1st October 2023
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ 2002 ರಲ್ಲಿಯೇ ದೇಶಾದ್ಯಾಂತ ನಾಟಿ ವೈದ್ಯರು, ಹಕೀಮರು ಮತ್ತು ಇತರ ಪಾರಂಪರಿಕ ವೈದ್ಯರು (ಮನುಷ್ಯರು ಮತ್ತು ಪ್ರಾಣಿಗಳು) ರನ್ನು ಗುರುತಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಜೊತೆಗೆ ಜೀವ ವೈವಿದ್ಯ ಪಾರಂಪರಿಕ ತಾಣಗಳನ್ನು ಗುರುತಿಸಲು ಕೋಟ್ಯಾನುಕೋಟಿ ಹಣ ಖರ್ಚು ಮಾಡುತ್ತಿದೆ.

ತಾಂತ್ರಿಕ ಬೆಂಬಲ ಗುಂಪುಗಳ ಸಹಕಾರದಿಂದ ಜನತಾ ಜೀವ ವೈವಿದ್ಯ ದಾಖಲಾತಿ(ಪಿಬಿಆರ್) ಮಾಡಲು ಒಂದು ಆಂದೋಲನವನ್ನೆ ಕೈಗೊಂಡಿದೆ. ಇದಕ್ಕೋಸ್ಕರ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಜೀವ ವೈವಿದ್ಯ ಪ್ರಾಧಿಕಾರ, ರಾಜ್ಯ ಮಟ್ಟದಲ್ಲಿ ರಾಜ್ಯ ಜೀವ ವೈವಿದ್ಯ ಮಂಡಳಿ ಮತ್ತು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳು, ನಗರ ಸ್ಥಳೀಯ ಸಂಸ್ಥೆಗ¼ ಮಟ್ಟದಲ್ಲಿ ಜೀವ ವೈವಿದ್ಯ ನಿರ್ವಹಣಾ ಸಮಿತಿಗಳನ್ನು ರಚಿಸಿ ಕಾರ್ಯ ಆರಂಭಿಸಿದೆಯಂತೆ.

ಹೌದು ನಾನೇ ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿದ್ದರೂ ಇನ್ನೂ ಆನೇಕ ಯೋಜನೆಗಳ ಅರಿವು ನನಗೂ ಆಗಿಲ್ಲ.ನಾಟಿ ವೈದ್ಯರು ನಮ್ಮ ಶಕ್ತಿಪೀಠ ಕ್ಯಾಂಪಸ್ ಗೆ ಬಂದು ಪ್ರತಿಜ್ಞೆ ಮಾಡಿ ನಾಟಿ ವೈದ್ಯರ ಡಾಟಾ ಬೇಸ್ ಮಾಡಿಸಿ ಒಂದು ಗುರುತಿನ ಪತ್ರ ನೀಡಿಸಲು ಮನವಿ ಮಾಡಿದ್ದರು.

ನಾನು ಈ ಬಗ್ಗೆ ಅವರಿಗೆ   ಏನಾದರೂ ಒಂದು ಅಂತಿಮ ರೂಪು ಕೊಡುವುದಾಗಿ ಖಚಿತ ಭರವಸೆ ನೀಡಿದ್ದೆ. ಈ ಹಿನ್ನಲೆಯಲ್ಲಿ ನಿನ್ನೆ ರಾಜ್ಯ ಜೀವ ವೈವಿದ್ಯ ಮಂಡಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದಾಗ, ಈ ಯೋಜನೆಯ ಮಾಹಿತಿ ಲಭ್ಯವಾಯಿತು. ಇದರ ಬಗ್ಗೆ ಕಚೇಯಲ್ಲಿದ್ದ ಟೆಕ್ನಿಕಲ್ ಎಕ್ಸಿಕ್ಯೂಟೀವ್ ಶ್ರೀ ಶಫೀಯವರನ್ನು ಕೇಳಿದಾಗ ಉನ್ನತ ಮಟ್ಟದ ಅಧಿಕಾರಿಗಳು ಇಂದು ಹಾಜರಿಲ್ಲ, ಅವರು ಬಂದ  ನಂತರ ಮಾತನಾಡಿ ವಿವರ ಹೇಳುವುದಾಗಿ ತಿಳಿಸಿದರು.

ವೆಬ್‍ಸೈಟ್‍ನಲ್ಲಿ ಗಮನಿಸಿದಾಗ ಪೂರ್ಣ ಪ್ರಮಾಣದ ಮಾಹಿತಿ ಲಭ್ಯವಾಯಿತು. ಮುಂದಿನ ದಿಶಾ ಸಮಿತಿಯಲ್ಲಿ ಈ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ.

About The Author