿಧ ಇಲಾಖಾವಾರು, ಯೋಜನೆವಾರು ನಡೆದ ಸಭೆಗಳ ವಿಷಯವಾರು ಪಾಲನಾ ವರದಿಗಳನ್ನು  ದಿಶಾ ಪೋರ್ಟಲ್ ನಲ್ಲಿ ಅಗಿದ್ದಾಂಗ್ಗೆ ಪ್ರಕಟಿಸುವುದು.

ಹೊಸ ಯೋಜನೆಗಳ ಪ್ರಸ್ತಾವನೆ:

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು,  ಕೇಂದ್ರ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲೆ ಲೋಕಸಭಾ ಸದಸ್ಯರಾದ ಶ್ರೀ ಎ.ನಾರಾಯಣ ಸ್ವಾಮಿರವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಶ್ರೀ ಡಿ.ಕೆ.ಸುರೇಶ್ ರವರು ಜಿಲ್ಲಾ ಉಸ್ತವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರುÀ ಮತ್ತು ಎಲ್ಲಾ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಕಚೇರಿಯಲ್ಲಿ ಸಂಪರ್ಕ ಮಾಡಿ ತುಮಕೂರು ಜಿಲ್ಲೆಗೆ ಸಂಭಂಧಿಸಿದ ಎಲ್ಲಾ ಯೋಜನೆಗಳ ಬಗ್ಗೆ ನಡೆದ ಪತ್ರ ವ್ಯವಹಾರಗಳನ್ನು ದಿನಾಂಕ:15.08.2021 ರೊಳಗೆ ದಿಶಾ ಪೋರ್ಟಲ್‍ನಲ್ಲಿ ಅಪ್ ಲೋಡ್ ಮಾಡುವುದು. 

(ಕ್ರಮ: ಪಿಡಿ ಜಿಲ್ಲಾ ಪಂಚಾಯತ್. ದಿಶಾ ಸಮಿತಿ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ರವರು ಮತ್ತು  ಶ್ರೀ ಟಿ.ಆರ್.ರಘೋತ್ತಮರಾವ್ ರವರ ಸಹಕಾರ ಪಡೆಯಬಹುದು)

ಪಾಸ್ ವರ್ಡ್ ಲಾಗಿನ್ ತರಬೇತಿ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಡಾಟಾ ಆಪರೇಟರ್ ಗಳಿಗೆ ತುಮಕೂರು ಜಿಲ್ಲಾ ದಿಶಾ ಪೋರ್ಟಲ್ ನಲ್ಲಿ ಮಾಹಿತಿ ಅಪ್ ಲೋಡ್ ಮಾಡಲು ಸೂಕ್ತ ತರಬೇತಿ ನೀಡುವುದು. ತುಮಕೂರು ಜಿಲ್ಲೆಯಲ್ಲಿ ಒಂದು ಇಂಚು ಭೂಮಿಯ ಮಾಲೀಕತ್ವ ಪಡೆದ ಎಲ್ಲಾ ಇಲಾಖೆಗಳು ಸಹ ಅವರ ಸ್ವತ್ತಿನ ಜಿಐಎಸ್ ಲೇಯರ್ ಅಫ್ ಲೋಡ್ ಮಾಡಲೇ ಬೇಕು ಮತ್ತು ಕೇಂದ್ರ ಸರ್ಕಾರದ ಯಾವುದೇ ಯೋಜನೆ ತುಮಕೂರು ಜಿಲ್ಲೆಯಲ್ಲಿ ಜಾರಿಗೆ ಬಂದಿದ್ದರೆ ಪೂರ್ಣ ಮಾಹಿತಿ ಅಪ್ ಲೋಡ್ ಮಾಡುವುದು ಇಲಾಖಾ ಅಧಿಕಾರಿಗಳ ಮತ್ತು ಡಾಟಾ ಆಪರೇಟರ್‍ಗಳ ಹೊಣೆಗಾರಿಕೆ ಯಾಗಿರುತ್ತದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಯಾವ ಇಲಾಖೆ ಅಧಿಕಾರಿ ಏನು ಮಾಡಬೇಕು ಎಂಬ ಬಗ್ಗೆ ಹೊಣೆಗಾರಿಕೆ ಹಂಚಿಕೆ ಮಾಡಿ  ಪೋನ್ ನಂಬರ್ ಸಹಿತಿ ಮಾಹಿತಿ ಅಪ್ ಲೋಡ್ ಮಾಡುವುದು.

(ಕ್ರಮ: ಸದಸ್ಯ ಕಾರ್ಯದರ್ಶಿ ದಿಶಾ ಸಮಿತಿ)

ಮಾದರಿ ಗ್ರಾಮ ಪಂಚಾಯಿತಿ

ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿರುವ ಐದು ಗ್ರಾಮ ಪಂಚಾಯಿತಿಗಳು ಮತ್ತು ಅಟಲ್ ಭೂಜಲ್ ಯೋಜನೆಯ ಮಾದರಿ ಗ್ರಾಮ ಪಂಚಾಯಿತಿಗಳನ್ನು ಮಾದರಿಯಾಗಿ ತಾಜಾ ಡಿಜಿಟಲ್ ಲೈವ್ ಮಾಹಿತಿಯನ್ನು ಅಪ್ ಲೋಡ್ ಮಾಡಲು ಸೂಕ್ತ ಕ್ರಮಕೈಗೊಳ್ಳುವುದು. ಅಗತ್ಯ ಬಿದ್ದಲ್ಲಿ ಜಿಐಎಸ್ ಹೊರಗುತ್ತಿಗೆ ಸೇವೆ ಪಡೆಯಬಹುದಾಗಿರುತ್ತದೆ. ದಿನಾಂಕ:15.08.2021 ರಂದು ‘ಡಿಜಿಟಲ್ ಲೈವ್ ಡಾಟಾ ಗ್ರಾಮಪಂಚಾಯಿತಿ’ ಗಳು ಎಂದು ಘೋಶಿಸುವುದು.

(ಕ್ರಮ: ಸಂಸದರ ಆದರ್ಶ ಗ್ರಾಮ ನೋಡೆಲ್ ಆಫಿಸರ್ಸ್ ಮತ್ತು ಇಇ ಸಣ್ಣ ನೀರಾವರಿ ಇಲಾಖೆ)