22nd December 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ ಎನ್.ಆರ್.ಎಲ್.ಎಂ ಮತ್ತು ಎನ್.ಯು.ಎಲ್.ಎಂ ಯೋಜನೆಯಡಿ ಮಹಿಳೆಯರು ಸಿದ್ಧಪಡಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಜಿಲ್ಲಾ ಕೇಂದ್ರಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ಧಾರಿ ಅಕ್ಕ-ಪಕ್ಕಗಳಲ್ಲಿ ಮಾರಾಟ ಮಳಿಗೆ ವ್ಯವಸ್ಥೆ ಮಾಡುವ ಮೂಲಕ ಆತ್ಮನಿರ್ಭರ ಯೋಜನೆಯಡಿ ಸಹಕಾರ ನೀಡಲು ಚಿಂತನೆ ನಡೆಸುತ್ತಿದೆ.

ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರ ಸಲಹೆ ಮೇರೆಗೆ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಮಾರಾಟ ಮಳಿಗೆ ನಿರ್ಮಾಣ ಮಾಡಲು ತುಮಕೂರು ಸ್ಮಾರ್ಟ್ ಸಿಟಿಯವರಿಗೆ ಸೂಚಿಸಿತ್ತು. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಹ ಸಕರಾತ್ಮಕ ನಿಲುವು ಹೊಂದಿದ್ದರೂ ಸೂಕ್ತ ನಿವೇಶನದ ಅಡಚಣೆಯಿಂದ ಯೋಜನೆ ನನೆಗುದಿಗೆ ಬಿದ್ದಿತು.

ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಜಾಗವನ್ನು ಪರಿಶೀಲಿಸಿದಾಗ, ಉದ್ದೇಶಿತ ಜಾಗ ಜಿಲ್ಲಾ ಪಂಚಾಯತ್ ಆವರಣಕ್ಕೆ ಬಿಹೆಚ್ ರಸ್ತೆಯಿಂದ ರಸ್ತೆ ಮಾಡಲು ಸೂಕ್ತವಾಗಿದೆ. ಆವರಣದಲ್ಲಿರುವ ಸುಮಾರು ಒಂದು ಎಕರೆಗೂ ಜಾಸ್ತಿ ಕಟ್ಟಡಗಳು ಹಾಳಾಗಿವೆ. ಇಲ್ಲಿ ಮಳಿಗೆ ನಿರ್ಮಾಣ ಮಾಡಿದರೆ ಹೇಗೆ ಎಂಬ ಚರ್ಚೆಯೂ ಆರಂಭವಾಯಿತು.ಇದೂವರೆಗೂ ಜಿಲ್ಲಾ ಪಂಚಾಯತ್ ಆವರಣದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿಲ್ಲ. ಒಂದೆರಡು ದಿವಸದಲ್ಲಿ ನೀಡುವ ಭರವಸೆಯನ್ನು ನೀಡಿದ್ದಾರೆ.

ಈ ಮಧ್ಯೆ ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣ ಮಾಡಿರುವ ತುಮಕೂರು ನಗರ ಗ್ರಂಥಾಲಯದ ಸರ್ಕಾರಿ ಕಟ್ಟಡವನ್ನು ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್‍ಗೆ ನೀಡಲು ಲೋಕೋಪಯೋಗಿ ಇಲಾಖೆ ನಿಗದಿ ಪಡಿಸುವ ದರವನ್ನು ಎಂ.ಎಸ್.ಎಂ.ಇ ಸಚಿವಾಲಯ ಗ್ರಂಥಾಲಯ ಇಲಾಖೆಗೆ ನೀಡುವ ಮಾದರಿಯಲ್ಲಿಯೇ,   ಮಹಾತ್ಮಗಾಂಧಿ ಸ್ಟೇಡಿಯಂ ಆವರಣದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣ ಮಾಡಿರುವ   ಸುಮಾರು 40000 ಚದುರ ಅಡಿ ಮಳಿಗೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಲೋಕೋಪಯೋಗಿ ಇಲಾಖೆ ನಿಗದಿ ಪಡಿಸುವ ದರವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೀಡಿದಲ್ಲಿ ಮಹಿಳೆಯ ಉತ್ಪನ್ನಗಳ ಮಾರಾಟಕ್ಕೆ ಬಳಸಬಹುದಾಗಿದೆ ಎಂಬ ಚಿಂತನೆ ನಡೆಯುತ್ತಿದೆ.

ಈ ವಿಚಾರವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದಾಗ ಇದೊಂದು ಅತ್ಯುತ್ತಮವಾದ ಸಲಹೆಯಾಗಿದೆ, ಜಿಲ್ಲಾಡಳಿತದಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಿದಲ್ಲಿ ಪರಿಶೀಲನೆ ಮಾಡುವ ಭರವಸೆಯನ್ನು ನೀಡಿದ್ದಾರೆ.

ದೇಶಾದ್ಯಾಂತ ಹಾಗೂ ರಾಜ್ಯಾದ್ಯಾಂತ ಯಾವ ಜಿಲ್ಲೆಯಲ್ಲಿ ಯಾವ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅನುದಾನದಿಂದ ಕಟ್ಟಡ ಮತ್ತು ಮೂಲಭೂತ ಸೌಕರ್ಯ ಒದಗಿಸಲಾಗಿದೆಯೇ ಅಥವಾ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆಯೇ ಎಂಬ ಬಗ್ಗೆ ತುಮಕೂರು ಜಿಲ್ಲಾಡಳಿತ ಮಾಹಿತಿ ಸಂಗ್ರಹ ಮಾಡುತ್ತಿದೆ.

ಸರ್ಕಾರಿ ಎಸ್.ಪಿ.ವಿ ಮೂಲಕ ಮಾರಾಟ ವ್ಯವಸ್ಥೆ ಮಾಡಬೇಕೆ ಅಥವಾ ಸರ್ಕಾರವೇ ನೇರವಾಗಿ ಎಸ್.ಹೆಚ್.ಜಿ.ಗಳಿಗೆ ಅಗತ್ಯವಿರುವ ಜಾಗವನ್ನು ನೀಡಬೇಕೆ ಅಥವಾ ಮಹಿಳೆಯರ ಉತ್ಪನ್ನಗಳನ್ನು ಪಿಪಿಪಿ ಮಾದರಿಯಲ್ಲಿ ಒಂದು ಸಂಸ್ಥೆ ಮಾರಾಟ ಮಾಡಲು ಮುಂದೆ ಬಂದಲ್ಲಿ ಯೋಚನೆ ಮಾಡಬಹುದೇ ಎಂಬ ಬಗ್ಗೆ ರಾಜ್ಯ ಸರ್ಕಾರ ಆಲೋಚನೆ ಮಾಡುತ್ತಿದೆ.

ಈ ಹಿನ್ನಲೆಯಲ್ಲಿ ಅಧಿಕಾರಿÀಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. ತುಮಕೂರು ಜಿಲ್ಲೆಯ 10 ತಾಲ್ಲೂಕುಗಳಲ್ಲಿಯೂ ಸಂಚಾರ ಮಾಡಿ ಸೂಕ್ತ ಸಲಹೆ ಪಡೆದು ಡಿಮ್ಯಾಂಡ್ ಸರ್ವೆಯನ್ನು ಮಾಡಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆದಿದೆ.

ರೈತರ ಮತ್ತು ಮಹಿಳೆಯರ ಉತ್ಪನ್ನಗಳಿಗೆ ಮಾರಾಟ ಮಾಡುವ ವ್ಯವಸ್ಥೆ ನಿಜಕ್ಕೂ ಅಧ್ಭುತ, ಆದರೇ ನಿರ್ವಹಣೆ ಹೇಗೆ ಎಂಬುದು ಒಂದು ಯಕ್ಷಪ್ರಶ್ನೆ. ಜಿಲ್ಲಾಡಳಿತ  ಈ ಬಗ್ಗೆ ದೃಢ ನಿರ್ಧಾರ ಕೈಗೊಳ್ಳುವುದು ಸೂಕ್ತವಾಗಿದೆ. ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಈ ಮಳಿಗೆಯನ್ನು ಖಾಸಗಿಯವರಿಗೆ ಬಾಡಿಗೆ ನೀಡದೇ ಸರ್ಕಾರಿ ಯೋಜನೆಗಳಿಗೆ ನೀಡುವ ಚಿಂತನೆ ನಡೆದಿದೆ.