27th July 2024
Share

GOI FUND TRAKING#DISHA#MODI & BOMMAI

TUMAKURU:SHAKTHI PEETA FOUNDATION

ಕೇಂದ್ರ ಸರ್ಕಾರ ತಾನು ನೀಡುವ ಕೇಂದ್ರ ಸರ್ಕಾರದ ಅನುದಾನಗಳ ಸದ್ಭಳಕೆ, ಕಾಲಮಿತಿಯಲ್ಲಿ ಬಳಕೆ, ದುರುಪಯೋಗವಾಗಿದ್ದಲ್ಲಿ ಅಗತ್ಯ ಕ್ರಮ ಮತ್ತು ಹೊಸದಾಗಿ ಕೇಂದ್ರ ಸರ್ಕಾರದಿಂದ ಯಾವ ಯೋಜನೆ ಮಂಜೂರು ಮಾಡಿಸ ಬಹುದು ಎಂಬ ಸಮಾಲೋಚನೆ ಮಾಡಲು ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಮತ್ತು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಲೋಕಸಭಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ರಚಿಸಿದೆ.

ಈ ಸಮಿತಿಗಳಲ್ಲಿ ಸರ್ವ ಪಕ್ಷಗಳ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪರಿಣಿತರು, ಸಂಘ ಸಂಸ್ಥೆಗಳು ಪ್ರತಿನಿಧಿಗಳಿಗೂ ಅವಕಾಶ ಕಲ್ಪಿಸಿದೆ. ಕನಿಷ್ಠ ಪಕ್ಷ ವರ್ಷಕ್ಕೆ 4 ಸಭೆ ನಡೆಸಲು ಸೂಚಿಸಿದೆ. ಸಭೆಗಳ ಖರ್ಚು ವೆಚ್ಚವನ್ನು ಕೇಂದ್ರ ಸರ್ಕಾರವೇ ನೀಡಲಿದೆ.

ದಿಶಾ ಸಭೆಗಳಲ್ಲಿ ನಿರ್ಣಯ ಮಾಡಿದ ವಿಷಯಗಳ ಬಗ್ಗೆ 30 ದಿವಸದೊಳಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ’ ದಿನಾಂಕ:21.09.2019 ರಂದು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ರಚನೆಯಾಗಿದೆ. ಕಳೆದ ಎರಡು ವರ್ಷ ಮತ್ತು ಪ್ರಸಕ್ತ ಸಾಲಿನಲ್ಲಿ ದಿಶಾ ಸಭೆ ನಡೆಸುವಲ್ಲಿ ತುಮಕೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.

ಮೋದಿಯವರ ಪರಿಕಲ್ಪನೆಯಂತೆ ತುಮಕೂರು ಜಿಲೆಯನ್ನು ಡಿಜಿಟಲ್ ಡಾಟಾ ಜಿಲ್ಲೆಯಾಗಿ 2022 ರ 75 ನೇ ವರ್ಷದ ಸ್ವಾತಂತ್ಯ್ರ ದಿನದಂದು ಘೋಷಣೆ ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಆರಂಭದಿಂದಲೇ ಚಾಲನೇ ನೀಡಿದ್ದಾರೆ’.

 ಆದರೇ ಇದೂವರೆಗೂ ತುಮಕೂರು ಜಿಲ್ಲೆಯಲ್ಲಿ ಯಾವ ಇಲಾಖೆ ಅಡಿ, ಎಷ್ಟು ವೆಚ್ಚದ ಯೋಜನೆ ನಡೆಯುತ್ತಿದೆ, ನಡೆದಿದೆ ಎಂಬ ಇಂಡೆಕ್ಸ್ ಸಿದ್ಧಪಡಿಸಲು ಸಾಧ್ಯವೇ ಆಗಿಲ್ಲ. ತುಮಕೂರು ಜಿಲ್ಲೆ ಅಲ್ಲ ದೇಶದ ಯಾವುದೇ ಜಿಲ್ಲೆ ಮಾಡಿಲ್ಲ. ಅಂದ ಮೇಲೆ ಸಂಸದರು ಯಾವ ರೀತಿ ದಿಶಾ ಸಭೆ ನಡೆಸುತ್ತಾರೆ ನೋಡಿ? ನಾಚಿಕೆಯಾಗಬೇಕಲ್ಲವೇ?

ತುಮಕೂರು ಜಿಲ್ಲೆಯಲ್ಲಿ ನಡೆದ ಪ್ರತಿ ದಿಶಾ ಸಭೆಯಲ್ಲಿಯೂ ಈ ಬಗ್ಗೆ ನಾನೇ ವಿಷಯ ಪ್ರಸ್ತಾಪ ಮಾಡಿದ್ದೇನೆ.ಕೆಲವು ಇಲಾಖೆ ಅಧಿಕಾರಿಗಳು ಇನ್ನೂ ಜಪ್ಪಯ್ಯ ಅಂದಿಲ್ಲ ಇಂಥವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲು ಶಿಪಾರಸ್ಸು ಮಾಡದೇ ವಿಧಿಯಿಲ್ಲ ಎಂಬ ಹಂತಕ್ಕೆ ಹೋಗಿದೆ. ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮುಂದಿನ ದಿಶಾ ಸಭೆಯಲ್ಲಿ ಇಂಥಹ ಅಧಿಕಾರಿಗಳ ವಿರುದ್ದ ನಿರ್ಣಯ ಮಾಡಿ ಮಾನ್ಯ ಮುಖ್ಯ ಮಂತ್ರಿಯವರಿಗೆ ಸಲ್ಲಿಸಲೇ ಬೇಕಿದೆ.

ನಮ್ಮ ರಾಜ್ಯ ಮಟ್ಟದಲ್ಲಿ  2016 ರಿಂದ ಆಳಿದ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಾಗಲಿ, ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರಾಗಲಿ ರಾಜ್ಯ ಮಟ್ಟದ ದಿಶಾ ಸಮಿತಿಯನ್ನೇ ರಚಿಸಲಿಲ್ಲ. ಶ್ರೀ ಬಿ.ಎಸ್.ಯಡಿಯೂರಪ್ಪನವರು ರಾಜ್ಯ ಮಟ್ಟದ ದಿಶಾ ಸಮಿತಿಯನ್ನು ರಚಿಸಿದರೂ, 3 ಭಾರಿ ಪ್ರಥಮ ದಿಶಾ ಸಮಿತಿ ಸಭೆ ನಿಗಧಿ ಗೊಳಿಸಿದರೂ, ಸಭೆ ನಡೆಯಲಿಲ್ಲ.

‘ಕಾರಣ ಹುಡುಕಿದರೇ ಮಾಜಿ ಸಚಿವ ಶ್ರೀ ಹೆಚ್.ಕೆ.ಪಾಟೀಲ್ ರವರ ಆರೋಪದಂತೆ ಕೇಂದ್ರ ಸರ್ಕಾರದ ಅನುದಾನವನ್ನು ಬಡ್ಡಿ ಆಸೆಗೆಗಾಗಿ ಕಳ್ಳಗಂಟು ಮಾಡಿ ಬ್ಯಾಂಕಿನಲ್ಲಿ ಠೇವಣೆ ಇಡುವ ಚಾಳಿ, ದಿಶಾ ಸಮಿತಿ ಸಭೆ ನಡೆದರೆ ಬಹಿರಂಗವಾಗಲಿದೆ ಎಂಬ ಭಯ ಕೆಲವು ಅಧಿಕಾರಿಗಳಿಗೆ ಇದೆಯಂತೆ. ಇವರ ಲಾಭಿ ದಿಶಾ ಸಮಿತಿ ಸಭೆ ನಡೆಸಲು ಅಡ್ಡಿ ಮಾಡುತ್ತಿದೆಯಂತೆ.’

ಅಪೆಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಶ್ರೀ ಕೆ.ಎನ್. ರಾಜಣ್ಣವರ ಪ್ರಕಾರ ಇಂಥಹ  ಸುಮಾರು 50000 ಕೋಟಿ ಹಣ ವಿವಿಧ ಬ್ಯಾಂಕುಗಳಲ್ಲಿ ಠೇವಣೆ ಇದೆಯಂತೆ. ಪ್ರತಿ ಜಿಲ್ಲೆಯ ಲೀಡ್ ಬ್ಯಾಂಕ್ ಅಥವಾ ಇತರೆ ಬ್ಯಾಂಕ್ ಅಧಿಕಾರಿಗಳಿಗೆ ಈ ಹಣದ ಬಗ್ಗೆ ಇರುವ ಮಾಹಿತಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗಾಗಲಿ, ಸಂಸದರಿಗಾಗಲಿ ಜಿಲ್ಲಾ ಮಟ್ಟದಲ್ಲಿ ಇಲ್ಲವಂತೆ. ರಾಜ್ಯ ಮಟ್ಟದಲ್ಲಿ ಆಯಾ ಇಲಾಖೆ ಸಚಿವರಿಗಾಗಲಿ, ಮುಖ್ಯ ಮಂತ್ರಿಗಳಿಗಾಗಲಿ ಇಲ್ಲವಂತೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಹಿನ್ನಲೆ ಅರಿತ ಮೋದಿಯವರು ದಿಶಾ ಸಮಿತಿ ರಚಿಸಿದರಂತೆ, ನಿಮ್ಮಂತ ಕೋಟಿ  MODI  ಬಂದರೂ ನಮ್ಮನ್ನು ಅಳ್ಳಾಡಿಸಲು ಸಾಧ್ಯವಿಲ್ಲ ಎಂಬಂತೆ ನಗುತ್ತಿದ್ದಾರಂತೆ ಖಧೀಮರು’. ಈ ಹಿನ್ನಲೆಯಲ್ಲಿ ನೂತನ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾe ಬೊಮ್ಮಾಯಿಯವರು ಈ ಆಫೀಸ್ ಮಾಡಿ ಪೈಲ್ ಟ್ರ್ಯಾಕಿಂಗ್ ಸಿಸ್ಟಂ ಜಾರಿಗೊಳಿಸಿದ ಹಾಗೆ ಕೇಂದ್ರ ಸರ್ಕಾರದ ಅನುದಾನದ ಟ್ರ್ಯಾಕಿಂಗ್ ಸಿಸ್ಟಂ ಜಾರಿ’ ಮಾಡುವರೇ ಕಾದು ನೋಡಬೇಕು.

ಈ ಮಾದರಿಯನ್ನು ಹಲವಾರು ದೇಶಗಳು ಮತ್ತು ಪ್ರತಿಷ್ಠಿತ ಕಂಪನಿಗಳು ಅಳವಡಿಸಿಕೊಂಡಿವೆಯಂತೆ. ಈ ಬಗ್ಗೆ ಒಂದು ಪಿಪಿಟಿಯನ್ನು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಿಗೆ ಪ್ರದರ್ಶಿಸಲು ಸಿದ್ಧತೆ ನಡೆಯುತ್ತಿದೆ.