15th September 2024
Share

TUMAKURU:SHAKTHI PEETA FOUNDATION                                                          

ಇಂದು ಇಬ್ಬರು(09.10.2021) ಸಂಶೋಧಕರು ಶಕ್ತಿ ಪೀಠ ಕ್ಯಾಂಪಸ್ ಗೆ ಬಂದಿದ್ದರು. ಅವರು ಮಾತಾನಾಡುವ ಶೈಲಿ ನಿಜಕ್ಕೂ ವಿಶ್ವವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರಗಳು ಗಂಜಿ ಕೇಂದ್ರಗಳಂತಾಗಿವೆಯಂತೆ.

ಸಾರ್ ನಮಗೆ ಸರ್ಕಾರಗಳು ಒಳ್ಳೆಯ ವೇತನ ನೀಡುತ್ತಿವೆ. ಯಾವುದೇ ಅಧ್ಯಯನ ಕೇಂದ್ರಗಳನ್ನು ತೆಗೆದುಕೊಳ್ಳಿ ಉಪನ್ಯಾಸಕರನ್ನು ಅಧ್ಯಕ್ಷರು ಅಥವಾ ನಿರ್ದೇಶಕರನ್ನಾಗಿ ನೇಮಕ ಮಾಡುತ್ತಾರೆ. ಅವರಿಗೆ ಲಕ್ಷಗಟ್ಟಲೇ  ವೇತನ ಬಂದರೂ ಪಾಠ ಮಾಡದೇ ಕೇವಲ ರೂ 15000 ದಿಂದ 20000 ರೂಗಳ ಸಂಭಾವನೆ ಪಡೆಯುತ್ತಾ ಕಾಲ ಕಳೆಯುತ್ತಾರೆ. ಶೇ 15 ರಷ್ಟು ಜನ ಪ್ರಾಮಾಣಿಕರಿರಬಹುದು

ರಾಜಕೀಯ ಕ್ಷೇತ್ರಗಳಲ್ಲಿ ನಿಗಮ, ಮಂಡಳಿ, ಕಾರ್ಪೋರೇಷನ್ ಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದರೆ ನಾವು ಅವುಗಳನ್ನು ಗಂಜಿಕೇಂದ್ರಗಳು ಎನ್ನುತ್ತೇವೆ. ಇವು ಅದಕ್ಕಿಂತ ಕಡಿಮೆ ಮಟ್ಟದಂತೆ ಆಗಿವೆ ಎಂಬ ಮಾತನಾಡಿದ್ದು ನಿಜಕ್ಕೂ ಅರ್ಥಪೂರ್ಣವಾಗಿತ್ತು.

ಸರ್ಕಾರಗಳು ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರಗಳಿಗೆ ಪ್ರತಿವರ್ಷ ಇಂಥಹ ಯೋಜನೆಗಳ ಅಥವಾ ವಿಷಯಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಅಧ್ಯಯನ ಬಡ್ಜೆಟ್’ ಮಂಡಿಸಬೇಕು. ಶೇ 50 ರಷ್ಟು ಸರ್ಕಾರ ನಿಗದಿ ಮಾಡುವ ವಿಷಯದಲ್ಲಿ ಅಧ್ಯಯನ ಮಾಡಿದರೇ ಉಳಿದ ಶೇ 50 ರಷ್ಟು ಅವರಿಗೆ ಇಷ್ಟ ಬಂದ ವಿಚಾರದಲ್ಲಿ ಸಂಶೋಧನೆ ನಡೆಸಲಿ ಎಂಬ ಸಲಹೆ ನೀಡಿದರು.

ಇಂದು ಕೇವಲ ಇವರು ಪ್ರಾರ್ಥಿಸಿದರು, ಅವರು ಸ್ವಾಗತಿಸಿದರು, ಇವರು ವಂದಿಸಿದರು, ಅವರು ಅಧ್ಯಕ್ಷತೆ ವಹಿಸಿದ್ದರು ಎಂಬ ಪತ್ರಿಕಾ ವರದಿಗಳಿಗೆ ಸೀಮಿತ ವಾಗಿರುವುದು ಒಂದು ದುರಂತ ಎಂದರು. 

ಒಬ್ಬ ಸಂಶೋಧಕರು ಅವರು ಇಂಜಿನಿಯರಿಂಗ್ ಪ್ರಾಜೆಕ್ಟ್ ವಕ್ರ್ಸ್ ಮಾಡುವಾಗ ಅವರ ತಾಲ್ಲೋಕಿನಾಧ್ಯಾಂತ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಯ ಬಗ್ಗೆ ವರದಿ ಮಂಡಿಸಿದ್ದರಂತೆ. ಅವರು ಇನ್ನೂ ಕೇವಲ 6 ವರ್ಷಗಳಿಗೆ ನಿವೃತ್ತಿ ಹೊಂದುತ್ತಿದ್ದಾರೆ. ಈಗ ಅವರ ಯೋಜನೆಯ ಕನಸು ನನಸಾಗಿದೆ. ಅವರಿಗೆ ಅವರ ಜೀವನವೇ ತೃಪ್ತಿದಾಯಕವಾಗಿದೆ.

ಈಗ ಅವರ ಮಗನಿಂದ ಅಂಥಹುದೇ ಒಂದು ಪ್ರಾಜೆಕ್ಟ್ ವಕ್ರ್ಸ್ ಮಾಡಿದ್ದಾರೆ. ಅದು ಅನುಷ್ಠಾನಕ್ಕೆ ತರಲು ಅವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇದು ನಿಜವಾದ ಸಂಶೋಧನೆಯಲ್ಲವೇ? ವರದಿಗಳು ಕಟ್ ಅಂಡ್ ಪೇಸ್ಟ್ ಆದರೇ ಏನು ಮಾಡಲು ಸಾಧ್ಯಾ? ಈ ತರಹ ಲೈವ್ ಪ್ರಾಜೆಕ್ಟ್ ಆಗ ಬೇಕು ಎನ್ನುವುದು ಅವರ ಅನಿಸಿಕೆ.

ಇನ್ನೊಬ್ಬ ಸಂಶೋಧಕರು 18 ಜಿಲ್ಲೆಗಳ ನೀರಾವರಿ ಯೋಜನೆಗಳ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿದ್ದಾರೆ. ಅವರ ಕನಸು ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದಾಗಿದೆ. ಅವರು ಅಕ್ಷರಷಃ ನಮ್ಮ ಕ್ಯಾಂಪಸ್ ಪರಿಕಲ್ಪನೆ ನೋಡಿ ಸುಸ್ತಾದರು, ಸಾರ್ ನಿಕ್ಕೂ ಇದು ಒಂದು ಅದ್ಭುತವಾದ ಲೈವ್ ಸಂಶೋಧನೆ , ಈ ಕ್ಯಾಂಪಸ್ ನಮ್ಮಂತಹವರ ತವರು ಮನೆಯಾಗಲಿ ಸಾರ್ ಎಂದು ಹಾರೈಸಿದರು.

ಅವರಿಬ್ಬರೂ ಸರ್ಕಾರಿ ಕೆಲಸದಲ್ಲಿರುವದರಿಂದ ಅವರ ಹೆಸರು ಮತ್ತು ಪೋಟೋ ಗಳನ್ನು ಹಾಕದಂತೆ ಎಚ್ಚರ ವಹಿಸಲಾಗಿದೆ. ರಾಜ್ಯ ಸರ್ಕಾರದ ಉನ್ನತ ಅಧಿಕಾರಿಯೊಬ್ಬರೂ ನನಗೆ ನೀಡಿದ ಸಲಹೆ ಇದು. ಸಾರ್ ನೀವೂ ನಮ್ಮ ಪೋಟೋ ಮತ್ತು ಹೆಸರು ಹಾಕಿ ವರದಿ ಮಾಡುತ್ತೀರಿ, ನಮ್ಮ ಉನ್ನತ ಅಧಿಕಾರಿಗಳು ನಮ್ಮ ಮೇಲೆ ಕಣ್ಣು ಇಡುತ್ತಾರೆ, ದಯವಿಟ್ಟು ಈ ಬಗ್ಗೆ ಗಂಭೀರ ಯೋಚನೆ ಮಾಡಿ ಎಂಬ ಸಲಹೆ ನೀಡಿದ್ದರು.

ನಿವೃತ್ತಿ ಆದ ನಂತರ ನಾವು ನಿಮ್ಮ ಜೊತೆ ಇರುತ್ತೇವೆ, ಆಗ ಏನು ಬೇಕಾದರೂ ಮಾಡೋಣ ಎಂಬ ಮಾತು ನನಗೆ ಅಚ್ಚಳಿಯದ ರೀತಿಯಲ್ಲಿ ಉಳಿದಿದೆ.