22nd December 2024
Share

TUMAKURU:SHAKTHI PEETA FOUNDATION

ಸಾರ್ ನಾವು ಉಧ್ಯಾನವನಗಳ ಸಂರಕ್ಷಣೆ ಮತ್ತು ಗಿಡಗಳನ್ನು ಬೆಳೆಸಲು ಪಣತೊಡುತ್ತೇವೆ. ನಮ್ಮ ಮಕ್ಕಳ ವಿದ್ಯಾಬ್ಯಾಸಕ್ಕೆ ಸಹಕಾರ ಮಾಡಿ ಎಂದು ತುಮಕೂರು ಮಹಾನಗರ ಪಾಲಿಕೆಯ ಉದ್ಯಾನವನಗಳ ಕಾರ್ಮಿಕರು  ಮನಸ್ಸು ಕುಲಕುವ ರೀತಿಯಲ್ಲಿ ಪ್ರಶ್ನೆ ಮಾಡಿದ್ದು ನಿಜಕ್ಕೂ ಮೆಚ್ಚುವ ಸಂಗತಿ.

ದಿನಾಂಕ:29.07.2021 ರಂದು ತುಮಕೂರು ನಗರದ ಉದ್ಯಾನವನವೊಂದರಲ್ಲಿ  ಕಾರ್ಮಿಕರನ್ನು ಭೇಟಿ ಮಾಡಿ ಪಾಲಿಕೆಯಲ್ಲಿರುವ ಸುಮಾರು ಒಂದು ಸಾವಿರ ನೌಕರರು ಒಂದೊಂದು ಉದ್ಯಾವನಗಳನ್ನೂ ಏಕೆ ನೋಡಿಕೊಳ್ಳಬಾರದು ಎಂಬ ನನ್ನ ಪ್ರಶ್ನೆಗೆ ಈ ಉತ್ತರವನ್ನು ದಿಟ್ಟತನದಿಂದ ನೀಡಿದರು.

‘ನಾವು ನಗರದಲ್ಲಿ ಜನತೆಯ ಹೇಸಿಗೆಯಿಂದ ಆರಂಭಿಸಿ, ಅವರು ಹುಗುಳಿದ್ದು, ಬೀದಿಯಲ್ಲಿ ಎಸೆದಿದ್ದು, ಅವರ ಮನೆಯ ಕಸ, ಅವರ ಮನೆಗೆ ನಲ್ಲಿ ನೀರು ನೀಡಲು ಹಗಲು ಇರಳು ಎನ್ನದೇ, ಕೊರೊನಾ ಬಂದ ಸಮಯದಲ್ಲೂ  ಜೀವದ ಹಂಗು ತೊರೆದು ಶ್ರಮಿಸುತ್ತೇವೆ’

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಿದ್ಧಪಡಿಸಿರುವ ವಿಷನ್ ಡಾಕ್ಯುಮೆಂಟ್ ನಲ್ಲಿ ತುಮಕೂರು ಮಹಾನಗರ ಪಾಲಿಕೆ ಕಾರ್ಮಿಕರ ಮಕ್ಕಳಿಗೆ ಶಾಲೆ ಆರಂಭಿಸುವ ಬೇಡಿಕೆ ಬಗ್ಗೆ ಬರೆದಿದ್ದೀರಿ, ಅದು ಏನಾಯಿತು ಎಂದು ಶ್ರೀ ರಘುರವರು ಕೇಳಿದಾಗ ನನಗೆ ಖುಷಿಯಾಯಿತು.

ಈ ಬಗ್ಗೆ ತುಮಕೂರು ಮಹಾನಗರ ಪಾಲಿಕೆ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದಾಗಿ ಅವರಿಗೆ ತಿಳಿಸಿದ್ದೇನೆ. ಜೊತೆಯಲ್ಲಿ ಶ್ರೀ ಆನಂದ್ ರವರು ಇದ್ದರು.

ಬಗ್ಗೆ ತಾವು ಏನು ಸಲಹೆ ನೀಡುವಿರಿ?