30th September 2023
Share

CHITRADURGA: SHAKTHIPEETA CAMPUS

ಶಕ್ತಿಪೀಠ ಕ್ಯಾಂಪಸ್ ವಿಶ್ವದ, ದೇಶದ, ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸುವ ಬುದ್ದಿಜೀವಿಗಳ ತಾಣವಾಗಲಿ ಎಂದು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಕರೆ ನೀಡಿದರು.

ಅವರು ದಿನಾಂಕ:22.08.2021 ರಂದು ಶಕ್ತಿಪೀಠ ಕ್ಯಾಂಪಸ್ ನಲ್ಲಿ ನಡೆದ ನೂತನ ಕಟ್ಟಡದ ಶಂಕುಸ್ಥಾಪನಾ ಕಾರ್ಯ ಕ್ರಮದಲ್ಲಿ   ಭಾಗವಹಿಸಿ ಮಾತನಾಡಿದರು.

ವಿಶ್ವದ 108 ಶಕ್ತಿಪೀಠಗಳ, 12 ಜ್ಯೋತಿರ್ಲಿಂಗಗಳ, ದೇಶದ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆ ಯೊಂದಿಗೆ , ದೇಶದ 37 ರಾಜ್ಯಗಳ ಮತ್ತು ರಾಜ್ಯದ 31 ಜಿಲ್ಲೆಗಳ ಪರಿಣಿತರು ಒಂದೇ ವೇದಿಕೆಯಲ್ಲಿ ಸೇರಿ ಅಭಿವೃದ್ಧಿ ಯೋಜನೆಗಳ ಚಿಂಥನ– ಮಂಥನ ನಡೆಸುವ ಆಲೋಚನೆ ಬಹಳ ಉತ್ತಮವಾಗಿದೆ.

ಧಾರ್ಮಿಕ, ಜ್ಞಾನ, ವಿಜ್ಞಾನ  ಮತ್ತು ಅಭಿವೃದ್ಧಿಯ ಸಂಗಮವಾಗಲಿದೆ ಈ ಕ್ಷೇತ್ರ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ ಶಾಸಕರು, ಕೇಂದ್ರ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಹಳ ಒತ್ತು ನೀಡಿದೆ. ಅದನ್ನು ಗ್ರಾಮೀಣ ಮಟ್ಟದಲ್ಲಿ ಬಳಸಿಕೊಂಡು ರೈತರ ಮತ್ತು ಬಡವರ ಅಭಿವೃದ್ಧಿಗೆ ಅನೂಕೂಲ ಮಾಡುವಂತಹ ಚಿಂತನೆಗಳ ಹೊರಹೊಮ್ಮಬೇಕು.

ನಮ್ಮಲ್ಲಿ ನೂರಾರು ಯೋಜನೆಗಳು ಜಾರಿಯಾಗಲಿವೆ, ಯೋಜನೆ ಜಾರಿಯಾದ ನಂತರ ಅವುಗಳಿಂದ ಯಾರಿಗೆ ಎಷ್ಟರ ಮಟ್ಟಿಗೆ ಅನೂಕೂಲವಾಗಿವೆ ಎಂಬ ಮೌಲ್ಯಮಾಪನ ಅಗತ್ಯ ಎಂದು ಪ್ರತಿ ಪಾದಿಸಿದರು. ಈ ಕ್ಯಾಂಪಸ್ ಒಂದು ಕಾಮನ್ ಫೆಸಿಲೇಟಿ ಸೆಂಟರ್’ ಆಗುವ ಲಕ್ಷಣಗಳಿವೆ. ಸಂಶೋಧಕರು ಇದರ ಪ್ರಯೋಜನ ಪಡೆದುಕೊಳ್ಳ ಬೇಕಿದೆ.

ಕುಂದರನಹಳ್ಳಿ ರಮೇಶ್ ರವರು ನಮ್ಮ ತಂದೆಯವರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಜೊತೆಯಲ್ಲಿ ಧೀರ್ಘ ಕಾಲದ ಒಡನಾಟದ ಅನುಭವಗಳನ್ನು  ಸಾಕಾರಗೊಳಿಸುವ ಕಾರ್ಯ ಆರಂಭ ಮಾಡಲು ಪ್ರಥಮ ಹೆಜ್ಜೆ ಇಟ್ಟಿದ್ದಾರೆ. ಶಕ್ತಿಪೀಠ ಫೌಂಡೇಷನ್  ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಕಾರದೊಂದಿಗೆ ವಿವಿಧ ಯೋಜನೆಗಳ ‘ಪರಿಣಿತರ, ಬುದ್ದಿವಂತರ, ಚಿಂತಕರ ಕಣಜವಾಗಲಿ ‘ಎಂದು  ಶುಭ ಹಾರೈಸಿದರು.

 ಕಾರ್ಯಕ್ರಮದ ನಂತರ ಕ್ಯಾಂಪಸ್ ನ ಲೇ ಔಟ್ ನಲ್ಲಿ ಸುತ್ತಾಡಿ ಮಾಹಿತಿ ಪಡೆದರು. ನೀರು ಮತ್ತು ಪರಿಸರಕ್ಕೆ ಬಹಳ ಒತ್ತು ನೀಡಲಾಗಿದೆ. ‘ಬರದ ನಾಡಿನಲ್ಲಿ  ಇದೊಂದು ಮಲೆನಾಡಿನ ವಾತಾವಾರಣ’ ವಾಗುವ ಆಶಾಭಾವನೆ ವ್ಯಕ್ತ ಪಡಿಸಿದರು. 

 ದಾನಿಗಳು, ಭಕ್ತರು, ಚಿಂತಕರು ಭಾಗವಹಿಸಿದ್ದರು.

About The Author