24th October 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕ ಶ್ರೀ ಕುಂದರನಹಳ್ಳಿ ರಮೇಶ್ ರವರು ಮತ್ತು ಅವರ ತಂಡ 2015 ರಿಂದಲೂ ಸಂಗ್ರಹಿಸಿದ್ಧ ವಿಶ್ವದ 108 ಶಕ್ತಿಪೀಠಗಳ ಮಾಹಿತಿಯ ಜೊತೆಗೆ ನನ್ನ ಸಂಶೋಧನೆಯ ಶಕ್ತಿ ಪೀಠಗಳ ನಾಮಫಲಕವನ್ನು ಶಕ್ತಿ ಕ್ಯಾಂಪಸ್‍ನಲ್ಲಿ ನಿರ್ಮಾಣ ಮಾಡಿರುವ ಭಾರತದ ನಕ್ಷೆಯಲ್ಲಿ ಮುಂದಿನ ನವರಾತ್ರಿ ವೇಳೆಗೆ ಹಾಕಲು ಉದ್ದೇಶಿಸಲಾಗಿದೆ.

ನಂತರ 6 ದೇಶಗಳ ಶಕ್ತಿಪೀಠಗಳ ಮುಖ್ಯಸ್ಥರ ಜೊತೆಗೂ ಸಮಾಲೋಚನೆ ನಡಿಸಿ, ಅವರನ್ನು ಇಲ್ಲಿಗೆ ತಂಡ ತಂಡವಾಗಿ ಕರೆಸಿ ನಮಗೆ ಇರುವ ಅಂತಿಮ ಗೊಂದಲಗಳಿಗೆ ತೆರೆ ಎಳೆಯಲು ಚಿಂತನೆ ನಡೆಸಲಾಗಿದೆ ಎಂದು ಶಕ್ತಿಪೀಠಗಳ ಸಂಶೋಧನಾ ವಿಭಾಗದ ಮುಖ್ಯಸ್ಥರು ಆಗಿರುವ ಶ್ರೀ ಎಲ್.ಕೆ.ಅಶೋಕ್ ರವರು ಘೋಷಣೆ ಮಾಡಿದರು.ಅವರು ಶಕ್ತಿಪೀಠ ಕ್ಯಾಂಪಸ್ ನಲ್ಲಿ ನಡೆದ ಎರಡನೇ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಇದೂವರೆಗೂ ಅಧ್ಯಯನ ಮಾಡಿರುವ ಯಾವುದೇ ಸಂಶೋಧಕರು 108 ಶಕ್ತಿಪೀಠಗಳ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಹಾಗೆ ಕಾಣುತ್ತಿಲ್ಲ, ಇದೊಂದು ಛಾಲೇಂಜ್ ಕೆಲಸ ವಿಶ್ವದಲ್ಲಿನ ಶಕ್ತಿ ಪೀಠ ಸಂಶೋಧಕರ ಸಮಾವೇಶ ನಡೆಸುವ ಚಿಂತನೆಯನ್ನು ರಮೇಶ್ ರವರು ಮಾಡಿದ್ದಾರೆ. ಇಲ್ಲಿ ತಂಗಲು ಕಟ್ಟಡದ ವ್ಯವಸ್ಥೆಯಾಗುವುದನ್ನೇ ಕಾಯುತ್ತಿದ್ದಾರೆ ಎಂದರು.

ನಮಗೆ ದೊರೆತಿರುವ ಶಕ್ತಿಪೀಠಗಳು ಇರುವ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಆರ್.ಟಿ.ಐ ಮೂಲಕ ಖಚಿತ ಮಾಹಿತಿ ಪಡೆಲು ಚಿಂತನೆ ಮಾಡಲಾಗಿದೆ. ನಾನು ಈಗಾಗಲೇ ಸುಮಾರು 80 ಕ್ಕೂ ಹೆಚ್ಚು ಶಕ್ತಿಪೀಠಗಳು ಮತ್ತು ಸಿದ್ಧಿದೇವತೆಗಳ ಸ್ಥಳ ಪ್ರವಾಸ ಮಾಡಿದ್ದೇನೆ. ರಮೇಶ್ ರವರು ಮತ್ತು ನಮ್ಮ ತಂಡ 2019 ರಲ್ಲಿ ಸುಮಾರು 23 ದಿವಸಗಳ ಕಾಲ ಉತ್ತರಾಖಂಡದಲ್ಲಿ ಶಕ್ತಿಪೀಠ ಯಾತ್ರೆ ಮಾಡಿದ್ದೇವು. ಕೊರೊನಾ ಹಿನ್ನೆಲೆಯಲ್ಲಿ ಯಾತ್ರೆ ಸ್ಥಗಿತವಾಗಿದೆ. ಮುಂದೆ ಶಕ್ತಿಪೀಠ ಪ್ಯಾಕೇಜ್ ಸಹ ಮಾಡಲು ಯೋಚಿಸಲಾಗಿದೆ. ಆಸಕ್ತರು ಸಂಪರ್ಕಿಸ ಬಹುದು ಎಂದು ಮನವಿ ಮಾಡಿದರು.

 ತುಮಕೂರಿನಲ್ಲಿ ಸೋಲಾರ್ ಲೈಟ್ ಜೊತೆಗೆ ನಾಮಫಲಕ ಮಾಡುವವರ ಜೊತೆಗೆ ಸಮಾಲೋಚನೆ ನಡೆಲಾಯಿತು. ಶ್ರೀ ನಾಗಕುಮಾರ್ ಮತ್ತು ಶ್ರೀ ಶ್ಯಾಮಸುಂದರ್ ಅವರ ತಂಡ ನವಗ್ರಹಗಳ ನಾಮಫಲಕ ಮಾಡಿರುವ ರೀತಿಯಲ್ಲಿಯೆ ಎಲ್ಲಾ ಪ್ರಾತ್ಯಾಕ್ಷಿಕೆಗಳ ನಾಮಫಲಕ ಮಾಡುವ ಸಂಬಂಧ  ಚರ್ಚೆ ನಡೆಯಿತು. ನಾಮಫಲಕದ ಸಂಯೋಜಕರಾಗಿ ಶ್ರೀ ಪ್ರಮೋದ್ ಮತ್ತು ಶ್ರೀ ಹರೀಶ್ ರವರಿಗೆ ಹೊಣೆಗಾರಿಕೆ ನೀಡಲಾಗಿದೆ. ಎರಡು ತಂಡಗಳಾಗಿ ಶ್ರಮಿಸುತ್ತಿದ್ದಾರೆ.