22nd December 2024
Share

TUMAKURU:SHAKTHIPEETA FOUNDATION

ಜನತಾ ಜೀವ ವೈವಿಧ್ಯ ದಾಖಲಾತಿಯ ನಿಯಾಮಾನುಸಾರ ತುಮಕೂರು ಜಿಲ್ಲೆಯಲ್ಲಿ ಇರುವ ಎಲ್ಲಾ ಜಾತಿಯ ಔಷಧಿ ಗಿಡಗಳ ತಪಾಸಣೆಗೆ ಮಾಡಿ ಡಿಜಿಟಲ್ ಡಾಟಾ ಬೇಸ್ ಸಿದ್ಧಪಡಿಸಲು ತುಮಕೂರಿನ ಅಶ್ವಿನಿ ಆಯುರ್ವೇದ ಕಾಲೇಜ್ ನಲ್ಲಿರುವ 400 ವಿದ್ಯಾಥಿಗಳು ಕನಿಷ್ಠ ಪಕ್ಷ ಎರಡು ಜಾತಿಯ ಔಷದಿ ಗಿಡಗಳ ತಪಾಸಣೆ ಮಾಡಿ ವರದಿ ನೀಡಲು ಪ್ರಾಂಶುಪಾಲರಾದ ಡಾ.ಶ್ರೀ ಹರೀಶ್ ರವರೊಂದಿಗೆ ಸಮಾಲೋನೆ ನಡೆಸಲಾಯಿತು.

ದಿನಾಂಕ:29.07.2021 ರಂದು ಅವರ ಕಾಲೇಜಿನ ಔಷಧಿ ವನಕ್ಕೆ ಭೇಟಿ ಮಾಡಿ, ಎಷ್ಟು ಜಾತಿಯ ಔಷಧಿ ಗಿಡಗಳನ್ನು ಹಾಕಲಾಗಿದೆ ಎಂಬ ಮಾಹಿತಿ ನೀಡಲು ಮನವಿ ಮಾಡಲಾಯಿತು. ಪ್ರಸ್ತುತ ಪರೀಕ್ಷೆಗಳು ನಡೆಯುತ್ತವೆ, ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ, ಈ ಯೋಜನೆ ಜಾರಿಗೆ ಜಿಲ್ಲಾಡಳಿತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. 

ಆರಂಭದಲ್ಲಿ ಸಿದ್ಧರಬೆಟ್ಟದ ಔಷಧಿ ಗಿಡಗಳ ಡಿಜಿಟಲ್ ಡಾಟಾ ಬೇಸ್ ಮಾಡುವ ಬಗ್ಗೆ ಯೋಚಿಸಲಾಯಿತು. ವಿದ್ಯಾರ್ಥಿಗಳ ಜೊತೆಗೆ ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು ಮತ್ತು ಹಕೀಮರನ್ನು ಕರೆದುಕೊಂಡು ಹೋಗುವುದು ಉತ್ತಮ. ಅರಣ್ಯ ಇಲಾಖೆಯ ಸಿಬ್ಬಂಧಿಗಳ ಸಹಕಾರ ಪಡೆಯುವ ಬಗ್ಗೆಯೂ ಚರ್ಚಿಸಲಾಯಿತು. ಪ್ರಾಂಶುಪಾಲು ಈ ಬಗ್ಗೆ ಆಡಳಿತ ಮಂಡಳಿಯ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ.