TUMAKURU:SHAKTHI PEETA FOUNDATION
ಭಾರತ ದೇಶದ ನದಿ ಜೋಡಣೆ ಒಂದು ಕನ್ನಡಿಯೊಳಗಿನ ಗಂಟು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಒಂದಲ್ಲ ಒಂದು ದಿನ ಆಗಲೇ ಬೇಕು ಎನ್ನುತ್ತಾರೆ.
ಶಕ್ತಿ ಪೀಠ ಕ್ಯಾಂಪಸ್ ನಲ್ಲಿ ಭೂಮಿಯ ಮೇಲೆ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬಾರತ ನಕ್ಷೆಯನ್ನು ನಿರ್ಮಾಣ ಮಾಡಿ, ಅದರಲ್ಲಿ ಭಾರತ ದೇಶ ಮಾಡಲು ಉದ್ದೇಶಿಸಿರುವ 30 ನದಿಗಳ ಜೋಡಣೆಯ ಪ್ರಾತ್ಯಾಕ್ಷಿಕೆಯನ್ನು ಗುರುತು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಮಾತನಾಡುವುದೇ ಬೇರೆ, ಭಾಷಣ ಮಾಡುವುದೇ ಬೇರೆ, ಭೂಮಿಯ ಮೇಲೆ ಇಳಿಸುವ ಕಾರ್ಯ ಒಂದು ಫ್ಯಾನ್ಸಿಯಾಗಿ ತೆಗೆದುಕೊಂಡರೆ ಮಾತ್ರ ಖುಷಿಯಾಗಲಿದೆ.
ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಟ್ಸ್ ನ ಶ್ರೀ ಸತ್ಯಾನಂದ್ ಮತ್ತು ತಂಡ ಜಿಐಎಸ್ ಆಧಾರಿತ ಭೂಮಿಯ ಮೇಲೆ ಇಳಿಸಲು ಶ್ರಮಿಸುತ್ತಿದೆ. ಶ್ರೀ ಗುರು ಮತ್ತು ತಂಡ ಎಲ್ಲಾ ನದಿಗಳ ಕೋಆರ್ಡಿನೇಟ್ಸ್ ಗಳನ್ನು ಭೂಮಿಯ ಮೇಲೆ ಇಳಿಸಿದ್ದಾರೆ. ಇಂದಿನಿಂದ ನೀರು ಹರಿಸಲು ನದಿ ಹರಿಯುವಂತೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಪೂರ್ವಾಭಿಮುಖವಾಗಿ ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ಮಾರ್ಗ ಗುರುತು ಮಾಡುವುದೇ ಒಂದು ತಮಾಷೆಯಾಗಿದೆ.
ಕೇಂದ್ರ ಸರ್ಕಾರದ ಪ್ರತಿನಿಧಿಗಳು ಬಂದರೇ ಮಾತ್ರ ಕರಾರು ವಕ್ಕಾಗಿ ಮಾಡಬಹುದಾಗಿದೆ ಎಂಬ ಭಾವನೆ ನನ್ನದಾಗಿದೆ.
ಭಾರತ ದೇಶವಾಗಲಿ, ಯಾವುದೇ ರಾಜ್ಯವಾಗಲಿ ಇದೂವರೆಗೂ ಮಾಡದೇ ಇರುವ ಕಾರ್ಯವನ್ನು ಮಾಡಲು ಶಕ್ತಿಪೀಠ ಫೌಂಡೇಷನ್ ಕೈಹಾಕಿದೆ,
ಆಸಕ್ತರು ಸಹಕರಿಸ ಬಹುದು.