22nd December 2024
Share

TUMAKURU:SHAKTHI PEETA FOUNDATION

ಶಕ್ತಿಪೀಠ ಕ್ಯಾಂಪಸ್ ನಲ್ಲಿ ಹಾಲಿ ಯಾವ ಜಾತಿ ಗಿಡಗಳು ಇವೆ, ಎಂಬ ಬಗ್ಗೆ  ಗಿಡಗಳ ತಪಾಸಣೆಯನ್ನು ಶ್ರೀ ಗುರುಸಿದ್ದಾರಾಧ್ಯರು, ಶ್ರೀ ಗೋವಿಂದಪ್ಪನವರು ಮತ್ತು ಶ್ರೀ ವೀರಭಧ್ರಪಂಡಿತಾರಾಧ್ಯರು ಆರಂಭಿಸಿದ್ದಾರೆ.

ಭಾರತದ ನಕ್ಷೆಯ ಸುತ್ತಲೂ ನಿರ್ಮಾಣ ಮಾಡಿರುವ ರಿಂಗ್ ರಸ್ತೆಗೆ ಮಹಾಗನಿ, ಹೊಂಗೆ ಮತ್ತು ಬೇವಿನ ಗಿಡಗಳನ್ನು ಹಾಕಲು ಆರಂಭಿಸಲಾಯಿತು. ಈ ಗಿಡಗಳ ಮಧ್ಯೆ ಶ್ರೀಗಂಧ ಗಿಡ ಹಾಕಲು ಹಲವಾರು ಜನರು ಸಲಹೆ ನೀಡುತ್ತಿದ್ದಾರೆ.

ಎರಡು ಅಡಿ ಆಳ ಮತ್ತು ಮೂರು ಅಡಿ ಅಗಲ ಕಡಗು ಮಾಡಿಸಿ, ಕೆರೆ ಮಣ್ಣು ತುಂಬಿಸಿ ಗಿಡಗಳನ್ನು ಹಾಕಲಾಗಿದೆ. ಗಿಡಗಳು ಬೇರು ಬಿಡುವ ತನಕ ಯಾವುದೇ ಗೊಬ್ಬರ ಹಾಕಬಾರದು ಎಂಬ ತೀರ್ಮಾನ ಮಾಡಲಾಗಿದೆ.

ಇಂದು ಸ್ಪಿರುಲಿನಾ ಬೆಳೆಯುವ ಬಗ್ಗೆ ಶ್ರೀ ವಿಜಯಶಂಕರ್ ರವರು ಕ್ಯಾಂಪಸ್ ನಲ್ಲಿ ಸುತ್ತಾಡಿ ಒಂದು ಯೋಜನಾವರದಿಯನ್ನು ನೀಡುವುದಾಗಿ ತಿಳಿಸಿದ್ದಾರೆ.

ಕ್ಯಾಂಪಸ್‍ನ ಎಲ್ಲಾ ಗಿಡಗಳಿಗೆ ಸಾವಯವ ಗೊಬ್ಬರ ಹಾಕಿ, ಗಿಡಗಳನ್ನು ಬೆಳಸಿ ಅವರ ಕಂಪನಿಯ ಗೊಬ್ಬರದ ಮಹತ್ವದ ಬಗ್ಗೆ ಅರಿವು ಮೂಡಿಸುವುದಾಗಿ ಶ್ರೀ ಪಾರ್ಥಸಾರಥಿಯವರು ಮತ್ತು ಶ್ರೀ ವಿಜಯಶಂಕರ್ ತಿಳಿಸಿದ್ದಾರೆ.

ಗಿಡಹಾಕುತ್ತಿರುವಾಗಲೇ ನೆದರ್ ಲ್ಯಾಂಡ್ ನ ಉಧ್ಯಮಿ ಸ್ನೇಹಿತರೊಬ್ಬರೂ ಕರೆ ಮಾಡಿ, ಕ್ಯಾಂಪಸ್ ನಲ್ಲಿ ಹಾಕುವ ಗಿಡಗಳಿಗೆ ಸಿ.ಎಸ್.ಆರ್ ಫಂಡ್ ನಲ್ಲಿ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ.

ಕ್ಯಾಂಪಸ್ ನಲ್ಲಿ ಹಾಕಲು ಉದ್ದೇಶಿಸಿರುವ ಗಿಡಗಳು, ಮೈಕ್ರೋ ಇರ್ರಿಗೇಷನ್, ಪೈಪ್ ಲೈನ್, ಕೆರೆ ಮಣ್ಣು ಹೊಡೆಸಿರುವುದು, ಕಡಗು ಹೊಡೆಸಿರುವುದು, ಸಾವಯವ ಗೊಬ್ಬರ ಹಾಕಿಸುವುದು, ಗಿಡ ಹಾಕುವ ಕೂಲಿ ಕಾರ್ಮಿಕರು ಮತ್ತು ಗಿಡಗಳ ಸಾಗಾಣಿಕೆ ವೆಚ್ಚ, ನಂತರ ಮೂರು ವರ್ಷ ನಿರ್ವಹಣೆ ವೆಛ್ಚವೂ ಸೇರಿದಂತೆ ಶಕ್ತಿಪೀಠ ಹಸಿರು ಕ್ಯಾಂಪಸ್’ ಗೆ ತಗಲುವ ವೆಚ್ಚವನ್ನು ಹಸಿರು ದಾನಿ’ಗಳು ಯಾರು ಬೇಕಾದರೂ ತಮ್ಮ ಕೈಯಲ್ಲಿ ಆದಷ್ಟು ಹಸಿರು ದಾನ’  ನೀಡಬಹುದು.

12 ಎಕರೆ 15 ಗುಂಟೆ ಕ್ಯಾಂಪಸ್ ನಲ್ಲಿ ಹಾಕಲು ಉದ್ದೇಶಿರುವ ಗಿಡಗಳನ್ನೆಲ್ಲಾ ಹಾಕಿದ ನಂತರ ಮೂರು ವರ್ಷಗಳ ನಿರ್ವಹಣೆಗಾಗಿ ಆಸಕ್ತಿ ಇರುವವರು ಸಂಪರ್ಕಿಸ ಬಹುದು.  

 ವಸತಿ, ಊಟ ಮತ್ತು ಗುತ್ತಿಗೆ ಆಧಾರದಲ್ಲಿ ಎಂಓಯು ಮಾಡಿಕೊಳ್ಳಲಾಗುವುದು. ಅವರು ಅಥವಾ ಅವರ ಕುಟುಂಬ ಕ್ಯಾಂಪಸ್ ನಲ್ಲಿ ವಾಸ ಮಾಡಿ, ಗಿಡಗಳ ನಿರ್ವಹಣೆ ಮತ್ತು ನರ್ಸರಿ ನಿರ್ವಹಣೆ ಮಾಡಬೇಕಾಗುತ್ತದೆ. ಪ್ರತಿಯೊಂದು ಗಿಡದ ಮಹತ್ವದ ಬಗ್ಗೆ ಗೈಡ್ ಮಾಡುವಷ್ಟು ಪರಿಣಿತಿ ಪಡೆಯಬೇಕಾಗುತ್ತದೆ. ಸೂಕ್ತ ತರಬೇತಿ ನೀಡಲಾಗುವುದು.

ಒಂದೆರಡು ನಾಟಿ ಹಸುಗಳನ್ನು ಸಾಕಿ ಗಿಡಗಳಿಗೆ ಜೀವಾಮೃತ ಮಾಡಿಕೊಳ್ಳಬೇಕಿದೆ. ಈ ಕ್ಯಾಂಪಸ್ ನಲ್ಲಿ ಬದುಕಲು ಆಸೆ ಇರುವ ಎಲ್ಲಾ ಜಾತಿಯ ಔಷಧಿ, ಹಣ್ಣಿನ, ಕಾಡು ಜಾತಿಯೂ ಸೇರಿದಂತೆ ಎಲ್ಲಾ ಜಾತಿಯ ಗಿಡಗಳ ‘ಡೆಮೋ ಪ್ಲಾಟ್ ‘ ಇರಲಿದೆ.ಗಿಡಗಳ ಪ್ರೇಮಿ ಕುಟುಂಬ’ ಪ್ರಯತ್ನಿಸಬಹುದು.