TUMAKURU:SHAKTHIPEETA FOUNDATION
ತುಮಕೂರು ಏರ್ ಪೋರ್ಟ್ ಪ್ರಸ್ತಾವನೆ ಕಳೆದ 2 ವರ್ಷದಿಂದ ಸುದ್ದಿ ಮಾಡುತ್ತಿದೆ. ಇನ್ನೂ ಒಂದು ಅಂತಿಮ ರೂಪ ಬಂದಿಲ್ಲ. ನಿನ್ನೆ ನಾನು ಶಿರಾ-ಕೊರಟಗೆರೆ-ಮಧುಗಿರಿ ತಾಲ್ಲೋಕುಗಳಲ್ಲಿ ಸರ್ಕಾರಿ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಗೆ ಗುರುತಿಸಿರುವ ಸರ್ಕಾರಿ ಜಮೀನಿನ ನಕ್ಷೆ ಹಾಕಿ ಇಲ್ಲಿ ತುಮಕೂರು ಏರ್ ಪೋರ್ಟ್ ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಲಾಭಿ ಮಾಡಲು ಸಿದ್ಧರಾಗಿದ್ದಾರೆ ಎಂದು ಬರೆದಿದ್ದೆ. ಇದೊಂದು ದೊಡ್ಡ ಸುದ್ದಿಯಾಗಿದೆ ನಮ್ಮ ಇ-ಪೇಪರ್ ಶಕ್ತಿಪೀಠ ಅನ್ನು ಸುಮಾರು 27000 ಜನ ಓದುವ ಮೂಲಕ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.
ದೇಶದಲ್ಲಿ 7 ಮೆಗಾ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಮಾಡಲು ಪ್ರಧಾನಿ ಶ್ರೀ ನರೇಂದ್ರಮೋದಿಯವರು ಘೋಷಣೆ ಮಾಡಿದ್ದಾರೆ.ತುಮಕೂರು ಜಿಲ್ಲೆಗೂ ಒಂದು ಕೊಡಿ ಎಂಬುದು ಸಂಸದರ ಬೇಡಿಕೆ. ನನಗೆ ತಿಳಿದಿರುವ ಪ್ರಕಾರ ಈಗಾಗಲೇ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮೈಸೂರು ಜಿಲ್ಲೆಗೆ ನೀಡಲು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರಂತೆ.
ಈಗಿನ ಮುಖ್ಯಮಂತ್ರಿಯವರ ಮುಂದೆಯೂ 5-6 ಜಿಲ್ಲೆಗಳ ಪ್ರಸ್ತಾವನೆ ಇದೆ. ಶೀಘ್ರದಲ್ಲಿ ಶ್ರೀ ಬೊಮ್ಮಾಯಿಯಯವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರಂತೆ. ಬೊಮ್ಮಾಯಿಯವರು ಎಲ್ಲಾ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಅಲ್ಲಿ ಲಾಭಿ ಮಾಡಿ, ನಮ್ಮ ರಾಜ್ಯಕ್ಕೆ ಒಂದೆರಡು ಪಾರ್ಕ್ ತರುವುದಾದರೆ ನಮ್ಮ ಸಂಸದರು ಶಕ್ತಿ ತೋರಲಿ ಎಂಬ ಕಾಂಪಿಟೇಷನ್ ಮಾಡಲು ಯೋಚಿಸಿದ್ದಾರೆ ಎಂಬ ಗುಸು ಗುಸು ಇದೆ. ಬಸವರಾಜ್ ರವರು ಈಗಾಗಲೇ ಮುಖ್ಯ ಮಂತ್ರಿಯವರ ಮತ್ತು ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಮೊದಲು ನಕ್ಷೆಯಲ್ಲಿರುವ ಗುಬ್ಬಿ ಮತ್ತು ತುಮಕೂರು ತಾಲ್ಲೋಕಿನ ಪ್ರಸ್ತಾವನೆಯನ್ನು ಈಗಾಗಲೇ ತುಮಕೂರು ಏರ್ ಪೋರ್ಟ್‍ಗೆ ಸಲ್ಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿ ಎಂದು ಈ ಭಾಗದ ಹಲವಾರು ಜನ ಕೋರಿದ್ದರು. ಈಗ ಜಮೀನಿನಲ್ಲಿ ಜಾಲಗುಣಿ ಡ್ಯಾಂ ಪ್ರಸ್ತಾವನೆ ಸುದ್ದಿ ಮಾಡುತ್ತಿದೆ.
ಯಾವುದೇ ಯೋಜನೆಗೂ ಮೊದಲು ಪರ-ವಿರೋಧ ಚರ್ಚೆ ಅಗತ್ಯ.