22nd December 2024
Share

TUMAKURU:SHAKTHIPEETA FOUNDATIN

ಶಕ್ತಿಪೀಠ ಕ್ಯಾಂಪಸ್ ನಲ್ಲಿರುವ ಸುಮಾರು 475 ಮೀಟರ್ ರಿಂಗ್ ರಸ್ತೆಯ ಸುತ್ತಲೂ ಆಯುಷ್ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು ರಸ್ತೆಯ ಕಡೆ ಅಲೋವೇರಾ ಹಾಕಿ ಪೂರ್ಣಗೊಳಿಸಲಾಯಿತು. ಎಷ್ಟು ಗುಣಿ ಲೋಳೆಸರ ಹಾಕಲಾಗಿದೆ ಎಂಬ ಬಗ್ಗೆ ಜಿಯೋ ಟ್ಯಾಗಿಂಗ್ ಮಾಡಲು ಸೂಚಿಸಲಾಗಿದೆ.

ಆಯುಷ್ ವನದ ಇನ್ನೊಂದು ಕಡೆ ಚಡೆ ಗಿಡ ಹಾಕಿ ವಿವಿಧ ಔಷಧಿ ಬಳ್ಳಿಗಳನ್ನು ಅÀಬ್ಬಿಸಲು ಚಿಂತನೆ ನಡೆಸಿ ಇಂದು ಚಡೆ ಬೀಜಗಳನ್ನು ಹಾಕಿಲಾಯಿತು. ಕ್ಯಾಂಪಸ್‍ನಲ್ಲಿ ಇರುವ ನಾಟಿಹಸುಗಳ ಗೋವುಗಳಿಗೂ ಚಡೆ ಗಿಡದ ಸೊಪ್ಪು ಉತ್ತಮ ಆಹಾರವಂತೆ.

ಕ್ಯಾಂಪಸ್‍ನಲ್ಲಿ ಈಗಾಗಲೇ ಇರುವ ನೂರಾರು ಬೇವಿನ ಮರಗಳಿಗೆ ಅಮೃತಬಳ್ಳಿ ಅÀಬ್ಬಿಸಲು ಸಹ ಇಂದಿನಿಂದ ಆರಂಭಿಸಲಾಯಿತು. ಬೇವಿನ ಮರದಲ್ಲಿ ಬೆಳೆಯುವ ಅಮೃತ ಬಳ್ಳಿಗೆ ವಿಶೇಷ ಸ್ಥಾನಮಾನ ಇದೆಯಂತೆ. ಇನ್ನೂ ಹಲವಾರು ಬೇವಿನ ಗಿಡಗಳನ್ನು ಹಾಕಲಾಗುವುದು. ಶಕ್ತಿದೇವತೆಗೆ ಬೇವಿನ ಮರಗಳ ವನವೇ ಬಹಳ ಇಷ್ಟ ಎಂಬುದು ಧಾರ್ಮಿಕ ಭಾವನೆ.

ತಾವು ಸಲಹೆ ನೀಡಲು ಈ ಮೂಲಕ ಕೋರಿದೆ.