27th December 2024
Share
ದಿನಾಂಕ:28.07.2021 ರಂದು ತುಮಕೂರು ಸ್ಮಾರ್ಟ್ ಸಿಟಿ ಐಸಿಸಿ ಸಭಾಂಗಣದಲ್ಲಿ ಸಭೆ ನಡೆಯಿತು.

TUMAKURU:SHAKTHIPEETA FOUNDATION

1.ತುಮಕೂರು ಮಹಾನಗರ ಪಾಲಿಕೆಯ ಸದಸ್ಯರು ಮನೆ ಮನೆ ಸಮೀಕ್ಷೆ ಮಾಡಿ ಅವರ ವಾರ್ಡ್‍ವಾರು ಮಾಹಿತಿ ನೀಡಬಹುದು.

2.ಬಡಾವಾಣಿವಾರು ನಾಗರೀಕ ಸಮಿತಿಗಳು ಮನೆ ಮನೆ ಲೇಔಟ್ ತಪಾಸಣೆ ಮಾಡಿ ಅವರ ಬಡಾವಾಣಿವಾರು ಮಾಹಿತಿ ನೀಡಬಹುದು.

3.ಪ್ರತಿ ಮನೆಯವರು ತಮ್ಮ ಲೇಔಟ್ ನೋಡಿ ಪಾರ್ಕ್ ಇರುವ ಬಗ್ಗೆ ಪಾಲಿಕೆಗೆ ಮಾಹಿತಿ ನೀಡಬಹುದು.

4.ವಾಟರ್ ಮ್ಯಾನ್ ನೀರು ಬೀಡುವಾಗ ಮನೆ ಮನೆಗೆ ಹೋಗಿ ಅಕ್ಕ ನಿಮ್ಮ ಲೇಔಟ್ ಪ್ಲಾನ್ ಕೊಡಿ ಎಂದು ಪಾರ್ಕ್ ಇರುವ ಬಗ್ಗೆ ಖಾತರಿ ಮಾಡಬಹುದು.

5.ಕಸ ಸಂಗ್ರಹಿಸುವವರು ಮನೆ ಮನೆಗೆ ಹೋಗಿ ಅಕ್ಕ ನಿಮ್ಮ ಲೇಔಟ್ ಪ್ಲಾನ್ ಕೊಡಿ ಎಂದು ಪಾರ್ಕ್ ಇರುವ ಬಗ್ಗೆ ಖಾತರಿ ಮಾಡಬಹುದು.

6.ತೆರಿಗೆ ವಸೂಲಿ ಮಾಡುವ ಬಿಲ್ ಕಲೆಕ್ಟರ್ ಮನೆ ಮನೆಗೆ ಹೋಗಿ ಅಕ್ಕ ನಿಮ್ಮ ಲೇಔಟ್ ಪ್ಲಾನ್ ಕೊಡಿ ಎಂದು ಪಾರ್ಕ್ ಇರುವ ಬಗ್ಗೆ ಖಾತರಿ ಮಾಡಬಹುದು.

7.ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದವರು ಪ್ರತಿ ಲೇಔಟ್ ತಪಾಸಣೆ ಮಾಡಿ ಟೋಪೋಷೀಟ್ ನಲ್ಲಿ ಓವರ್ ಲ್ಯಾಪ್ ಮಾಡುವ ಮೂಲಕ ಪಾರ್ಕ್ ಪತ್ತೆ ಹಚ್ಚಬಹುದು.

8.ತುಮಕೂರು ಮಹಾನಗರ ಪಾಲಿಕೆಯವರು ಪ್ರತಿ ಸರ್ವೇ ನಂಬರ್‍ವಾರು ಪ್ರತಿ ಲೇಔಟ್ ತಪಾಸಣೆ ಮಾಡಿ ಟೋಪೋಷೀಟ್ ನಲ್ಲಿ ಓವರ್ ಲ್ಯಾಪ್ ಮಾಡುವ ಮೂಲಕ ಪಾರ್ಕ್ ಪತ್ತೆ ಹಚ್ಚಬಹುದು.

9.ಪ್ರತಿ ಬೂತ್ ಮಟ್ಟದಲ್ಲಿ ನಕ್ಷೆ ಹಿಡಿದು ರಾಜಕೀಯ ಪಕ್ಷಗಳು ಸಹ ಮನೆ ಮನೆ ಸಮೀಕ್ಷೆ ಮಾಡಿ ಪಾರ್ಕ್ ಇರುವ ಬಗ್ಗೆ ಮಾಹಿತಿ ನೀಡಬಹುದು.

      ನೀವೂ ಸಲಹೆ ನೀಡಬಹುದು. 

‘ನಮ್ಮೂರಿನ ಪಾರ್ಕ್‍ಗಳ ರಕ್ಷಣೆ ನಮ್ಮೆಲ್ಲರ ಹೊಣೆ’

ತುಮಕೂರು ಮಹಾನಗರ ಪಾಲಿಕೆಯ ಜನತಾ ಜೀವ ವೈವಿದ್ಯ ದಾಖಲಾತಿ ಸಮಿತಿ ತುಮಕೂರು ನಗರದಲ್ಲಿರುವ ಉಧ್ಯಾನವನಗಳಲ್ಲಿರುವ ಎಲ್ಲಾ ಜಾತಿಯ ಔಷಧಿಗಿಡಗಳು ಮತ್ತು ವಿವಿಧ ಜಾತಿಯ ಗಿಡಗಳ ಡಿಜಿಟಲ್ ಡಾಟಾ ಬೇಸ್‍ಗಾಗಿ ನಮ್ಮೂರಿನ ಪಾರ್ಕ್‍ಗಳ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಘೋಷಣೆಯೊಂದಿಗೆ ನಗರದ ಜನತೆಯ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಂದೋಲನ ಹಮ್ಮಿಕೊಳ್ಳುವ ಮಹತ್ವದ ನಿರ್ಧಾರ ಕೈಗೊಂಡಿದೆ.

ತುಮಕೂರು ನಗರದ ಎಸ್.ಐ.ಟಿ ಇಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಆಕ್ಟಿವಿಟಿ ಪಾಯಿಂಟ್ಸ್ ಅಡಿಯಲ್ಲಿ ಗಿಡ ಹಾಕಲು ಪಾಲಿಕೆಗೆ ಕೈಜೋಡಿಸುವುದಾಗಿ ಸಭೆಯಲ್ಲಿ ಭಾಗವಹಿಸಿದ್ಧ ಡಾ.ಎಂ.ಎಸ್.ರುದ್ರಮೂರ್ತಿಯವರು ತಿಳಿಸಿದರು.

ಅಶ್ವಿನಿ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಹರೀಶ್ ರವರು ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಔಷಧಿ ಗಿಡಗಳ ಮಾಹಿತಿ ಸಂಗ್ರಹಿಸಲು ನಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ವರ್ಕ್ ನೀಡುವ ಮೂಲಕ ಪಾಲಿಕೆಗೆ ಸಹಕಾರ ನೀಡಲು ಮುಂದೆ ಬಂದಿದ್ದಾರೆ.

ಜಿಲ್ಲಾ ಆಯುಷ್ ಅಧಿಕಾರಿಯವರು ತುಮಕೂರು ನಗರದಲ್ಲಿರುವ ಯೋಗ ಪಟುಗಳ ಸಹಕಾರದಿಂದ ಯೋಗ ತರಬೇತಿಗಾಗಿ ಯೋಜನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಪಾರಂಪರಿಕ ವೈದ್ಯ ಶ್ರೀ ಗುರುಸಿದ್ಧರಾದ್ಯರವರು ನಗರ ಮತ್ತು ಜಿಲ್ಲೆಯ ಪಾರಂಪರಿಕ ವೈದ್ಯರ, ನಾಟಿ ವೈದ್ಯರ ಮತ್ತು ಹಕೀಮರ ಪಟ್ಟಿ ನೀಡುವುದಾಗಿ ತಿಳಿಸಿದರು.

ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಶ್ರೀಮತಿ ಪವಿತ್ರರವರು ತುಮಕೂರು ನಗರದಲ್ಲಿ ಎಲ್ಲೆಲ್ಲಿ ಯಾವ ಗಿಡ ಹಾಕಬಹುದು ಎಂಬ ಬಗ್ಗೆ ವರಧಿ ನೀಡುವುದಾಗಿ ತಿಳಿಸಿದರು.

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯವರು ನಮ್ಮ ಸಂಸ್ಥೆ ವತಿಯಿಂದ ಎಲ್ಲಾ ಉದ್ಯಾನವನಗಳ ಕೋಆರ್ಡಿನೇಟ್ಸ್‍ಅನ್ನು ಭೂಮಿಯ ಮೇಲೆ ಗುರುತಿಸಿ ಪಹಣಿ ಕಲ್ಲು ಹಾಕುವ ಮೂಲಕ ಹದ್ದುಬಸ್ತು ನಿಗಧಿ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

1999 ರಿಂದ ನಗರದ ಉದ್ಯಾನವನಗಳ ಪತ್ತೆ ಹಚ್ಚುವ ಕೆಲಸ ಆರಂಭವಾಗಿದ್ದರೂ ಇದೂವರೆಗೂ ಎಲ್ಲಾ ಉದ್ಯಾನವನಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸಾದ್ಯಾವಾಗಿಲ್ಲ ಎಂದರೆ ನಾಚಿಕೆಯಾಗುತ್ತಿದೆ. ತುಮಕೂರು ಮಹಾನಗರ ಪಾಲಿಕೆ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಮತ್ತು ನಗರದ ಸಂಘಸಂಸ್ಥೆಗಳ, ಪರಿಸರ ಆಸಕ್ತರ ಸಹಕಾರದೊಂದಿಗೆ ತುಮಕೂರು ನಗರದಲ್ಲಿ ಇದೂವರೆಗೂ ಪತ್ತೆ ಆಗದೇ ಇರುವ ಎಲ್ಲಾ ಉಧ್ಯಾನವನಗಳ ಪತ್ತೆ ಹಚ್ಚುವ ತನಕ ನಿರಂತರವಾಗಿ ಶ್ರಮಿಸುವ ಮೂಲಕ ಅಂತಿಮ ಕಸರತ್ತು ಮಾಡುವುದಾಗಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ  ಆಧ್ಯಕ್ಷ   ಹಾಗೂ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿ   ಶ್ರೀ ಮತಿ ರೇಣುಕರವರು ಮಾತನಾಡಿ ಪತ್ತೆ ಹಚ್ಚಿದ ಎಲ್ಲಾ ಪಾರ್ಕ್‍ಗಳ ಜಿಐಎಸ್ ಲೇಯರ್ ಮಾಡುವ ಮೂಲಕ ಪ್ರತಿಯೊಂದು ಉಧ್ಯಾನವನಗಳ ಸ್ಥಿತಿ ಗತಿ ಬಗ್ಗೆ ಮಾಹಿತಿ ಸಂಗ್ರಹಿಸಿ ರಕ್ಷಣೆ ಮತ್ತು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು. ಈಗಾಗಲೇ ಸುಮಾರು 350 ಹೆಚ್ಚು ಉಧ್ಯಾನವನಗಳ ಜಿಐಎಸ್ ಲೇಯರ್ ಮಾಡಲಾಗಿದೆ. ಉಳಿದ ಉಧ್ಯಾನವನಗಳ ಪತ್ತೆ ಹಚ್ಚಲು ನಾಗರೀಕರ ನೆರವು ಅಗತ್ಯ ಎಂದು ತಿಳಿಸಿದರು.

ನಮ್ಮೂರಿನ ಪಾರ್ಕ್‍ಗಳ ರಕ್ಷಣೆ ನಮ್ಮೆಲ್ಲರ ಹೊಣೆ ಆಂದೋಲನವನ್ನು ಶೀಘ್ರದಲ್ಲಿ ಸಂಸದರು ಮತ್ತು ಶಾಸಕರೊಂದಿಗೆ ಮಾತನಾಡಿ ಚಾಲನೆ ನೀಡುವುದಾಗಿ ತಿಳಿಸಿದರು. ನಗರದ ಪರಿಸರ ಆಸಕ್ತರು ತಮ್ಮ ಅಕ್ಕ ಪಕ್ಕದಲ್ಲಿರುವ ಉಧ್ಯಾನವನಗಳ ಮಾಹಿತಿ ನೀಡಲು ಜನ ಜಾಗೃತಿ ಹಮ್ಮಿಕೊಳ್ಳುವುದಾಗಿಯೂ ತಿಳಿಸಿದರು.

ಕಸದ ಆಟೋಗಳಲ್ಲಿ ವಾಯ್ಸ್ ರೆಕಾರ್ಡ್ ಮೂಲಕ ಅನೌನ್ಸ್ ಮಾಡುವುದು., ಹ್ಯಾಂಡ್ ಬಿಲ್ ಹಂಚುವುದು. ಪತ್ರಿಕಾ ಪ್ರಕಟಣೆ ನೀಡುವುದು, ಡಿಸ್ ಪ್ಲೇ ಬೋರ್ಡ್‍ಗಳಲ್ಲಿ ಪ್ರಕಟಿಸುವುದು. ಪ್ರತಿ ರಸ್ತೆಗೂ ವಾಹನದಲ್ಲಿ ತೆರಳಿ ಮೈಕ್‍ನಲ್ಲಿ ಪ್ರಕಟಣೆ ಮಾಡಿ ಮಾಹಿತಿ ಪಡೆಯುವುದು ಇತ್ಯಾದಿ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದರು.’

ಅಧ್ಯಕ್ಷತೆ ವಹಿಸಿದ್ದ ಮಹಾಪೌರರಾದ ಶ್ರೀ ಕೃಷ್ಣಪ್ಪನವರು ಮಾತನಾಡಿ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ   ಸಭೆಯಲ್ಲಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ನಗರದ ಎಲ್ಲಾ ಉದ್ಯಾನವನಗಳ ಅಭಿವೃದ್ಧಿಗೆ ಹಣ ನೀಡಲು ಅಂದಾಜು ಪಟ್ಟಿ ಸಿದ್ಧಪಡಿಸಲು ಸೂಚಿಸಿದ್ದಾರೆ. ನಮ್ಮ ಪಾಲಿಕೆಯ ಎಲ್ಲಾ ಕಾರ್ಪೋರೇಟರ್‍ಗಳ  ಮತ್ತು ಅಧಿಕಾರಿಗಳಿಗೆ ನಾಗರೀಕರು ಈ ರೀತಿ ಸಹಕಾರ ನೀಡಿದಲ್ಲಿ  ಶೀಘ್ರದಲ್ಲಿ ವರಧಿ ಸಿದ್ಧಪಡಿಸುವ ಮೂಲಕ ಜನತೆಯ ಯೋಜನೆಯಾಗಿ ರೂಪಿಸಲಾಗುವುದು ಎಂದು ಘೋಶಿಸಿದರು.

ಸದಸ್ಯರಾದ ಶ್ರೀ ಚಿದಾನಂದ ಮೂರ್ತಿಯವರು ಮಾತನಾಡುತ್ತಾ ಜನತಾ ವೈವಿದ್ಯ ದಾಖಲಾತಿ ವರದಿ ನೀಡುವ ಸಲಹೆಗಾರರು ಏನು ಮಾಡಿದ್ದಾರೆ. ಅವರನ್ನು ಮುಂದಿನ ಸಭೆಗೆ ಕರೆಸಿ ಮಾಹಿತಿ ಪಡೆಯಲು ಸಲಹೆ ನೀಡಿದರು. ಸಭೆಯಲ್ಲಿ ಪಾಲಿಕೆಯ ಅಧಿಕಾರಿಗಳು ಭಾಗವಹಿಸಿದ್ದರು.