22nd December 2024
Share

TUMAKURU:SHAKTHI PEETA FOUNDATION

ಜಗತ್ತಿನ ಅತಿ ದೊಡ್ಡ ಕಾಳೇಶ್ವರಂ ಲಿಪ್ಟ್ ಇರ್ರಿಗೇಷನ್ ನೀರಾವರಿ ಯೋಜನೆ ಜಾರಿ ಮಾಡಿದ ಕೀರ್ತಿಯನ್ನು ಭಾರತದ ತೆಲಂಗಾಣ ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಕೆ.ಚಂದ್ರಶೇಖರ್ ರವರು ಮುಡಿಗೇರಿಸಿಕೊಳ್ಳುವತ್ತ ವಿಶ್ವದ ಗಮನ ಸೆಳೆದಿದ್ದಾರೆ.

ವಿಶ್ವದಲ್ಲಿ ಅಮೇರಿಕ ಮತ್ತು ಈಜಿಪ್ಟ್  ಬೃಹತ್ ನೀರಾವರಿ ಯೋಜನೆ ಜಾರಿಮಾಡುವ ಮೂಲಕ ಇತಿಹಾಸ ಸೃಷ್ಠಿಸಿದ್ದರು. ನೂತನ ಮುಖ್ಯಮಂತ್ರಿಯವರಾದ ಶ್ರೀ ಎಸ್.ಆರ್.ಬೊಮ್ಮಾಯಿರವರು ಸ್ವತಃ ನೀರಾವರಿ ತಜ್ಞರು. ಕರ್ನಾಟಕ ರಾಜ್ಯದಲ್ಲಿ ‘ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ’ ಒದಗಿಸುವ ಮೂಲಕ ಕರ್ನಾಟಕ ರಾಜ್ಯದಲ್ಲಿ ‘ಜಲಯುಗ ಸೃಷ್ಠಿಸುವರೇ?’

ಇಂತದೊಂದು ಕುತೂಹಲ ‘ಜಲ ಆಸಕ್ತರಲ್ಲಿ’ ಹುಟ್ಟಿದೆ. ಕಳೆದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರ ಖಾತೆ ದೊರೆಯಲಿಲ್ಲ ಎಂಬ ಕೊರಗು ಬೊಮ್ಮಾಯಿರವರಗಿತ್ತು. ಕೇಂದ್ರ ಸರ್ಕಾರ ರಚಿಸಿರುವ ‘ಜಲಶಕ್ತಿ ಇಲಾಖೆ ಮಾದರಿಯಲ್ಲಿ ಇಲಾಖೆಗೆ ಹೊಸತನ’ ತರುವುದರ ಜೊತೆಗೆ ,ರಾಜ್ಯದ ನೀರಾವರಿಯಲ್ಲಿ ಹೊಸ ಇತಿಹಾಸದೊಂದಿಗೆ ವಿಶ್ವದ ಅತಿದೊಡ್ಡ ಯೋಜನೆ ರೂಪಿಸಿ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಜಾರಿಮಾಡಿ, ಪ್ರತಿಯೊಂದು ಹನಿ ನೀರಿನ ಬಳಕೆ ಬಗ್ಗೆ ಯೋಜನೆ ರೂಪಿಸಿ ದಾಖಲೆ ಬರೆಯುವ ಮಹದಾಸೆ ರಾಜ್ಯದ ಜನರದ್ದಾಗಿದೆ.

ತಮ್ಮ ಬೊಚ್ಚಲ ಪ್ರಥಮ  ಸಚಿವ ಸಂಪುಟದಲ್ಲಿಯೇ  ಅವರ ಜೀವಮಾನದ ಕನಸಿನ ನೀರಾವರಿ ಯೋಜನೆಗೆ ಚಾಲನೆ ನೀಡುವರೇ ಕಾದು ನೋಡಬೇಕು. ಬೊಮ್ಮಾಯಿಯವರು ಸ್ವತಃ ನೀರಾವರಿ ಯೋಜನೆಗಳ ಜ್ಞಾನಿಯಾಗಿರುವದರಿಂದ ವಿಶ್ವದ ಗಮನವನ್ನು ಕರ್ನಾಟಕದತ್ತ ಸೆಳೆಯುವ ಮೂಲಕ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಿಪೇಯಿರವರ ಕನಸನ್ನು ನಮ್ಮ ರಾಜ್ಯದಲ್ಲಿ ಹೀಡೇರಿಸುವ ಭರವಸೆಯಿದೆ.

ರಾಜ್ಯದಲ್ಲಿ ಹಲವಾರು ಜನಪ್ರಿಯ ಯೋಜನೆಗಳಿಗೆ ಕೋಟಿ ಕೋಟಿ ಸಾಲಮಾಡಿರುವ ಇತಿಹಾಸ ಇದೆ. ಬೊಮ್ಮಾಯಿಯವರು ನೀರಾವರಿ ಯೋಜನೆಗಳಿಗೆ ಸಾಲ ಮಾಡಿಯಾದರೂ ‘ಜಲ ದಾಖಲೆ ಸೃಷಿ ಮಾಡಲಿ ಎಂದು ಆದಿ ಶಕ್ತಿ ಗಂಗಾಮಾತೆಯಲ್ಲಿ ಪ್ರಾರ್ಥನೆ’.

ನೀರಾವರಿ ಕನಸಿನ ಸರದಾರನ ಕೈಯಲ್ಲಿ ರಾಜ್ಯದ ಅಧಿಕಾರ. ನಿಜಕ್ಕೂ ಅವರ ತಂಡ ನಿಯೋಜಿತ ಮುಖ್ಯ ಮಂತ್ರಿ ಎಂದು ಘೋಷಣೆ ಮಾಡಿದ ಗಳಿಗೆಯಿಂದಲೇ ಜಲಯುಗದ ಯೋಜನೆಗಳ ಜಾರಿಗೆ ಮುಂದಾಗಿರಬಹುದು. ಒಂದೊಂದು ದಿವಸವೂ ಮುಖ್ಯ ಅಲ್ಲವೇ? ‘ಜಲ ಖ್ಯಾತೆ ಮಾಡುವ ರಾಜ್ಯಗಳಿಗೆ ಅವರ ಬಳಿ ನಾಟಿ ಔಷಧಿ ರೆಡಿಯಿದೆ’. ಕಾದು ನೋಡೋಣ?