25th July 2024
Share

ನೀರಾವರಿ ಯೋಜನೆ ಶ್ರೀ ಜಿ.ಎಸ್.ಬಸವರಾಜ್ V/S ಶ್ರೀ ಎಸ್.ಆರ್. ಶ್ರೀನಿವಾಸ್

NATIONAL INFRASTRUCURE PIPE LINE(NIP) 2019-20 TO 2024-25

TUMAKURU:SHAKTHIPEETA FOUNDATION

‘ಜಾಲಗುಣಿ ಡ್ಯಾಂ’ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಒಂದು ಪರಿಕಲ್ಪನೆ. ನನಗೆ ತಿಳಿದ ಹಾಗೆ ಕಳೆದ 25 ವರ್ಷಗಳಿಂದ ಈ ಯೋಜನೆ ಬಗ್ಗೆ ಮಾತನಾಡುತ್ತಾ ಬಂದಿದ್ದೇವೆ.

ತುಮಕೂರು ಜಿಲ್ಲಾ ದಿಶಾ ಸಭೆಯಲ್ಲಿ ಈ ಕೆಳಕಂಡ  ಯೋಜನೆಗಳ ಬಗ್ಗೆ, ಚರ್ಚೆ ಮಾಡಿದ್ದೇವೆ. ಜಲಸಂಪನ್ಮೂಲ   ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್ ರವರ ಅಧ್ಯಕ್ಷತೆಯಲ್ಲಿ ಸಭೆ ಮಾಡುವಾಗ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಮತಿ ಶಾಲಿನಿ ರಜನೀಶ್ ರವರು ಭಾಗವಹಿಸಿದ್ದರು.

ಅಂದು ನಡೆದ ಸಭೆಯ ಪಲಿತಾಂಶ ಪ್ರಸ್ತುತ ಕೇಂದ್ರ ಸರ್ಕಾರ ನೂತನವಾಗಿ ಘೋಶಿಸಿರುವ NATIONAL INFRASTRUCURE PIPE LINE  ಯೋಜನೆಯಡಿಯಲ್ಲಿ ಕರ್ನಾಟಕದಿಂದ ದಿನಾಂಕ:04.12.2019 ರಂದು ಶ್ರೀ ಮತಿ ಶಾಲಿನಿ ರಜನೀಶ್ ರವರು ನೀತಿ ಆಯೋಗದ ವೆಬ್ ಸೈಟ್ ನಲ್ಲಿ ಅಫ್ ಲೋಡ್ ಮಾಡಿರುವ ಯೋಜನೆಗಳಲ್ಲಿ ತುಮಕೂರಿನ ದಿಶಾ ಸಭೆಯಲ್ಲಿ ಚರ್ಚೆ ಮಾಡಿರುವ ಸುಮಾರು ರೂ 2,13,896 ಕೋಟಿ ಯೋಜನೆಗಳು ಸೇರ್ಪಡೆಯಾಗಿವೆ. ಉಳಿದ ಯೋಜನೆಗಳು ಇವೆ. ಅವುಗಳ ಬಗ್ಗೆ ಚರ್ಚೆ ಅನಗತ್ಯ.

  1. ಮಿಷನ್ ಭಗಿರಥ ರೂ 43791 ಕೋಟಿ
  2. ಎತ್ತಿನಹೊಳೆ ಯೋಜನೆ-2  ರೂ 11000 ಕೋಟಿ.
  3. ಕಾಳಿ ಯೋಜನೆ  ರೂ 9000 ಕೋಟಿ
  4. ಮಹಾದಾಯಿ ಯೋಜನೆ ರೂ 1877 ಕೋಟಿ
  5. ಕೃಷ್ಣಾ ಹೆಚ್ಚುವರಿ ನೀರಿನ ಯೋಜನೆ ರೂ 7828 ಕೋಟಿ
  6. ಅಘಿನಾಷಿನಿ ಯೋಜನೆ ರೂ 12600 ಕೋಟಿ
  7. ಬೇಡ್ತಿ ಯೋಜನೆ ರೂ 10000 ಕೋಟಿ
  8. ಶರಾವತಿ ಯೋಜನೆ ರೂ 20000 ಕೋಟಿ
  9. ನೇತ್ರಾವತಿ ಯೋಜನೆ ರೂ 63000 ಕೋಟಿ
  10. ಮೇಕೆದಾಟು ಯೋಜನೆ ರೂ 9000 ಕೋಟಿ
  11. ಕಕ್ಕಟು ಹೊಳೆ ಯೋಜನೆ ರೂ 800 ಕೋಟಿ
  12. ಕಿಂಡಿ ಯೋಜನೆ ರೂ 1800 ಕೋಟಿ
  13. ಕೆ.ಆರ್.ಎಸ್. ಕಬಿನಿ ಮತ್ತು ಹೇಮಾವತಿ ನಾಲಾ ಆಧುನೀಕರಣ ರೂ 3900 ಕೋಟಿ
  14. ಮೈಕ್ರೋ ಇರ್ರಿಗೇಷನ್ ಹೇಮಾವತಿ ರೂ 300 ಕೋಟಿ
  15. ಕುಮಾರ ಧಾರ ಯೋಜನೆ ರೂ 9000 ಕೋಟಿ
  16. ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿಗಾಗಿ ಕೆರೆ ತುಂಬಿಸುವ ಯೋಜನೆ  ರೂ 10000 ಕೋಟಿ

                                    ಒಟ್ಟು ರೂ 213896 ಕೋಟಿ

ಇದರಲ್ಲಿ ಜಾಲಗುಣಿ ಡ್ಯಾಂ’ ಯೋಜನೆಯು ಸೇರ್ಪಡೆ ಆಗಿದೆ. ಎಲ್ಲಿದೆ ಯೋಜನೆ, ಜನರಿಗೆ ಸುಳ್ಳು ಹೇಳುತ್ತಿದ್ದೀರಿ ಎಂದು ಶ್ರೀ ಜಿ.ಎಸ್.ಬಸವರಾಜ್ ರವರನ್ನು ಕೇಳಿದ್ದ ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರೇ

ಈಗ ನಿಮ್ಮ ತಪ್ಪಿನ ಹೇಳಿಕೆಯನ್ನು ತಿದ್ದಿಕೊಳ್ಳುವಿರಾ?

  1. ಶ್ರೀ ಜಿ.ಎಸ್.ಬಸವರಾಜ್ ರವರ ಕನಸಿನ ಯೋಜನೆ ವಿಳಂಭ ಮಾಡುತ್ತಿರುವ  ಸರ್ಕಾರಗಳ ವಿರುದ್ಧ ಸ್ಪೀಡ್ ಮಾಡಿ ಎಂದು ಬೀದಿಗಿಳಿದು ಹೋರಾಟ ಮಾಡುವಿರಾ?
  2. ರೈತರ ಜೀವನ ಹಾಳಾದರೂ ಪರವಾಗಿಲ್ಲ ನಾವೂ ಈ ಯೋಜನೆ ಮಾಡಲು ಬಿಡುವುದಿಲ್ಲಾ ಎಂದು ಹೋರಾಟ ಮಾಡುವಿರಾ?
  3. ನೀವೂ ನನಗೆ ಹೇಳಿದ್ದ ಹಾಗೆ, ನೀನು ಏನೇ ಮಾಡಿದರೂ ನನ್ನ ಬೆಂಬಲ ಇದೆ, ಎಲ್ಲಿಗೆ ಬೇಕಾದರೂ ನಾನು ಬರುತ್ತೇನೆ ಎಂದಿದ್ದೀರಿ ಈಗ ನನ್ನ ಜೊತೆ ಬೀದಿಗಿಳಿಯಲು ಬರುವಿರಾ?
  4. ನೀವೂ ಯಾರು ಬರದಿದ್ದರೂ, ವಿರೋಧ ಮಾಡಿದರೂ ಬಸವರಾಜ್ ರವರು ಮತ್ತು ನಾನು ಬಿಡುವುದಿಲ್ಲಾ. ಒಂದು ಅಂತಿಮ ಹಂತಕ್ಕೆ ಕೊಂಡೋಯ್ಯುತ್ತೇವೆ ಇದೇ ನಮ್ಮ ಅಭಿವೃದ್ಧಿ ಸಮರ?
  5. ತುಮಕೂರು ಜಿಲ್ಲೆ ಅಲ್ಲ, ಇಡೀ ರಾಜ್ಯದ ಎಲ್ಲಾ ಪಕ್ಷಗಳ ನಾಯಕರಿಗೂ ಈ ಯೋಜನೆ ಅರಿವು ಮೂಡಿಸುತ್ತೇನೆ, 
  6. ತಾವು ನನಗೆ ಕೇಳಿದ್ದೀರಿ ರಮೇಶೂ ನಾನು ಬಸವರಾಜ್ ಪ್ರೆಶ್ನೆ ಮಾಡಿದರೇ? ನೀನೂ ಏಕೆ ನನ್ನ ವಿರುದ್ಧ ಹೇಳಿಕೆ ನೀಡಿದೆ, ನನಗೆ ಶ್ರೀನಿವಾಸ್ ಶತ್ರು ಅಲ್ಲ ಸ್ನೇಹಿತರೇ. ಆದರೇ ಇದರಲ್ಲಿ ನನ್ನ ನಿರಂತರ ಶ್ರಮವೂ ಇದೆ ಸ್ವಾಮಿ. ನಾನು ಮಾತನಾಡದಿದ್ದರೆ ಜನರ ದೃಷ್ಠಿಯಲ್ಲಿ ಸುಳ್ಳಿನವರಾಗೆ ಉಳಿಯುತ್ತಿದ್ದೇವು.
  7. ಈ ಯೋಜನೆಗೆ, ಈ ಇಳಿವಯಸ್ಸಿನಲ್ಲಿ ಬಸವರಾಜ್ ರವರ ಶ್ರಮಕ್ಕೆ. ನೀವೂ ನಾಗರೀಕ ಸನ್ಮಾನ ಮಾಡಲೇಬೇಕು, ಇಲ್ಲಿ ಪಕ್ಷ ರಾಜಕಾರಣ, ಜಾತಿ ರಾಜಕಾರಣ ಬೇಡ.ಅಭಿವೃದ್ಧಿ ರಾಜಕಾರಣ ಮಾತ್ರ ನೋಡಿ ಸ್ವಾಮಿ.
  8. ಒಂದು ತಿಳಿದು ಕೊಳ್ಳಿ ಕೇಂದ್ರ ಸರ್ಕಾರದಲ್ಲಿ ಯಾವುದೇ ಯೋಜನೆ ಸೇರ್ಪಡೆ ಆದರೆ ಅರ್ಧ ಕೆಲಸ ಆದ ಹಾಗೆ.
  9. ಇಡೀ ರಾಜ್ಯದ ಯೋಜನೆಯ ಕನಸು ಕಾಣುತ್ತಿದ್ದಾರೆ? ಆ ಪುಣ್ಯಾತ್ಮ.

ಕುಂದರನಹಳ್ಳಿ ರಮೇಶ್.

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ. ಕರ್ನಾಟಕ ಸರ್ಕಾರ.