22nd December 2024
Share

TUMAKURU:SHAKTHIPEETA FOUNDATION

ತುಮಕೂರು ನಗರದ ಲೇ ಔಟ್ ವಾರು ಉಧ್ಯಾನವನಗಳನ್ನು ಪತ್ತೆ ಮಾಡಿ ಜಿಐಎಸ್ ಲೇಯರ್ ಮಾಡುವ ಮೂಲಕ ಪಾರದರ್ಶಕವಾಗಿ ಉದ್ಯಾನವನಗಳ ಮಾಹಿತಿಯನ್ನು ಪ್ರಕಟಿಸಲು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರು ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದರು.

ಒಂದು ತಿಂಗಳೋಳಗಾಗಿ ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದ ಮೊದಲು ಮತ್ತು ಟೂಡಾ ಆದ ಮೇಲೆ ಮಾಡಿರುವ ಪ್ರತಿಯೊಂದು ಲೇಔಟ್‍ವಾರು ಪರಿಶೀಲನೆ ಮಾಡಿ, ಇಡೀ ಜೀವಮಾನವೆಲ್ಲಾ ಉದ್ಯಾನವನಗಳ ಹರಿಕಥೆ ಮಾಡುವುದು ಸೂಕ್ತವಲ್ಲ. ಅಭಿವೃದ್ಧಿ ಹೊಂದದ ಉದ್ಯಾನವನಗಳವಾರು ಅಂದಾಜುಪಟ್ಟಿ ತಯಾರಿಸಿ ಗಿಡಗಳನ್ನು ಹಾಕುವುದು ಮತ್ತು ತಂತಿ ಬೇಲಿ ಹಾಕಲು ಯೋಜನೆ ರೂಪಿಸಿ ಇದರಿಂದ ಕೋಟ್ಯಾಂತರ ಆಸ್ತಿ ರಕ್ಷಣೆ ಮಾಡಿದಂತಾಗುತ್ತದೆ ಎಂದರು.

ಅವರು ದಿನಾಂಕ:31.07.2021 ರಂದು ತುಮಕೂರು ಟೌನ್ ಹಾಲ್ ಮುಂಭಾಗ ಜೀವವೈವಿಧ್ಯ ಮಂಡಳಿಯ ಜನತಾ ಜೀವ ವೈವಿಧ್ಯ ದಾಖಲಾತಿಯ ಅಡಿ ನಡೆದ ನಮ್ಮೂರಿನ ಪಾರ್ಕ್ ನಮ್ಮೆಲ್ಲರ ಹೊಣೆ ಆಂದೋಲನದ ಉದ್ಘಾಟನೆಯಲ್ಲಿ ಮಾತನಾಡಿದರು.

ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳ ಮತ್ತು 330 ಗ್ರಾಮ ಪಂಚಾಯಿತಿಗಳ ವ್ಯಾಫ್ತಿಯಲ್ಲೂ ಉದ್ಯಾನವನಗಳ ಮತ್ತು ಔಷಧಿ ವನಗಳ ಜಿಐಎಸ್ ಲೇಯರ್ ಮಾಡುವ ಮೂಲಕ ಜನತಾ ಜೀವವೈವಿಧ್ಯ ದಾಖಲಾತಿ ವರದಿಯ ಅನುಷ್ಠಾನಕ್ಕೆ ಶ್ರಮಿಸಲು ಸ್ಥಳೀಯ ಸಂಸ್ಥೆಗಳಿಗೆ  ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಶ್ರೀ ಮತಿ ಕೆ.ವಿದ್ಯಾಕುಮಾರಿಯವರು ಕರೆನೀಡಿದರು ದಿಶಾ ಮಾನಿಟರಿಂಗ್ ಸೆಲ್‍ಗೆ  ಜೀವ ವೈವಿಧ್ಯ ಮಂಡಳಿಯ ಎಲ್ಲಾ ಯೋಜನೆಗಳ ದಾಖಲಾತಿಗಳನ್ನು   ಅಪ್‍ಲೋಡ್ ಮಾಡಿ ದೇಶಕ್ಕೆ ಮಾದರಿಯಾಗಲೇ ಬೇಕು ಎಂದು ಪ್ರತಿಪಾದಿಸಿದರು.

ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಕೃಷ್ಣಪ್ಪನವರು ಮಾತನಾಡಿ ಪಾಲಿಕೆಯ ಎಲ್ಲಾ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿರುವ ಉದ್ಯಾನವನಗಳ ಪಟ್ಟಿಯನ್ನು ಲೇಔಟ್‍ವಾರು ಅಧಿಕಾರಿಗಳಿಂದ ತಪಾಸಣೆ ಮಾಡಲಾಗುವುದು ಎಂದರು.ಅಭಿವೃದ್ದಿಗಾಗಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದರು.

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ನಾಗೇಶ್ ರವರು ಮಾತನಾಡಿ ಒಂದು ವಾರದೊಳಗೆ ಲೇಟ್ ವಾರು ಇರುವ ಉದ್ಯಾನವನಗಳ ಪಟ್ಟಿ ಪ್ರಕಟಿಸಲಾಗುವುದು. ನಮ್ಮ ಪಟ್ಟಿ ಆಧಾರದಲ್ಲಿ ಪಾಲಿಕೆಯವರು ಜಿಐಎಸ್ ಲೇಯರ್ ಮಾಡಲಿ, ನಂತರ ಟೂಡಾದಿಂದ ಸಮೀಕ್ಷೆ ಮಾಡಿಸಿ ಹದ್ದು ಭಸ್ತು ನಿಗದಿ ಮಾಡಲಾಗುವುದು ಎಂದರು.

ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ 1999 ರಿಂದಲೂ ಉದ್ಯಾನವನಗಳ ಸಮೀಕ್ಷೆ ಪದ ಕೇಳಿ ಕೇಳಿ ಸಾಕಾಗಿದೆ. ಈ ಆಂದೋಲನ ಯಶಸ್ವಿಯಾಗಲು ಆಡಳಿvದೊಂದಿಗೆ ನಗರದ ಸಂಘಸಂಸ್ಥೆಗಳು ಮತ್ತು ಪರಿಸಾಕ್ತರು ಸಹಕರಿಸಲು ಮನವಿ ಮಾಡಿದರು.ಜಿಐಎಸ್ ಲೇಯರ್ ಮಾಡಿದ್ದರಿಂದ ಎಲ್ಲಾ ಕರಾರುವಕ್ಕಾದ ಮಾಹಿತಿ ದೊರೆಯಲಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರು ಮಾತನಾಡಿ ಒಂದು ತಿಂಗಳೊಳಗಾಗಿ ಎಷ್ಟೆ ಕಷ್ಠವಾಗಲಿ ನಗರದ ಎಲ್ಲಾ ಉದ್ಯಾನವನಗಳ ಜಿಐಎಸ್ ಲೇಯರ್ ಪೂರ್ಣಗೊಳಿಸುವ ಭರವಸೆ ನೀಡಿದರು ಪ್ರತಿ  ಉದ್ಯಾನವನದ ಪರಿಶೀಲನೆಗಾಗಿ ಪಾಲಿಕೆಯ ಎಲ್ಲಾ ನೌಕರರು ಮತ್ತು ಕಾರ್ಮಿಕರಿಗೆ ಅವರ ಮನೆಯ ಅಕ್ಕಪಕ್ಕದ ಉದ್ಯಾನವನ ನಿಗದಿ ಗೊಳಿಸುವ ಮೂಲಕ ಎಲ್ಲರೂ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶಕ್ಕೆ ಮಾದರಿಯಾಗುವ ಇಂಗಿತ ವ್ಯಕ್ತ ಪಡಿಸಿದರು.

ಆಂದೋಲನದಲ್ಲಿ ಪಾಲಿಕೆಯ ಸದಸ್ಯರುಗಳು, ನಾಟಿವೈದ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.