12th October 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್‍ನಲ್ಲಿ ದಿನಾಂಕ:18.03.2018 ರಂದು ಪೂಜೆ ಮಾಡುವ ಮೂಲಕ ಆರಂಭಿಸಿದ ಮೊದಲನೇ ಹಂತದ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಮೂರು ವರ್ಷಗಳ ಕಾಲ ನಿರಂತರವಾಗಿ ‘ಲೈವ್ ಆರ್ ಅಂಡ್ ಡಿ’ ಮೂಲಕ ಮಾಡುತ್ತಿರುವ ಯೋಜನೆಗಳು ತೃಪ್ತಿ ತಂದಿವೆ.

ದಿನಾಂಕ:22.08.2021 ನೇ ಭಾನುವಾರ ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಎರಡನೇ  ಹಂತದ ಯೋಜನೆಗಳಾದ ಕೆಳಕಂಡ 9 ಕಾಮಗಾರಿಗಳ ಶಂಕುಸ್ಥಾಪನೆ ಸರಣೆ  ಪೂಜಾ ಕಾರ್ಯಕ್ರಮಗಳ ಶುಭಾರಂಭ ಮಾಡಲಾಗುವುದು.  ಉತ್ತರಖಾಂಡದ, ಹರಿಧ್ವಾರ ಜಿಲ್ಲೆಯ ಕಂಕಲ್ ನಲ್ಲಿ ಶಕ್ತಿ ದೇವತೆಯ ಆರಾಧಕರೊಬ್ಬರೂ ನೀಡಿದ ರುದ್ರಾಕ್ಷಿಗಳನ್ನು ಅವರು ಹೇಳಿದ ಸ್ಥಳಗಳಲ್ಲಿ ಪ್ರತಿಷ್ಠಾಪನೆ  ಮಾಡುವ ಮೂಲಕ  ಚಾಲನೆ ನೀಡಲಾಗುವುದು. 

ಪ್ರತಿಯೊಂದಕ್ಕೂ ವಾಸ್ತು, ಆಯಾ, ಶಾಸ್ತ್ರ, ಜೋತಿಷ್ಯ ಮತ್ತು ನಮ್ಮ ಪರಂಪರೆಯ ವಿಧಿ ವಿಧಾನಗಳನ್ನು ಅನುಸರಿಸಲು ನಿಗದಿ ಗೊಳಿಸಿದ ನಂತರ ಹಲವಾರು ಜನರೊಂದಿಗೆ ಸಮಾಲೋಚನೆ ನಡೆಸುವ ಪದ್ಧತಿ ಆರಂಭದಿಂದಲೂ ಜಾರಿಯಲ್ಲಿದೆ.

  1. ವಿಷನ್ ಗ್ರೂಪ್ ಗುಡಿಸಲು ನಿರ್ಮಾಣ. (25 ಅಡಿ ಅಗಲ X 25 ಅಡಿ ಉದ್ದ ನಿವೇಶನ)
  2. ಭಗಿರಥ/ಜಲಲಿಂಗ ತೊಟ್ಟಿ ನಿರ್ಮಾಣ. (25 ಅಡಿ ಅಗಲ X 25 ಅಡಿ ಉದ್ದ ನಿವೇಶನ)
  3. ಯಜ್ಞ /ಹೋಮ ಶಾಲಾ ನಿರ್ಮಾಣ. (25 ಅಡಿ ಅಗಲ X 25 ಅಡಿ ಉದ್ದ ನಿವೇಶನ)
  4. ದಾಸೋಹ ಭವನ ನಿರ್ಮಾಣ. (65 ಅಡಿ ಅಗಲ X 35 ಅಡಿ ಉದ್ದ ನಿವೇಶನ)
  5. ನೈರುತ್ಯ ಭವನ ನಿರ್ಮಾಣ. (65 ಅಡಿ ಅಗಲ X 35 ಅಡಿ ಉದ್ದ ನಿವೇಶನ)
  6. 30 ನದಿ ಜೋಡಣೆ ಪ್ರಾತ್ಯಾಕ್ಷಿಕೆ  ಮತ್ತು ಭಾರತ ನಕ್ಷೆ ಗಡಿ ನಿರ್ಮಾಣ. (550 ಮೀಟರ್ ಉದ್ದ)
  7. ಮಹಾಧ್ವಾರ ನಿರ್ಮಾಣ.(60 ಅಡಿ ಅಗಲದ ರಸ್ತೆ)
  8. ದೇವಾಲಯ ನಿರ್ಮಾಣ. (40 ಅಡಿ ಅಗಲ X 40 ಅಡಿ ಉದ್ದ ನಿವೇಶನ)
  9. 108 ಶಕ್ತಿ ಪೀಠ, 12 ಜ್ಯೋತಿರ್ಲಿಂಗ, 3 ಸಾಯಿಬಾಬಾ ಸೇರಿದಂತೆ ಸುಮಾರು 153 ಪ್ರಾತ್ಯಾಕ್ಷಿಕೆಗಳ ಸೋಲಾರ್ ಲೈಟ್ ಸಹಿತ ನಾಮಫಲಕ ಮತ್ತು ಬೇಸ್ ನಿರ್ಮಾಣ. 

‘ಇಂದಿನಿಂದ ವಿವಿಧ ವರ್ಗದ ಪರಿಣಿತರೊಂದಿಗೆ ಸಮಾಲೋಚನೆ ಆರಂಭವಾಗಿದೆ. ಎಲ್ಲರ ಅಭಿಪ್ರಾಯ ಕ್ರೋಡಿಕರಿಸಿ, ದಿನಾಂಕ:22.08.2021 ರಂದು  ಆರಂಭಿಸಲು ಉದ್ದೇಶಿಸಿರುವುದರಿಂದ ತಾವೂ ತಮ್ಮ ಸಲಹೆಗಳನ್ನು ನೀಡಬಹುದು’.

ಕುಂದರನಹಳ್ಳಿ ರಮೇಶ್.

ಸಂಸ್ಥಾಪಕ ಟ್ರಸ್ಟಿ

ಶಕ್ತಿಪೀಠ ಫೌಂಡೇಷನ್.