12th September 2024
Share

TUMAKURU:SHAKTHI PEETA FOUNDATION

ಕೇಂದ್ರ ಸರ್ಕಾರ 2016 ರ ಜೂನ್ 27 ರಂದು  DISTRICT DEVELOPMENT COORDINATION AND MONITORING COMMITTEES( DISHA )     ರಚಿಸಿದೆ.

ತುಮಕೂರು ಜಿಲ್ಲೆಯಲ್ಲಿ ತುಮಕೂರು ಅಜೆಂಡಾ ಟಾಸ್ಕ್ ಪೋರ್ಸ್’ ರಚಿಸಲು  ಸುಮಾರು ವರ್ಷಗಳ ಕಾಲ ನಿರಂತರವಾಗಿ ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಶ್ರಮಿಸುತ್ತಾ ಬಂದಿತ್ತು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿ. ಚನ್ನಿಗಪ್ಪನವರು   ತುಮಕೂರು ಅಜೆಂಡಾ ಟಾಸ್ಕ್ ಪೋರ್ಸ್ ರಚಿಸಲು  ಆದೇಶ ಮಾಡಿದ ಹಿನ್ನೆಲೆಯಲ್ಲಿ ಒಂದೆರಡು ಸಭೆಯನ್ನು ಜಿಲ್ಲಾಡಳಿತ ಮಾಡಿದರು ಪ್ರಯೋಜನವಾಗಲಿಲ್ಲ.

ತುಮಕೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಶ್ರೀ ಉಮಾಶಂಕರ್‍ರವರು ತುಮಕೂರು ಅಜೆಂಡಾ ಟಾಸ್ಕ್ ಪೋರ್ಸ್ ರಚಿಸಿ ವಿವಿಧ ಬಹುಷಃ 6 ವಿಷನ್ ಗ್ರೂಪ್‍ಗಳನ್ನು/ ತಂಡಗಳನ್ನು ರಚಿಸಿದ್ದರು. ಆ ಎಲ್ಲಾ ತಂಡಗಳಲ್ಲೂ ನನ್ನನ್ನು ಸದಸ್ಯನಾಗಿ ಮಾಡುವ ಮೂಲಕ ಸಂಪೂರ್ಣವಾಗಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಅನೂಕೂಲ ಮಾಡಿದ್ದರು. ಒಂದೆರಡು ಸಭೆ ನಡೆಯುವ ವೇಳೆಗೆ ಅವರ ವರ್ಗಾವಣೆಯಾಯಿತು ಅದು ಅಲ್ಲಿಗೆ ನಿಂತಿತು.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಎಸ್.ಸುರೇಶ್ ಕುಮಾರ್ ರವರು   ತುಮಕೂರು ಅಜೆಂಡಾ ಟಾಸ್ಕ್ ಪೋರ್ಸ್ ರಚಿಸಿದ್ದರು. ಆ ಸಮಿತಿಯಲ್ಲಿ ಕುಂದರನಹಳ್ಳಿ ರಮೇಶ್ ಮತ್ತು ದಿ.ಎಂ.ಎನ್.ಕೋಟೆ ನಾಗಭೂಷಣ್ ಇರಬಾರದು, ಅವರ ಹೆಸರನ್ನು  ತೆಗೆಯಿರಿ ಎಂದು ಅಂದಿನ ತುಮಕೂರು ನಗರದ ಶಾಸಕರಾಗಿದ್ದ ನನ್ನ ಆತ್ಮೀಯರೂ ಆದ ಶ್ರೀ ಸೊಗಡು ಶಿವಣ್ಣನವರ ಬಹು ದೊಡ್ಡ ಹೋರಾಟದಿಂದ’ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಡಾ.ಸಿ.ಸೋಮಶೇಖರ್ ರವರು ಸಭೆ ಮಾಡದಿದ್ದರೂ ಪರವಾಗಿಲ್ಲ ಅವರನ್ನು ತೆಗೆಯುವುದಿಲ್ಲ ಎಂಬಂತೆ ಒಂದು ಸಭೆಯನ್ನು ನಡೆಸಲಿಲ್ಲ.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಅವಧಿಯಲ್ಲಿ ಕರ್ನಾಟಕ ವಿಷನ್ ಡಾಕ್ಯುಮೆಂಟ್ ರಚಿಸುವಾಗ ಆಗಿನ ತುಮಕೂರು ಜಿಲ್ಲಾಧಿಕಾರಿಯಾಗಿದ್ದ ಶ್ರೀ ಮೋಹನ್ ರಾಜ್ ರವರು 6 ವಿಷನ್ ಗ್ರೂಪ್ ರಚಿಸಿದ್ದರು.ಈ ಎಲ್ಲಾ ಸಭೆಗಳಲ್ಲಿಯೂ ಆಯಾ ಅಧಿಕಾರಿಗಳು ನನ್ನನ್ನು ಸದಸ್ಯನಾಗಿ ಮಾಡಿಕೊಂಡು ಒಂದು ಉತ್ತಮವಾದ ವರದಿ ತಯಾರಿಸಲು ಚಿಂತನೆ ನಡೆಸಿದ್ದರು. ಅವರ ಉದ್ದೇಶ ಬೇರೆ ಆಗಿತ್ತು.

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು 1999 ರಲ್ಲಿ ಮೂರನೇ ಅವಧಿಗೆ ಸಂಸದರಾಗಿದ್ದಾಗ ನಾನೇ ಆಗಿನ ಪ್ರಧಾನಿಯವರಾದ ದಿ.ಅಟಲ್ ಬಿಹಾರಿ ವಾಜಪೇಯಿರವರಿಗೆ ಸಂಸದರಿಂದ ಪತ್ರ ಬರೆಸಿದ ಹಿನ್ನಲೆಯಲ್ಲಿ ದೇಶದ ಎಲ್ಲಾ ಜಿಲ್ಲೆಗಳ್ಲೂ ಸಂಸದರ ಅಧ್ಯಕ್ಷತೆಯಲ್ಲಿ ವಿಜಿಲೆನ್ಸ್ ಅಂಡ್ ಮಾನಿಟರಿಂಗ್  ಸಮಿತಿ ರಚಿಸಿದ್ದರು.ನನ್ನನ್ನು ಸಹ ಪ್ರಥಮ ಸಭೆಯ ಸದಸ್ಯನಾಗಿ ಸಂಸದರು ನೇಮಕ ಮಾಡಿದ್ದರು. ಅವರ ಅವಧಿ ಮುಗಿಯುವ ಹಂತಕ್ಕೆ ಬಂದಿದ್ದರಿಂದ ನನ್ನ ಕನಸಿನಂತೆ ಮಾಡಲು ಸಾದ್ಯಾವಾಗಲಿಲ್ಲ.

2009 ರಲ್ಲಿ ಮತ್ತೆ ತುಮಕೂರು ಲೋಕಸಭಾ ಸದಸ್ಯರಾಗಿ ಶ್ರೀ ಜಿ.ಎಸ್.ಬಸವರಾಜ್ ರವರು ಆಯ್ಕೆಯಾದಾಗ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಗೊಂಡಾಗ ನಾನು ಪಕ್ಷರಾಜಕಾರಣದಿಂದ ದೂರ ಉಳಿಯಲು ಚಿಂತನೆ ನಡೆಸಿದ್ದರಿಂದ ನಾನು ವಿಜಿಲೆನ್ಸ್ ಅಂಡ್ ಮಾನಿಟರಿಂಗ್  ಸಮಿತಿ ಕಡೆ ಗಮನ ನೀಡಲಿಲ್ಲ.

ಮತ್ತೆ 5 ನೇ ಬಾರಿ ತುಮಕೂರು ಲೋಕಸಭಾ ಸದಸ್ಯರಾಗಿ ಶ್ರೀ ಜಿ.ಎಸ್.ಬಸವರಾಜ್ ರವರು ಆಯ್ಕೆಯಾದಾಗ ತಕ್ಷಣವೇ ನನ್ನನ್ನು ದಿಶಾ ಸಮಿತಿ ಸದಸ್ಯನಾಗಿ ನೇಮಕ ಮಾಡಿದರು.

ಅಂದಿನಿಂದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ರಚಿಸಿರುವ ದಿಶಾ ಸಮಿತಿಯ ಮಾರ್ಗದರ್ಶಿ ಸೂತ್ರದ ಪ್ರಕಾರ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಶೇ 100 ರಷ್ಟು ಪ್ರಗತಿ ಸಾಧಿಸಲು ಶ್ರಮಿಸಲು ಚಿಂತನೆ ಆರಂಭಿಸಿದೆ.

2016 ರಿಂದ ಆಡಳಿತ ನಡೆಸಿದ ಮಾನ್ಯ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಶ್ರೀ H.D.ಕುಮಾರಸ್ವಾಮಿಯವರು  ರಾಜ್ಯ ಮಟ್ಟದ ದಿಶಾ ಸಮಿತಿ ರಚಿಸಲೇ ಇಲ್ಲ. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯ ಮಟ್ಟದ ದಿಶಾ ಸಮಿತಿ ರಚಿಸುವಂತೆ ಮಾಡಲು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಸಹಕಾರದಿಂದ ಪ್ರತಿಯೊಂದು ಹಂತದಲ್ಲೂ ನಾನೂ ಶ್ರಮಿಸಿದೆ.

ಪ್ರಸ್ತುತ ಶ್ರೀ ನರೇಂದ್ರ ಮೋದಿಯವರು ರಾಜ್ಯ ಮಟ್ಟದಲ್ಲಿ ದಿಶಾ ಮಾನಿಟರಿಂಗ್ ಸೆಲ್ ರಚಿಸಲು ಆದೇಶ ನೀಡಿದ್ದಾರೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲೂ ರಚಿಸ ಬೇಕಿದೆ. ಬಹುಷಃ ದೇಶದಲ್ಲಿಯೇ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಪ್ರಥಮವಾಗಿ ದಿಶಾ ಮಾನಿಟರಿಂಗ್ ಸೆಲ್ ರಚಿಸಿದ ಕೀರ್ತಿ ಪಡೆಯ ಬಹುದು’ ಎಂಬುದು ನನ್ನ ಭಾವನೆ. ಪರಿಶೀಲನೆ ನಡೆಯುತ್ತಿದೆ.

ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀ ಮತಿ ಶಾಲಿನಿ ರಜನೀಶ್ ರವರು ಸಹ ತುಮಕೂರಿನಲ್ಲಿ ಜಿಲ್ಲಾ ಮಟ್ಟದ ದಿಶಾ ಮಾನಿಟರಿಂಗ್ ಸೆಲ್ ರಚಿಸಲು ಒಲವು ತೋರಿಸಿ ಸಹಕರಿಸುತ್ತಿದ್ದಾರೆ.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸಹ ನನ್ನ ಮನವಿ ಮೇರೆಗೆ ಕುಂದರನಹಳ್ಳಿ ರಮೇಶ್ ಸಲಹೆಯನ್ನು ಪರಿಗಣಿಸಿ, ರಾಜ್ಯ ಮಟ್ಟದ ದಿಶಾ ಸಮಿತಿ ಮಾರ್ಗದರ್ಶಿ ಸೂತ್ರ ರಚಿಸಲು ಸೂಚಿಸಿದ್ದಾರೆ.ನನಗೆ ರಾಜ್ಯ ಮಟ್ಟದ ಸಮಿತಿಯಿಂದ ಪತ್ರವೂ ಬಂದಿದೆ.

ಪ್ರಸ್ತುತ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ದಿಶಾ ಮಾನಿಟರಿಂಗ್ ಸೆಲ್ ರಚಿಸುವ ಮೂಲಕ ಲೈವ್ ಪ್ರಾಜೆಕ್ಟ್ ಆಗಿ ದೇಶಕ್ಕೆ ಮಾದರಿ’ಯಾಗಲು ಮುಂದಾಗಿದೆ. ಸಂಸದರು ಅವರ ಅನುದಾನದಲ್ಲಿ ಸುಮಾರು 20 ಲಕ್ಷ ನೀಡಿದ್ದಾರೆ. ತುಮಕೂರು ಜಿಲ್ಲಾ ಪಂಚಾಯತ್ ರೂ 5 ಲಕ್ಷ ಹಣವನ್ನು ಮೀಸಲಿಟ್ಟಿದೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿದಲ್ಲಿ ಅವರು ಸಹ ಅಗತ್ಯ ಅನುದಾನ ನೀಡುವ ಭರವಸೆಯನ್ನು ಈಗಾಗಲೇ ನೀಡಿದ್ದಾರೆ.

ಈ ಎಲ್ಲಾ ಹಿನ್ನಲೆಯಲ್ಲಿ ಇಂದು(23.07.2021) ನಡೆಯುವ ಪ್ರಥಮ ಸಭೆ ನಿಜಕ್ಕೂ ನನಗೆ ತೃಪ್ತಿ ತಂದಿದೆ. ತಮ್ಮೆಲ್ಲರ ಸಹಕಾರದಿಂದ ಬೆರಳ ತುದಿಯಲ್ಲಿ ತುಮಕೂರು ಜಿಲ್ಲಾ ಅಭಿವೃದ್ಧಿ ಡಿಜಿಟಲ್ ಲೈವ್ ಮಾಹಿತಿ ದೊರೆಯುವಂತೆ ಮಾಡಲು ಕನಸು ಕಾಣಲಾಗಿದೆ. ಹಾಗೆಯೇ ಅಭಿವೃದ್ಧಿ ಚಿಂತಕರಿಗೆ ಒಂದು ವೇದಿಕೆ’ಯೂ ಆಗಲಿದೆ.