15th September 2024
Share

TUMAKURU:SHAKTHI PEETA FOUNDATION

ತುಮಕೂರು ಜಿಲ್ಲಾ ದಿಶಾ ಸಮಿತಿಯು ದಿಶಾ ಮಾನಿಟರಿಂಗ್ ಸೆಲ್ ಆರಂಭಿಸಲು ಸಜ್ಜಾಗಿದೆ. ಈ ಬಗ್ಗೆ ದಿನಾಂಕ:28.07.2021 ರಂದು ತುಮಕೂರು ಜಿಲ್ಲಾ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ರವರಾದ ಶ್ರೀ ಮತಿ ವಿಧ್ಯಾಕುಮಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಯಾವ ಯಾವ ಇಲಾಖೆಗೆ ಯಾವ ಟಾಸ್ಕ್ ನೀಡಿದ್ದಾರೆ ನೋಡಿ!

ಎನ್‍ಐಸಿ ಅಧಿಕಾರಿಗಳಿಗೆ: ತುಮಕೂರು ಲೋಕಸಭಾ ಸದಸ್ಯರ ವೆಬ್ ಸೈಟ್ ಪೂರ್ಣಗೊಳಿಸಲು ಮತ್ತು 2022 ರೊಳಗೆ ತುಮಕೂರು ಜಿಲ್ಲೆಯನ್ನು ಡಾಟಾ ಜಿಲ್ಲೆ ಎಂದು ಘೋಶಿಸಲು ಎಲ್ಲಾ ಇಲಾಖೆಗಳ ಡಾಟಾವನ್ನು ಒಂದೇ ವೇದಿಕೆಯಲ್ಲಿ ತರಲು ಏನೇನು ಮಾಡಬೇಕು ಎಂಬ ಬಗ್ಗೆ ಲಿಖಿತ ವರದಿಯನ್ನು ಮೂರು ದಿವಸದೊಳಗೆ ನೀಡಲು ಸೂಚಿಸಿದರು.

ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಅಧಿಕಾರಿಗಳಿಗೆ: ನೀವೂ 3 ದಿಶಾ ಸಭೆಗಳಿಗೆ ಗೈರಾಜರಾಗಿದ್ದೀರಿ, ಹಿಂದೆ ತುಮಕೂರು ಜಿಐಎಸ್ ಪೋರ್ಟಲ್ ಮಾಡಿದ್ದೀರಿ, ಇದೂವರೆಗೂ ಪೂರ್ಣವಾಗಿಲ್ಲ. ಕಾರಣ ಏನು? ಸಂಪೂರ್ಣವಾಗಿ 330 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇರುವ ಡಾಟಾ ತಪಾಸಣೆ ಮಾಡಲು ಏನೇನು ಮಾಡಬೇಕು ಎಂಬ ಬಗ್ಗೆ ಲಿಖಿತ ವರದಿಯನ್ನು ಮೂರು ದಿವಸದೊಳಗೆ ನೀಡಲು ಪತ್ರ ಬರೆಯಲು ಪಿಡಿಯವರಿಗೆ ಸೂಚಿಸಿದರು.

ಕೆಎಂಡಿಎಸ್/ಪಿಡಿ ಡಿಯುಡಿಸಿ: ಕೆಎಂಡಿಎಸ್ ಮೂಲಕ ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ತುಮಕೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ಜಿಐಎಸ್ ಆಧಾರಿತ ಡಿಜಿಟಲ್ ಡಾಟಾ ಸಂಗ್ರಹಣೆ ಮಾಡಲು ಏನೇನು ಮಾಡಬೇಕು ಎಂಬ ಬಗ್ಗೆ ಲಿಖಿತ ವರದಿಯನ್ನು ಮೂರು ದಿವಸದೊಳಗೆ ನೀಡಲು ಸೂಚಿಸಿದರು.

NRDMS ಅಧಿಕಾರಿಗಳಿಗೆ: ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳಲ್ಲಿ ತುಮಕೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ಜಿಐಎಸ್ ಆಧಾರಿತ ಡಿಜಿಟಲ್ ಡಾಟಾ ಸಂಗ್ರಹಣೆ ಮಾಡಲು ಏನೇನು ಮಾಡಬೇಕು ಎಂಬ ಬಗ್ಗೆ ಲಿಖಿತ ವರದಿಯನ್ನು ಮೂರು ದಿವಸದೊಳಗೆ ನೀಡಲು ಸೂಚಿಸಿದರು.

ತುಮಕೂರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ: ತುಮಕೂರು ಸ್ಮಾರ್ಟ್ ಸಿಟಿ ಆರಂಭಿಸಿರುವ ಇಂಟಿಗ್ರೇಟೆಡ್ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ತುಮಕೂರು ಜಿಲ್ಲಾ ದಿಶಾ ಮಾನಿಟರಿಂಗ್ ಸೆಲ್‍ಗೆ ಬಳಸಲು  ಅವಕಾಶವಿದೆಯಾ? ಯಾವ ಹಂತದಲ್ಲಿ ಚರ್ಚೆ ಮಾಡಬಹುದು? ತುಮಕೂರು ಮಹಾನಗರ ಪಾಲಿಕೆಗೆ ಯಾವ ರೀತಿ ಅನೂಕೂಲವಾಗಲಿದೆ ಮತ್ತು ಇತರ ಇಲಾಖೆಗಳಿಗೆ ಯಾವ ಡಾಟಾ ಸಂಗ್ರಹಣೆ ಮಾಡಲು ಅನೂಕೂಲ ಇದೆ ಎಂಬ ಬಗ್ಗೆ ಎಂಡಿ, ಪಿಡಿ ಡಿಯುಡಿಸಿ, ಆಯುಕ್ತರು ಟೂಡಾ ಮತ್ತು ಪಾಲಿಕೆ ಆಯುಕ್ತರು ನಾಲ್ಕು ಜನರು ಜಂಟಿಯಾಗಿ ಲಿಖಿತ ವರದಿಯನ್ನು ಮೂರು ದಿವಸದೊಳಗೆ ನೀಡಿ. ಪಿಡಿ ಡಿಯುಡಿಸಿ ಇವರ ಹೊಣೆಗಾರಿಕೆ. ಜೊತೆಗೆ ಎಲ್ಲಾ ಇಲಾಖೆಗಳ ಜಿಐಎಸ್ ಲೇಯರ್ ಮಾಡುವ ಯೋಜನೆಯ ಇಲಾಖಾವಾರು ಮಾಹಿತಿ ಪಡೆಯಲು ಸೂಚಿಸಿದರು.

ಅಂಕಿ ಅಂಶಗಳ ಇಲಾಖೆ ಅಧಿಕಾರಿಗಳಿಗೆ: ಡಿಜಿಟಲ್ ಲೈವ್ ಡಾಟಾ ಮಾಡಲು ನಿಮ್ಮ ಇಲಾಖೆಯಿಂದ ಯಾವ ಅನೂಕೂಲ ಮತ್ತು ವ್ಯವಸ್ಥೆ ಇದೆ, ಏನೇನು ಕ್ರಮ ಕೈಗೊಂಡಿದ್ದೀರಾ ಎಂಬ ಬಗ್ಗೆ ಲಿಖಿತ ವರದಿಯನ್ನು ಮೂರು ದಿವಸದೊಳಗೆ ನೀಡಲು ಸೂಚಿಸಿದರು.

ಚೀಪ್ ಪ್ಲಾನಿಂಗ್ ಆಫೀಸರ್ ಜಿಲ್ಲಾ ಪಂಚಾಯತ್ ಇವರಿಗೆ: ತುಮಕೂರು ಜಿಲ್ಲಾ ದಿಶಾ ಮಾನಿಟರಿಂಗ್ ಸೆಲ್ ಅನ್ನು ಜಿಲ್ಲಾ ಪಂಚಾಯಿತಿ ಕಟ್ಟಡದ ಮೇಲ್ಛಾವಣೆಯ ಭಾಗದಲ್ಲಿ ಆರಂಭಿಸಲು ಏನೇನು ಮಾಡಬೇಕು? ಯಾವ ಯಾವ ಇಲಾಖೆಗಳ ಪಾತ್ರ ಏನು ಎಂಬ ಬಗ್ಗೆ ಇಂಜಿನಿಯರ್ ರವರಿಂದ ಲೇಔಟ್ ಮಾಡಿಸಿ ಲಿಖಿತ ವರದಿಯನ್ನು ಮೂರು ದಿವಸದೊಳಗೆ ನೀಡಲು ಸೂಚಿಸಿದರು.

ತೋಟಗಾರಿಕೆ ಇಲಾಖೆ ಡಿಡಿಯವರಿಗೆ: ತಾವೂ ಮಾಡಿರುವ ಕೃಷಿ ಆಪ್ ಚೆನ್ನಾಗಿದೆ. ಈ ಆಪ್ ಮಾಡಿರುವವರು, ತುಮಕೂರು ಸ್ಮಾರ್ಟ್ ಸಿಟಿ ನೀಡಲು ತಿಳಿಸಿರುವ ಇಬ್ಬರು ನೌಕರರು, ಎನ್‍ಐಸಿ ಮತ್ತು ಎನ್‍ಆರ್‍ಡಿಎಂಎಸ್‍ನವರು ಕುಳಿತು ಕೊಂಡು ಏನೇನು ಮಾಡಬೇಕು ಎಂಬ ಬಗ್ಗೆ ಲಿಖಿತ ವರದಿಯನ್ನು ಮೂರು ದಿವಸದೊಳಗೆ ನೀಡಲು ಸೂಚಿಸಿದರು.

ಪಿಡಿ ಜಿಲ್ಲಾ ಪಂಚಾಯತ್ ಇವರಿಗೆ: ತುಮಕೂರು ಜಿಲ್ಲೆಯ ಎಲ್ಲಾ ಇಲಾಖೆಗಳಿಗೆ ಪತ್ರ ಬರೆದು  ಕೇಂದ್ರ ಸರ್ಕಾರದ ಯಾವ ಯಾವ ಯೋಜನೆಗಳು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಬರಲಿವೆ. ತಮ್ಮ ಇಲಾಖೆಯ ಯಾವ ಪೋರ್ಟಲ್ ನಲ್ಲಿ ಡಿಜಿಟಲ್ ಡಾಟಾ ದೊರೆಯಲಿದೆ. ಈ ಮಾಹಿತಿಯನ್ನು ದಿಶಾ ಪೋರ್ಟಲ್ ಗೆ ಲಿಂಕ್ ಮಾಡಲು ಏನು ಮಾಡಬೇಕು ಮತ್ತು ತಮ್ಮ ಇಲಾಖೆಯ ಯಾವ ಯೋಜನೆಗಳಿಗೆ ಯಾವ ಆಪ್‍ಗಳು ಇವೆ ಎಂಬ ಬಗ್ಗೆ ಲಿಖಿತ ವರದಿಯನ್ನು 10 ದಿವಸದೊಳಗೆ ಪಡೆಯಲು ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಸ್ವತ್ತನ್ನು ಜಿಐಎಸ್ ಲೇಯರ್ ಮಾಡಬೇಕಾಗಿರುವುದರಿಂದ ತುಮಕೂರು ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಸ್ವತ್ತುಗಳಿದ್ದರೂ ಆಯಾ ಇಲಾಖೆಯಿಂದ ಮಾಹಿತಿ ಪಡೆಯಲು ಎಲ್ಲಾ ಇಲಾಖೆಗಳಿಗೂ ಪತ್ರ ಬರೆಯಲು ಸೂಚಿಸಿದರು.

ಸ್ಮಾರ್ಟ್ ಗೌರ್ವನೆನ್ಸ್ ಅಧಿಕಾರಿಗಳಿಗೆ ಪತ್ರ ಬರೆದು ದಿಶಾ ಮಾನಿಟರಿಂಗ್ ಸೆಲ್ ಗೆ ತಮ್ಮಿಂದ ಯಾವ ಅನೂಕೂಲ ಮಾಡಬಹುದು ಎಂಬ ಬಗ್ಗೆ ಮಾಹಿತಿ ಪಡೆಯಲು ಸೂಚಿಸಿದರು.

ದಿಶಾ ಮಾನಿಟರಿಂಗ್ ಸೆಲ್ ಬಗ್ಗೆ ಒಂದು ಉಪಸಮಿತಿ ರಚಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ, ಈ ಎಲ್ಲಾ ಇಲಾಖೆಗಳು ನಿಗದಿತ ಸಮಯದಲ್ಲಿ ಲಿಖಿತ ಮಾಹಿತಿ ನೀಡದೇ ಇದ್ದಲ್ಲಿ ನಿಮ್ಮ ನಿಮ್ಮ ಕಚೇರಿಗೆ ಬಂದು ಮಾಹಿತಿ ನೀಡುವವರೆಗೂ ಟೇಬಲ್ ಮುಂದೆ ಕುಳಿತು ಕೊಳ್ಳಲಾಗುವುದು ಎಂಬ ಅಂಶವನ್ನು ಖುಷಿಯಾಗಿ ಹಂಚಿಕೊಂಡರು.

ಎಲ್ಲಾ ಇಲಾಖೆಗಳು ಮಾಹಿತಿ ನೀಡಿದ ನಂತರ ಈ ದಿನದ ಸಭೆ ನಡವಳಿಕೆ ಮಾಡಿ, ರಾಜ್ಯ ಮಟ್ಟದ ದಿಶಾ ಸಮಿತಿಗೆ ಅನುಮತಿ ಪಡೆಯಲು ಮತ್ತು ಸರ್ಕಾರದ ಹಂತದಲ್ಲಿ ಆದೇಶ ಪಡೆಯಲು ಕ್ರಮ ಕೈಗೊಳ್ಳಲು ಸಲಹೆ ನೀಡಿದರು.

ಪ್ರತಿ ದಿವಸದ ಮಾಹಿತಿಯನ್ನು ಅಫ್‍ಡೇಟ್ ಮಾಡಲು ಪಿಡಿಯವರಿಗೆ ಸಲಹೆ ನೀಡಿದರು. ಪ್ರತಿ ಇಲಾಖೆಯವರು ವರದಿ ನೀಡುವ ಮುನ್ನ ನನ್ನನ್ನು ಕರೆದರೆ ನಾನು ಸಹ ಇಲಾಖಾವಾರು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದರು.