22nd November 2024
Share
HARSHITH, PARTHA SARATHI, SRINIVAS, VIJAYASHANKAR & GURUSIDDARADYA

TUMAKURU:SHAKTHI PEETA FOUNDATION

ಕೊರೊನಾ ಹೆಮ್ಮಾರಿ ವಿಶ್ವದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಜನರಿಗೆ ಅಡುಗೆ ಮನೆಯಲ್ಲಿ, ಮನೆಯ ಕೈತೋಟದ ಆವರಣದಲ್ಲಿ, ರೈತರ ಜಮೀನನಲ್ಲಿ ಇರುವ ಆಯುಷ್ ಮೆಡಿಕಲ್ ಸ್ಟೋರ್ ಬಗ್ಗೆ ಅರಿವು ಮೂಡಿಸುವ ಬಗ್ಗೆ ಚಿಂತನೆ ನಡೆಸಿದ ಒಂದು ತಂಡ ಇಂದು(24.07.2021)  ಶಕ್ತಿಪೀಠ ಕ್ಯಾಂಪಸ್ ಗೆ ಆಗಮಿಸಿತ್ತು.

ವಿಶೇಷವಾಗಿ ಸ್ಪಿರುಲಿನಾ ಬೆಳೆದು ತಿನ್ನುವ ಬಗ್ಗೆ ಜನಾಂದೋಲನ ರೂಪಿಸುವುದರ ಜೊತೆಗೆ ಒಂದು ಅಧ್ಯಯನ ಪೀಠವನ್ನು ಸ್ಥಾಪಿಸುವ ಮಹದಾಸೆ ಅವರಿಗೆ ಇದೆ. ಯಾವುದೋ ಗುತ್ತಿಗೆ ಆಧಾರಿತ ಜಮೀ ನಿನಲ್ಲಿ ಆರಂಭಿಸಿ, ವಿದೇಶಗಳಿಗೆ ಹೋಗಿ ಅಧ್ಯಯನ ಮಾಡಿ ಇಡೀ ವಿಶ್ವದಲ್ಲಿಯೇ ತನ್ನ ಚಾಪು ಮೂಡಿಸುವ ಮಹದಾಸೆ ಹೊಂದಿರುವವರ ಬಗ್ಗೆ ಪರಿಚಯ ಮಾಡಿಕೊಳ್ಳಲಾಯಿತು.ಅವರ ಅನುಭವ ಮತ್ತು ಅವರ ಪರಿಕಲ್ಪನೆಯ ಯೋಜನಾವರದಿಯೊಂದಿಗೆ ಆಗಮಿಸಲು ಸಲಹೆ ನೀಡಲಾಗಿದೆ.

ಇವರ ಜೊತೆಯಲ್ಲಿ ಶ್ರೀನಿವಾಸ್ ಎಂಬುವರು ಆಗಮಿಸಿ ಶಕ್ತಿಪೀಠ ಕ್ಯಾಂಪಸ್ ವಾಸ್ತು ಹೇಗಿದೆ ಎಂಬ ಬಗ್ಗೆ ಅಧ್ಯಯನ ಮಾಡಿ ಲಿಖಿತ ವರದಿ ನೀಡುವುದಾಗಿಯೂ ತಿಳಿಸಿದ್ದಾರೆ.

ಜೊತೆಗೆ ಶಕ್ತಿಪೀಠ ಕ್ಯಾಂಪಸ್ ನ ಎಲ್ಲಾ ಗಿಡಗಳಿಗೆ ಸಾವಯವ ಗೊಬ್ಬರ ಹಾಕಿ ಮಾದರಿಯಾಗಿ ಮಾಡುವುದಾಗಿಯೂ ಒಂದು ತಂಡ ಆಗಮಿಸಿತ್ತು. ನಾನು ಅವರಿಗೆ ಇಲ್ಲಿ ಹಾಲಿ ಇರುವ, ಹಾಕುವ ಮತ್ತು ಹಾಕಲು ಉದ್ದೇಶಿರುವ ಎಲ್ಲಾ ಜಾತಿಯ ಗಿಡಗಳಿಗೆ ಯಾವ ಗೊಬ್ಬರವನ್ನು ಎಷ್ಟೆಷ್ಟು ಯಾವ ಸಮಯದಲ್ಲಿ ಕೊಡಬೇಕು, ಎಷ್ಟು ಖರ್ಚು   ಎಂಬ ಅಂದಾಜು ಪಟ್ಟಿ ನೀಡಲು ಸೂಚಿಸಿದ್ದೇನೆ.