11th December 2024
Share

CHITRADURGA :SHAKTHI PEETA CAMPUS

ಶಕ್ತಿಪೀಠ ಫೌಂಡೇಷನ್ ನ ಎರಡನೇ ವಾರ್ಷಿಕೋತ್ಸವದಲ್ಲಿ  ಕ್ಯಾಂಪಸ್ ಮಟ್ಟದ, ರಾಜ್ಯ ಸರ್ಕಾರ ಮಟ್ಟದ ಮತ್ತು ಕೇಂದ್ರ ಸರ್ಕಾರ ಮಟ್ಟದ ಹಲವಾರು ಮಹತ್ವದ ಘೋಷಣೆಗಳನ್ನು ಮಾಡಲಾಯಿತು. ವಿವಿಧ ವರ್ಗದ ಪರಿಣಿತರು ಆಯಾ ಯೋಜನೆಗಳ ಜಾರಿ ಮಾಡಲು ‘ವಿಷನ್ ಗ್ರೂಪ್ ಮತ್ತು ಪ್ರಷರ್ ಗ್ರೂಪ್’ ರಚಿಸಿಕೊಂಡು ಶ್ರಮಿಸಲು ತೀರ್ಮಾನಿಸಲಾಗಿದೆ. ಪ್ರತಿಯೊಂದು ಘೋಷಣೆಯ ಅಂಶಗಳನ್ನು ಪ್ರತ್ಯೇಕವಾಗಿ ಬರೆಯಲಾಗುವುದು.

ಕುಂದರನಹಳ್ಳಿ ರಮೇಶ್ ರವರಿಗೆ

  1. ಜನ್ಮ ಕೊಟ್ಟ ತಂದೆ ತಾಯಿ ದಿ.ಕೆ.ಎಸ್.ರಾಮಲಿಂಗಯ್ಯ ಮತ್ತು ಶ್ರೀ ಮತಿ ಪಾರ್ವತಮ್ಮ ಅವರಿಗೆ ‘ಶಕ್ತಿಪೀಠ ಕ್ಯಾಂಪಸ್’ ಅನ್ನೇ ಸಮರ್ಪಣೆ ಮಾಡುವುದಾಗಿ ಘೋಶಿಸಿದ್ದಾರೆ.
  2. ಅವರನ್ನು ಸಾಕಿ ಬುದ್ದಿ ಕಲಿಸಿದವರು ತನ್ನ ತಾಯಿಯ ತಂದೆ ತಾಯಿಯವರಾದ ದಿ. ಚಂದ್ರಹಳ್ಳಿ  ರುದ್ರಣ್ಣನವರು ಮತ್ತು ದಿ.ಈರಮ್ಮನವರು ಅವರ ಹೆಸರಿನಲ್ಲಿ,  ‘ಯಜ್ಞ ಶಾಲೆ’ ನಿರ್ಮಾಣ ಮಾಡುವುದಾಗಿ ಅವರ ವಂಶಸ್ಥರು ಘೋಶಿಸಿದ್ದಾರೆ.
  3. ಅವರನ್ನು ಈ ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬ ಮಾರ್ಗದರ್ಶನ ನೀಡಿದವರು ಹಾಗೂ ತಂದೆ ತಾಯಿ ಜೊತೆಗಿಂತ ಜಾಸ್ತಿ ಕಾಲ ಒಡನಾಟದಲ್ಲಿರುವವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಅವರ ಕುಟುಂಬದ ಹೆಸರಿನಲ್ಲಿ ‘ದಾಸೋಹ ನಿಲಯ’ ನಿರ್ಮಾಣ ಮಾಡುವುದಾಗಿ ಅವರ ಅಭಿಮಾನಿಗಳು ಘೋಶಿಸಿದ್ದಾರೆ. ಇಂದು ಕಟ್ಟಡದ ಪೂಜೆಯು ನಡೆಯಿತು.
  4. ಅವರಿಗೆ ಈ ಕ್ಯಾಂಪಸ್ ನಿರ್ಮಾಣ ಮಾಡಲು ಪ್ರೇರಣೆ ನೀಡಿದವರು ಕರ್ನಾಟಕ ರಾಜ್ಯದ ವಸತಿ ಮತ್ತು ಮೂಲಭೂತ ಸೌಕರ್ಯ ಸಚಿವರಾದ ಶ್ರೀ ವಿ.ಸೋಮಣ್ಣನವರು ಅವರ ಹೆಸರಿನಲ್ಲಿ ‘ಶಕ್ತಿದೇವತೆಯ ದೇವಾಲಯ ನಿರ್ಮಾಣ’ ಮಾಡುವುದಾಗಿ ಅವರ ಅಭಿಮಾನಿಗಳು ಘೋಷಣೆ ಮಾಡಿದ್ದಾರೆ.
  5. ಅವರಿಗೆ ನೀರಾವರಿ ವಿಚಾರದಲ್ಲಿ  ಅವರ ವಿಚಾರಧಾರೆಗಳನ್ನು   ಸಂಪೂರ್ಣವಾಗಿ ಹಂಚಿಕೊಂಡವರು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು, ಅವರ ಹೆಸರಿನಲ್ಲಿ ‘ಭಗಿರಥ ಪ್ರಾತ್ಯಾಕ್ಷಿಕೆ’ ನಿರ್ಮಾಣ ಮಾಡುವುದಾಗಿ ಅವರ ಅಭಿಮಾನಿಗಳು ಘೋಷಣೆ ಮಾಡಿದ್ದಾರೆ.
  6. ಅವರಿಗೆ ಉಧ್ಯಾನವನ ರಕ್ಷಣೆ ಮತ್ತು ಅಭಿವೃದ್ಧಿ, ಪರಿಸರದ ಮಹತ್ವದ ಕಡೆ ನನ್ನ ಗಮನವನ್ನು ವಿಶೇಷವಾಗಿ ಸೆಳೆದವರು ತುಮಕೂರಿನ ದಿ. ಪಾರ್ಕ್ ಪ್ರಹ್ಲಾದ್ ರಾವ್ ಅವರು. ಅವರ ಹೆಸರಿನಲ್ಲಿ ‘ಹಸಿರು ಕ್ಯಾಂಪಸ್’ ನಿರ್ಮಾಣ ಮಾಡುವುದಾಗಿ ಅವರ ಅಭಿಮಾನಿಗಳು ಘೋಷಣೆ ಮಾಡಿದ್ದಾರೆ.
  7. ಅವರಿಗೆ ಹೋರಾಟದ ಮಜಲುಗಳಲ್ಲಿ ಹಲವಾರು ಪಟ್ಟುಗಳನ್ನು ಧಾರೆ ಎರೆದವರು ಕಾರ್ಮಿಕ ಮುಖಂಡರಾದ ದಿ.ಕೆ.ಆರ್. ನಾಯಕ್‍ರವರು ಅವರ ಹೆಸರಿನಲ್ಲಿ ‘ಗುಂಪು ಚರ್ಚೆ ಕಟ್ಟಡ’ನಿರ್ಮಾಣ ಮಾಡುವುದಾಗಿ ಅವರ ಅಭಿಮಾನಿಗಳು ಘೋಷಣೆ ಮಾಡಿದ್ದಾರೆ.
  8. ಅವರ ಜೊತೆಯಲ್ಲಿ ಅಭಿವೃದ್ಧಿ ಒಡನಾಟದ ವಿಷಯಗಳನ್ನು ಹಂಚಿಕೊಂಡವರು ಶ್ರೀ ಟಿ.ಆರ್.ರಘೋತ್ತಮರಾವ್ ರವರು ಅವರ ಹೆಸರಿನಲ್ಲಿ ‘ಅಭಿವೃದ್ಧಿ ಗ್ರಂಥಾಲಯ’ ಕಟ್ಟಡ ನಿರ್ಮಾಣ ಮಾಡುವುದಾಗಿ ಅವರ ಹಿತೈಷಿಗಳು ಹಾಗೂ ಸಹೋಧ್ಯೊಗಿಗಳಾದ ಬೆಸ್ಕಾಂ ಇಲಾಖೆ ತಂಡದವರು ಘೋಷಣೆ ಮಾಡಿದ್ದಾರೆ.
  9. ಅವರಿಗೆ ‘ದೇವಿಪುಸ್ತಕ ಪಾರಾಯಣ’ ಮಾಡಲು ಮೂಲ ಕಾರಣ ಕರ್ತರು ಮಾಧ್ಯಮಿಕ ಶಾಲೆಯಲ್ಲಿ ಹಿಂದಿ ಮಾಸ್ಟರ್ ಆಗಿದ್ದ ಶ್ರೀ ಹನುಮಂತಪ್ಪನವರು ಅವರ ಹೆಸರಿನಲ್ಲಿ ದೇವಿ ಪುಸ್ತಕ ಪಾರಾಯಣ ಕಟ್ಟಡವನ್ನು ನಿರ್ಮಾಣ ಮಾಡುವುದಾಗಿ ಅವರ ಅಭಿಮಾನಿಗಳು ಘೋಷಣೆ ಮಾಡಿದ್ದಾರೆ.

ಶೀಘ್ರದಲ್ಲಿ ಅವರವರ ಕುಟುಂಬದ ಸದಸ್ಯರ ಒಪ್ಪಿಗೆ ಪಡೆದು ನಂತರ ವಿಷನ್ ಗ್ರೂಪ್ ಮತ್ತು ಪ್ರಷರ್ ಗ್ರೂಪ್’ ರಚಿಸಲು ತೀರ್ಮಾನ ಮಾಡಲಾಗಿದೆ.

ಮೇಲ್ಕಂಡವರ ಅಭಿಮಾನಿಗಳು, ಹಿತೈಷಿಗಳು, ಹಳೇ ವಿದ್ಯಾರ್ಥಿಗಳು, ಅವರವರ ಸಹೋಧ್ಯೋಗಿಗಳು, ಅವರವರ ಒಡನಾಡಿಗಳು ಸಂಪರ್ಕಿಸಲು ಮನವಿ.