19th May 2024
Share
SIT PRINCIPAL DINESH. H.B.MALLESH. PROMOD, M.S.RUDRAMURTHY &KUNDARANAHALLI RAMESH

TUMAKURU:SHAKTHIPEETA FOUNDATION

ನಮ್ಮೂರಿನ ಪಾರ್ಕ್‍ಗಳ ರಕ್ಷಣೆ ನಮ್ಮೆಲ್ಲರ ಹೊಣೆ ಘೋಷಣೆಯೊಂದಿಗೆ

ತುಮಕೂರು ನಗರದಲ್ಲಿರುವ ಪಾರ್ಕ್‍ಗಳ ರಕ್ಷಣೆ, ಅಭಿವೃದ್ಧಿ, ನಾಪತ್ತೆಯಾಗಿರುವ ಅಂದರೆ ಇದೂವರೆಗೂ ಸಿಗದೆ ಇರುವ ಸುಮಾರು 152 ಕ್ಕೂ ಹೆಚ್ಚು ಪಾರ್ಕ್‍ಗಳ ಗುರುತಿಸುವುದು.ಇರುವ ಗಿಡಗಳ ಡಿಜಿಟಲ್ ಡಾಟಾ ಬೇಸ್, ಮತ್ತು ಹೊಸದಾಗಿ ಗಿಡಗಳನ್ನು ಹಾಕಿ ಬೆಳೆಸುವ ವಿಚಾರದಲ್ಲಿ ಮಹತ್ವದ ನಿರ್ಧಾರವನ್ನು ನಗರದ ಜನತೆ ಕೈಗೊಳ್ಳಲಿದ್ದಾರೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ದಿಶಾ ಸಮಿತಿ ಜಿಲ್ಲೆಯ ಪ್ರತಿಯೊಂದು ಯೋಜನೆಯ  ಜಿಐಎಸ್ ಲೇಯರ್ ಮಾಡಲು ನಿರಂತರವಾಗಿ ಶ್ರಮಿಸುತ್ತಿದೆ. ತುಮಕೂರು ಮಹಾನಗರ ಪಾಲಿಕೆ ಪಾರ್ಕ್‍ಗಳ ಜಿಐಎಸ್ ಲೇಯರ್ ಮಾಡಿದೆ.

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಪಾರ್ಕ್‍ಗಳನ್ನು ಕಾಗದದಲ್ಲಿ ಹಸ್ತಾಂತರ ಮಾಡಿದೆ. ಇದೂವರೆಗೂ ದಾಖಲೆ ಪ್ರಕಾರ 530 ಉಧ್ಯಾನವನಗಳಿವೆ ಎಂದು ಹೇಳುತ್ತಲೆ ಇದ್ದೇವೆ. ಈ ಪಾರ್ಕ್‍ಗಳ ಗುರುತಿಸುವಿಕೆ ಆರಂಭವಾಗಿದ್ದು 2000 ನೇ ಇಸವಿಯಲ್ಲಿ.

 ಶ್ರೀ ಸತ್ಯನಾರಾಯಣರವರು ನಗರ ಸಭೆ ಅಧ್ಯಕ್ಷರಾಗಿದ್ದಾಗ ನಾನು ಅವರೊಂದಿಗೆ ಸಮಾಲೋಚನೆ ನಡೆಸಿದಾಗ ಮೊದಲು ಅವರು ಪಟ್ಟಿ ಮಾಡಿ ನನಗೆ ನೀಡಿದ್ದು ಕೇವಲ 15 ಪಾರ್ಕ್‍ಗಳು.  ಬಸವರಾಜ್ ರವರು ಸುಮಾರು 35 ಲಕ್ಷ ಸಂಸದರ ಅನುದಾನ ನೀಡಿದ್ದರು.ಇದನ್ನು ಪೂರ್ಣವಾಗಿ ಬಳಸಲೇ ಇಲ್ಲ.

ನಂತರ ತುಮಕೂರು ಜಿಲ್ಲಾಧಿಕಾರಿಯಾಗಿದ್ದ ಶ್ರೀ ಎಸ್.ಆರ್.ಉಮಾಶಂಕರ್ ಉದ್ಯಾನವನಗಳನ್ನು ಗುರುತಿಸಲು ಟೂಡಾ ಆಡಳಿತಾಕಾರಿಯಾಗಿದ್ದಾಗ ರೂ 75000 ಹಣ ಮೀಸಲಿಡುವ ಮೂಲಕ ಚಾಲನೆ ನೀಡಿದರು.   ಸರ್ವೇಯರ್ ಶ್ರೀ ಶಿವಶಂಕರ್ ತಂಡ ಸರ್ವೇ ಮಾಡಿತ್ತು. ನಂತರ ಟೂಡಾ ಆಯುಕ್ತರಾಗಿದ್ದ ಶ್ರೀ ಆದರ್ಶ್ ಕುಮಾರ್ ಬಹಳ ತಲೆಕೆಡಿಸಿಕೊಂಡು ಗೆಜಿಟ್ ನೋಟಿಫಿಕೇಷನ್ ಮಾಡಿದ್ದು, ನಾನು ಅವರೊಂದಿಗೆ ಪ್ರೀತಿಯ ಜಗಳ ಕಾದಿದ್ದು ಇತಿಹಾಸ.

ಅಂದಿನಿಂದ ಇಂದಿನವರೆಗೂ ಉಧ್ಯಾನವನಗಳ ಸ್ಥಳವನ್ನು ಗುರುತಿಸಲು ಆಡಳಿತ ನಡೆಸಿದ ಶಾಸಕರಾಗಲಿ, ಸಂಸದರಾಗಲಿ, ಮೇಯರ್ ಗಳಾಗಲಿ, ಆಯುಕ್ತರಾಗಲಿ, ಪಾಲಿಕೆ ಸದಸ್ಯರಾಗಲಿ ಗಂಭೀರ ಪ್ರಯತ್ನ ನಡೆಸಲಿಲ್ಲ. ಹೇಳಿಕೆಗಳು ಮಾತ್ರ ಪುಂಕಾನುಪುಂಕವಾಗಿ ಬರುತ್ತಲೇ ಇವೆ.ಆದರೇ ಜಿ.ಎಸ್.ಬಸವರಾಜ್ ರವರು ಪಾರ್ಕ್ ಮತ್ತು ಒಂದು ಲಕ್ಷ ಗಿಡ’ ಎಂದು ಕನಸು ಕಾಣುತ್ತಲೇ ಇದ್ದಾರೆ. ಅವರ ಕನಸನ್ನು ನನಸು ಮಾಡಲು ನಾಗರೀಕರ ಸಹಕಾರ ಅಗತ್ಯ.

ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಆಯುಕ್ತರಾದ ಶ್ರೀ ಮತಿ ರೇಣುಕರವರು ಒಂದು ದೃಢ ನಿರ್ಧಾರಕ್ಕೆ ಬಂದು ಉದ್ಯಾನವನಗಳ ಜಿಐಎಸ್ ಲೇಯರ್ ಪಕ್ಕಾ ಮಾಡಲೇ ಬೇಕು. ನೀವೂ ಏನು ಸಹಕಾರ ಕೇಳುತ್ತಿರೋ ಕೇಳಿ ನಾವು ಕೊಡಲಿದ್ದೇವೆ ಇದು ದಾಖಲೆಯ ಹಂತದಲ್ಲಿ ಪರಿಪೂರ್ಣವಾಗಬೇಕು ಎಂಬ ಭರವಸೆಯನ್ನು ತುಮಕೂರು ಸ್ಮಾಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ನನಗೆ ನೀಡಿದ್ದಾರೆ.

 ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ನಾಲ್ಕು ಕೋಟಿ ಹಣವನ್ನು ಉದ್ಯಾನವನಗಳಿಗೆ ತಂತಿ ಬೇಲಿ, ಗಿಡ ಮತ್ತು ಇತರೆ ಅಭಿವೃದ್ಧಿಗಾಗಿ ಬಳಸಲು ಸಲಹೆ ನೀಡಿದ್ದಾರೆ. ಇದು ಸದ್ಭಳಕೆಯಾಗಬೇಕಾದರೆ ನಾಗರೀಕ ಸಂಸ್ಥೆಗಳ ಪಾತ್ರ ಬಹಳ ಮಹತ್ತರವಾಗಿದೆ. ಪಾರ್ಕ್ ಹುಚ್ಚನ್ನು ನನಗೆ ಹತ್ತಿಸಿದ್ದು ಮಾರುತಿನಗರದ ದಿವಂಗತ ಪಾರ್ಕ್ ಪ್ರಹ್ಲಾದ್ ರಾವ್ ‘ ರವರು, ಮೊದಲ ಸಭೆ ಅವರ ಪಾರ್ಕ್ ನಲ್ಲಿಯೇ ನಡೆದಿದ್ದು. ಉದ್ಯಾನವನಗಳ ಅಂತಿಮ ಘೋಷಣೆಯ ಸಭೆಯನ್ನು ಅವರ ಪಾರ್ಕ್ ನಲ್ಲಿ ನಡೆಸುವ ಮೂಲಕ ಒಂದು ಡಿಜಿಟಲ್ ದಾಖಲೆಯನ್ನು ನಗರದ ಸಾರ್ವಜನಿರಿಗೆ ನೀಡಲಾಗುವುದು.

 ‘ಮೂಲಕ ನಾವು ಇತರರಿಗೆ ಮಾದರಿಯಾಗ ಬೇಕು ಎಂಬ ತೀರ್ಮಾನ ಮಾಡಿದೆವು. ಪಾಪ ಪಾಲಿಕೆಯ ಹನುಂತರಾಜು ನನ್ನನ್ನು ಬೈದುಕೊಳ್ಳುತ್ತಲೇ ಸಂಪೂರ್ಣ ವಾಗಿ ಪಾರ್ಕ್‍ಗಳ ಲೇಯರ್ ಮಾಡುವ ಕೆಲಸದಲ್ಲಿ ಪ್ರಾಮಾಣಿಕ ಕೆಲಸ ಮಾಡಲು ಆರಂಭಿಸಿದಾಗ ನಮಗೆ ತಿಳಿದಿದ್ದು ಉಳಿದ ಪಾರ್ಕ್‍ಗಳು ಎಲ್ಲಿವೆ?’

ಸುಮಾರು 2000 ನೇ ಇಸವಿಯಿಂದ ನಮ್ಮ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಜೊತೆಗೂಡಿ ಎಸ್.ಐ.ಟಿಯ ಡಾ.ಎಂ.ಎಸ್.ರುದ್ರಮೂರ್ತಿಯವರು ಬಹಳ ಕೆಲಸ ಮಾಡಿದ್ದಾರೆ. ಇನ್ನೊಬ್ಬ ಫೋರಂ ಅಭಿಮಾನಿ ಶ್ರೀ ಹನುಮಂತಪ್ಪನವರು ಟೂಡಾ ಸದಸ್ಯರಾಗಿದ್ದಾರೆ. ನಾನು ಅವರನ್ನು ಕೇಳಿದೆ ಹನುಮಂತಪ್ಪ- ಪಾರ್ಕ್‍ಗಳ ಗತಿ ಏನಪ್ಪ’ಎಂದಾಗ  ಅವರು ಸಹ ಟೂಡಾ ಅಧ್ಯಕ್ರರಾದ ಶ್ರೀ ನಾಗೇಶ್‍ರವರ ಮತ್ತು ಆಯುಕ್ತರಾದ ಶ್ರೀ ಯೋಗಾನಂqದ್ ರವರೊಂದಿಗೆ ಮಾತನಾಡಿ ಉದ್ಯಾನವನಗಳ ಸ್ಥಳ ಗುರಿತಿಸಿ ಘೋಷಣೆ ಮಾಡಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ.

ತುಮಕೂರು ಮಹಾನಗರ ಪಾಲಿಕೆಯ ಜನತಾ ಜೀವ ವೈವಿದ್ಯ ದಾಖಲಾತಿ ಸಭೆಯಲ್ಲಿ ಉದ್ಯಾನವನಗಳ ಗುರುತಿಸುವಿಕೆ, ಮರಗಳ ಡಿಜಿಟಲ್ ಡಾಟಾ ಬೇಸ್ ಗೆ ಮೊದಲ ಆಧ್ಯತೆ ನೀಡಲಾಗಿದೆ. ಮೇಯರ್ ಶ್ರೀ ಕೃಷ್ಣಪ್ಪನವರು ಮತ್ತು ಆಯುಕ್ತರಾದ ಶ್ರೀಮತಿ ರೇಣುಕರವರು ನಾಗರೀಕರು ಮತ್ತು ಸಂಘ ಸಂಸ್ಥೆಗಳ ಸಹಕಾರ ಕೋರಿದಾಗ ಈ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಎಸ್.ಐ.ಟಿ ಪ್ರೋಫೆಸರ್ ಡಾ.ರುದ್ರಮೂರ್ತಿಯವರು ಮತ್ತು ಶಕ್ತಿಪೀಠ ಫೌಂಡೇಷನ್ ಪ್ರಕಟಿಸಿದೆ.

ಪ್ರಧಾನಿ ನರೇಂದ್ರಮೋದಿಯವರ ಆಶಯದಂತೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆಕ್ಟಿವಿಟಿ ಪಾಯಿಂಟ್ ಯೋಜನೆಯಡಿ ಪಾರ್ಕ್ ಗೊಬ್ಬ ವಿದ್ಯಾರ್ಥಿ ಡಾಟಾ ಬೇಸ್ ಮಾಡಲಿದ್ದಾರೆ. ಇವರ ಜೊತೆಗೆ ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಒಂದು ನಾಗರೀಕ ಸಂಸ್ಥೆ, ಪರಿಸರ ಆಸಕ್ತ ಕುಟುಂಬ, ವ್ಯಕ್ತಿಯನ್ನು ಜೊತೆಗೂಡಿಸಲು ಶ್ರಮಿಸಲಿದೆ. ಪಾಲಿಕೆಯಿಂದ ಒಬ್ಬೊಬ್ಬ ನೌಕರರಿಗೂ ಹೊಣೆಗಾರಿಕೆ ನೀಡಲು ಮನವಿ ಮಾಡಲಿದ್ದೇವೆ.

ಅಂದರೆ ಒಂದು ಉದ್ಯಾನವನಕ್ಕೆ ಒಬ್ಬ ವಿದ್ಯಾರ್ಥಿ, ಒಂದು ಸಂಸ್ಥೆ ಅಥವಾ ಒಂದು ಕುಟುಂಬ ಅಥವಾ ಒಬ್ಬ ವ್ಯಕ್ತಿ ಮತ್ತು ಒಬ್ಬ ಪಾಲಿಕೆ ಅಥವಾ ಯಾವುದೇ ಇಲಾಖೆಯ ಸರ್ಕಾರಿ ಅಧಿಕಾರಿ/ನೌಕರರ ವಿಷನ್ ಗ್ರೂಪ್ ಮಾಡಲಿದ್ದೇವೆ. ‘ಆಗಸ್ಟ್ 2021 ನ್ನು ಉಧ್ಯಾನವನಗಳ ಜಿಐಎಸ್ ಲೇಯರ್ ತಪಾಸಣಾ ಮಾಸ’ ಎಂದು ಘೋಷಣೆ ಮಾಡಲಿದ್ದೇವೆ.’

ತುಮಕೂರಿನ ಶ್ರೀ ಪ್ರಮೋದ್ ರವರು ಒಂದು ಆಪ್ ಮಾಡಿದ್ದಾರೆ, ಈ ಆಪ್‍ನಲ್ಲಿ ಯಾರು ಬೇಕಾದರು ಮರಗಳ ಡಿಜಿಟಲ್ ದಾಖಲೆ ಮಾಡಬಹುದು. ಆಪ್ ಅನ್ನು ಇನ್ನೂ ಪರಿಪೂರ್ಣವಾಗಿ ಮಾಡಿ, ಬಿಡುಗಡೆ ಮಾಡಲಾಗುವುದು. ಇದೊಂದು ನಗರದ ಜನತೆಯ ಆಂದೋಲನವಾಗಿ ರೂಪಿಸಲಾಗುವುದು.

ಈ ಹಿನ್ನಲೆಯಲ್ಲಿ ಎಸ್.ಐ.ಟಿ ಪ್ರಾಂಶುಪಾಲರಾದ ಶ್ರೀ ದಿನೇಶ್ ರವರೊಂದಿಗೆ ದಿನಾಂಕ:29.07.2021 ರಂದು ಸಮಾಲೋಚನೆ ನಡೆಸಲಾಯಿತು.