19th May 2024
Share
ದಿನಾಂಕ:27.07.2021 ರಂದು ತುಮಕೂರು ಜಿಲ್ಲೆಯ ಸಾಮಾಜಿಕ ಅರಣ್ಯ ಇಲಾಖೆಯ ಡಿಎಫ್‍ಓ ಶ್ರೀ ನಾಗರಾಜ್ ರವರೊಂದಿಗೆ ಸಮಾಲೋಚನೆ.

TUMAKURU:SHAKTHIPEETA FOUNDATION

ಭಾರತ ದೇಶಾಧ್ಯಾಂತ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ‘ಜನತಾ ಜೀವ ವೈವಿಧ್ಯ ದಾಖಲಾತಿ’ಗಳನ್ನು ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಸಿದ್ಧಪಡಿಸುತ್ತಿದೆ.

ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳಲ್ಲಿ ಈವರೆಗೂ 65 ಗ್ರಾಮ ಪಂಚಾಯಿತಿಗಳಲ್ಲಿ ಪಿಬಿಆರ್ ಅನುಮೋದನೆಯಾಗಿದ್ದು ಉಳಿದ 265 ಗ್ರಾಮಪಂಚಾಯಿತಿಗಳಲ್ಲಿ ಪಿಬಿಆರ್ ಅನುಮೋದನೆಯಾಗಬೇಕಿದೆ ಎಂದು ಪಿಬಿಆರ್ ನೋಡೆಲ್ ಆಫೀಸರ್ ಶ್ರೀ ನಾಗರಾಜ್ ರವರು ತಿಳಿಸಿದರು.

ಜನತಾ ಜೀವ ವೈವಿಧ್ಯ ದಾಖಲಾತಿ ತಯಾರಿಸಲು ಗ್ರಾಮಪಂಚಾಯಿತಿವಾರು ಸಂಯೋಜಕರನ್ನು ನೇಮಿಸಲಾಗಿದೆ. ಅತಿ ಶೀಘ್ರದಲ್ಲಿ ಎಲ್ಲಾ ಗ್ರಾಮಪಂಚಾಯಿತಿಗಳ ಪಿಬಿಆರ್ ಅನುಮೋದನೆ ಪಡೆಯಲಾಗುವುದು ಎಂಬ ಖಚಿತ ಭರವೆ ನೀಡಿದರು.

ತುಮಕೂರುಜಿಲ್ಲೆಯಲ್ಲಿ ಎಷ್ಟು ಜನ ನಾಟಿ ವೈದ್ಯರಿದ್ದಾರೆ, ಎಷ್ಟು ಜನ ಪಾರಂಪರಿಕ ವೈದ್ಯರು ಇದ್ದಾರೆ, ಎಷ್ಟು ಜನ ಹಕೀಮರು ಇದ್ದಾರೆ. ತುಮಕೂರು ಜಿಲ್ಲೆಯಲ್ಲಿ ಎಷ್ಟು ಕಡೆ ಔಷಧಿವನ ಬೆಳೆಸಲಾಗುತ್ತಿದೆ.ತುಮಕೂರು ಜಿಲ್ಲೆಯಲ್ಲಿ ಯಾವ ಯಾವ ಔಷಧಿ ಗಿಡಗಳನ್ನು ಗುರುತಿಸಲಾಗಿದೆ ಎಂಬ ಮಾಹಿತಿ ನೀಡಲು ಕೇಳಿದಾಗ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದು ಖಚಿತ ಮಾಹಿತಿ ನೀಡುವುದಾಗಿ ತಿಳಿಸಿದರು’.

ಜೀವ ವೈವಿಧ್ಯ ಮಂಡಳಿಯ ಮಾರ್ಗದರ್ಶಿ ಸೂತ್ರದ ಪ್ರಕಾರ ಯಾವ ಯಾವ ಮಾಹಿತಿಗಳನ್ನು ‘ಡಿಜಿಟಲ್ ದಾಖಲೆ’ ಮಾಡಲಾಗಿದೆ ಎಂಬ ಪ್ರಶ್ನೆಗೆ ದಿಶಾ ಪೋರ್ಟಲ್ ನಲ್ಲಿ ಗ್ರಾಮ ಪಂಚಾಯಿತಿವಾರು ಮಾಹಿತಿಗಳನ್ನು ಶೀಘ್ರವಾಗಿ ಅಪ್ ಲೋಡ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ತಿಳಿಸಿದ್ದಾರೆ.

ನಗರ ಸ್ಥಳಿಯ ಸಂಸ್ಥೆಗಳಿಗೆ ನೋಡೆಲ್ ಆಫೀಸರ್ ಆಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಇರುವದರಿಂದ ಮಾಹಿತಿಯನ್ನು ಅವರಿಂದ ಪಡೆಯಬೇಕಿದೆ. ಕೋರೊನಾ ಮಾಹಾ ಮಾರಿಯಿಂದ ತತ್ತರಿಸಿರುವ ಜನತೆ ತಾವಾಗಿಯೇ ಗಿಡಮೂಲಿಕೆಗಳನ್ನು ಬಳಸುತ್ತಿದ್ದಾರೆ. ಇವರಿಗೆ ಗಿಡ ಮೂಲಿಕೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.

ನಾಟಿ ವೈಧ್ಯರ ಅನುಭವಗಳನ್ನು ಸಹ ಡಿಜಿಟಲ್ ದಾಖಲೆ ಮಾಡುವುದು ಮಾರ್ಗದರ್ಶಿ ಸೂತ್ರದಲ್ಲಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮುಂದಿನ ದಿಶಾ ಸಭೆಯಲ್ಲಿ ಪಿಪಿಟಿ ಪ್ರದರ್ಶಿಸಲು’ ಸಲಹೆ ನೀಡಲಾಯಿತು.

ಈ ಸಂದರ್ಭದಲ್ಲಿ ವಿವಿಧ ತಾಲ್ಲೂಕುಗಳ ಆರ್.ಎಫ್.ಓ ಗಳಾದ ಶ್ರೀಮತಿ ಪವಿತ್ರ, ಶ್ರೀ ಜಿತೆಂದ್ರ, ಶ್ರೀನಿವಾಸ್, ಪಾರಂಪರಿಕ ವೈಧ್ಯ ಶ್ರೀ ಗುರುಸಿದ್ಧಾರಾಧ್ಯ ಇನ್ನೂ ಮುಂತಾದವರು ಇದ್ದರು.