TUMAKURU:SHAKTHI PEETA FOUNDATION
ಗುಬ್ಬಿ #ಗ್ರಾಮ ಪಂಚಾಯಿತಿ-34 # ಪಟ್ಟಣ ಪಂಚಾಯಿತಿ-1
- ಗುಬ್ಬಿ ತಾಲ್ಲೋಕು ನಕ್ಷೆ ಇದು.
- ಇದರಲ್ಲಿ ಕೆರೆ-ಕಟ್ಟೆಗಳ ಮಾಹಿತಿ ಇದೆ.ಸಣ್ಣ ನೀರಾವರಿ ಇಲಾಖೆ ಟೆಂಡರ್ ನೀಡಿ ಮಾಡಿಸಿದ ನಕ್ಷೆ ಇದು.
- ಇದು ಸರಿಯಾಗಿ ಇದೆಯೇ ಅಥವಾ ತಪ್ಪುಗಳು ಇವೆಯೇ ಎಂಬ ಬಗ್ಗೆ 34 ಗ್ರಾಮ ಪಂಚಾಯಿತಿ ಪಿಡಿಓಗಳು ಮತ್ತು ಒಬ್ಬ ಚೀಪ್ ಆಫೀಸರ್ ತಪಾಸಣೆ ಮಾಡಿ ಅಧಿಕೃತ ಪಟ್ಟಿಯನ್ನು ನೀಡ ಬೇಕಿದೆ.
- ಈ ಕೆರೆಗಳ ಮಾಲೀಕತ್ವ ಯಾವ ಇಲಾಖೆಯದ್ದು ಎಂಬ ಮಾಹಿತಿಯನ್ನು ಆಯಾ ಇಲಾಖೆಗಳು ದೃಢೀಕರಿಸುತ್ತವೆ.
- ರೆವಿನ್ಯೂ ಇಲಾಖೆ ಯಾವುದಾದರೂ ಕೆರೆ-ಕಟ್ಟೆ ಮಿಸ್ ಆಗಿದೆಯೋ ಅxವಾ ಸರಿಯಾಗಿ ಇದೆಯೇ ಎಂಬ ಬಗ್ಗೆ ದೃಢಿüಕರಿಸಬೇಕಿದೆ.
- ಹೇಮಾವತಿ ನೀರಿನ ಅಲೋಕೇಷನ್ ಯಾವ ಕೆರೆಗಳಿಗೆ ಇದೆ ಎಂಬ ಬಗ್ಗೆ ಹೇಮಾವತಿ ಇಲಾಖೆ ನಕ್ಷೆಯಲ್ಲಿ ಮತ್ತು ಪಟ್ಟಿಯಲ್ಲಿ ನಮೂದಿಸಲಿದೆ.
- ಎತ್ತಿನಹೊಳೆ ಅಲೋಕೇಷನ್ ಬಗ್ಗೆ ಎತ್ತಿನಹೊಳೆ ಇಲಾಖೆ ನಕ್ಷೆಯಲ್ಲಿ ಮತ್ತು ಪಟ್ಟಿಯಲ್ಲಿ ನಮೂದಿಸಲಿದೆ.
- ಯಾವ ಕೆರೆಗಳಿಗೆ ಯಾವುದೇ ನೀರಿನ ಅಲೋಕೇಷನ್ ಇಲ್ಲ ಎಂಬ ಪಟ್ಟಿ ದೊರೆತ ನಂತರ, ಈ ಕೆರೆಗಳಿಗೆ ಯಾವ ನದಿ ನೀರು ಅಲೋಕೇಷನ್ ಮಾಡಿಸಬೇಕು ಎಂಬ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯಲಿದೆ.
- ಯಾವ ಗ್ರಾಮದಲ್ಲಿ ಯಾವುದೇ ಮೂಲದ ಜಲಸಂಗ್ರಹಾಗಾರಗಳು ಇಲ್ಲವೋ ಅಂತಹ ಕಡೆ ಎಲ್ಲಿ ಯಾವ ವಿಧವಾದ ಜಲಸಂಗ್ರಹಾಗಾರ ಮಾಡಬೇಕು ಎಂಬ ಪಟ್ಟಿಯನ್ನು ಸಣ್ಣ ನೀರಾವರಿ ಇಲಾಖೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಮಾಡಬೇಕಿದೆ.
- ಜಲಜೀವನ್ ಮಿಷನ್ ಯೋಜನೆಯಡಿ ಯಾವ ಕೆರೆಯಿಂದ ಯಾವ ಗ್ರಾಮಕ್ಕೆ ನೀರು ಸರಬರಾಜು ಮಾಡಬೇಕು, ಎಷ್ಟು ನೀರು ಬೇಕು ಎಂಬ ಬಗ್ಗೆ ನಕ್ಷೆಯಲ್ಲಿ ಗ್ರಾಮೀಣ ಕುಡಿಯುವ ನೀರು ಇಲಾಖೆ ನಮೂದಿಸಲಿದೆ.
- ಹಾಲಿ ಇರುವ ಬಹುÀಗ್ರಾಮ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ತಪಾಸಣಾ ವರದಿಯನ್ನು ಗ್ರಾಮೀಣ ನೀರು ಕುಡಿಯುವ ಇಲಾಖೆ ಸಿದ್ಧಪಡಿಸ ಬೇಕಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಸಮಸ್ಯೆ ಎಲ್ಲಾ ಕಡೆಯೂ ಇದೆ.
- ಪಟ್ಟಣ ಪಂಚಾಯಿತಿಗೆ ಕುಡಿಯುವ ನೀರಿನ ಕೆರೆಯ ಬಗ್ಗೆ ನಕ್ಷೆಯಲ್ಲಿ ನಗರ ನೀರು ಸರಬರಾಜು ಇಲಾಖೆ ನಮೂದಿಸಲಿದೆ.
- DIC, ಕೆಐಎಡಿಬಿ ಮತ್ತು ಕೆಎಸ್ ಎಸ್ ಐಡಿಸಿ ಕೈಗಾರಿಕೆಗಳಿಗೆ ಬಳಸುವ ನೀರಿನ ಕೆರೆಗಳನ್ನು ನಕ್ಷೆಯಲ್ಲಿ ನಮೂದಿಸಲಿದೆ.
- ಅರಣ್ಯ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಜಲಸಂಗ್ರಹಾಗಾರಗಳ ನಕ್ಷೆ ಮತ್ತು ವರದಿಯನ್ನು ಅರಣ್ಯ ಇಲಾಖೆ ಸಿದ್ಧಪಡಿಸಬೇಕಿದೆ.
- ಎಲ್ಲಾ ಇಲಾಖೆಗಳು ಮುಂದಿನ 30 ವರ್ಷಗಳ ಅವಧಿಗೆ ಯೋಜನೆ ರೂಪಿಸಬೇಕಿದೆ.
- ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಗೆ ಶೇ 100 ರಷ್ಟು ಅಗತ್ಯವಿರುವ ನೀರಿನ ಸಾಮಾಥ್ರ್ಯದ ಬಗ್ಗೆ ಉನ್ನತ ಮಟ್ಟದ ಚರ್ಚೆಯಾಗಬೇಕಿದೆ.
- ಹಾಲಿ ನದಿ ನೀರಿನ ಅಲೋಕೇಷನ್ ಮತ್ತು ನದಿ ನೀರಿನ ಡಿಮ್ಯಾಂಡ್ ಸ್ಪಷ್ಟವಾಗಿ ದೊರೆಯಲಿದೆ.
- ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಪಕ್ಕಾ ಅಧ್ಯಯನದ ಮಾದರಿ ಇದಾಗಬೇಕು?
- ನಂತರ ಪ್ರಸ್ತಾವನೆಯನ್ನು ದೊರೆಯುವ ನದಿ ನೀರಿನಲ್ಲಿ ಶೇ ಇಂತಿಷ್ಟು ತುಂಬಿಸಲಾಗುವುದು, ಅಗತ್ಯವಿರುವ ಹೆಚ್ಚಿನ ನದಿ ನೀರಿನ ಯೋಜನೆ ಮಾಡಿದ ನಂತರ ಇದೇ ಪೈಪ್ ಲೈನ್ ಅಥವಾ ಕಾಲುವೆಯಲ್ಲಿ ತುಂಬಿಸಲಾಗುವುದು, ಎಂಬ ಷರತ್ತಿನೊಂದಿಗೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸ ಬೇಕಿದೆ.
- ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ಮಂಜೂರಾಬೇಕಿದೆ.
- ಯಾವ ಕೆರೆಗೆ ಪ್ರತಿ ವರ್ಷ ಎಷ್ಟು ಮಳೆ ನೀರು ಬರಲಿದೆ ಎಂಬ ಗೇಜ್ ಮಾಡುವ ವ್ಯವಸ್ಥೆ ನಿರಂತರವಾಗಿ ಆಗಬೇಕಿದೆ.
- ಮಳೆ ನೀರು ಬರದೇ ಇದ್ದ ಸಂದರ್ಭದಲ್ಲಿ ಮಾತ್ರ ಅಗತ್ಯವಿರುವ ನದಿ ನೀರು ತುಂಬಿಸುವ ವ್ಯವಸ್ಥೆ ಮಾಡಬೇಕಿದೆ.
- ಕೆರೆಗಳ ಅಭಿವೃದ್ಧಿ ಎಂದು ದುಡ್ಡು ಹೊಡೆಯುವ ಬದಲು ಕರಾಬುಹಳ್ಳಗಳ ಸಮಗ್ರ ಅಭಿವೃದ್ಧಿ ಮಾಡಬೇಕಿದೆ.ಪ್ರಸ್ತಾವನೆಯಲ್ಲಿ ಕರಾಬುಹಳ್ಳಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದೆ ಅಥವಾ ನರೇಗಾದಲ್ಲಿ ನಿರಂತರವಾಗಿ ಮಾಡಬೇಕಿದೆ.
- ತಾಲ್ಲೋಕಿಗೊಂದು ಅಥವಾ ಜಿಲ್ಲೆಗೊಂದು ವಾಟರ್ ಬ್ಯಾಂಕ್ ನಿರ್ಮಿಸಬೇಕಿದೆ. ಇಲ್ಲಿ ಸಂಗ್ರಹವಾದ ನೀರನ್ನು ಬರಗಾಲದಲ್ಲಿ ಬಳಸುವ ವ್ಯವಸ್ಥೆ ಮಾಡಬೇಕಿದೆ.
- ಇದು ನ್ಯಾಯಯುತವಾದ ಯೋಜನೆ ಮಾದರಿ, ಉಳಿದಂತೆ ರಾಜಕೀಯಕ್ಕಾಗಿ ಮಾಡಿದ ಯೋಜನೆ ದುಡ್ಡು ಒಡೆಯುವ ಯೋಜನೆ. ಜನರ ಕಣ್ಣಿಗೆ ಮಣ್ಣು ಎರಚುವ ಯೋಜನೆ ಅಷ್ಟೆ.
- ಗುಬ್ಬಿ ಇಂಜಿನಿಯರ್ ಶ್ರೀ ವಿನಯ್ ಇಷ್ಟು ಕೆಲಸ ಮಾಡಬೇPಧ್ಯೀಗಾಗಲೇ ಶೇ 80 ರಷ್ಟು ಪೂರ್ಣಗೊಳಿಸಿದ್ದಾರೆ. ಈ ಬಗ್ಗೆ ಅವರಿಗೆ ಪಕ್ಕಾ ನಾಲೇಡ್ಜ್ ಈಗ ಬಂದಿದೆ. ಆದರೇ 35 ಸ್ಥಳೀಯ ಸಂಸ್ಥೆಗಳ ಪ್ರತ್ಯೇಕ ನಕ್ಷೆ ಸಿದ್ಧ ಪಡಿಸಲು ಹಣ ಪಾವತಿ ಮಾಡುವರು ಯಾರು ಎಂಬ ಚಿಂತನೆ ಅವರಲ್ಲಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳ ಹೊಣೆಗಾರಿಕೆ ಇದಾಗಬೇಕಿದೆ.
- ಈ ರೀತಿ ಮಾಡಿದ ನಕ್ಷೆಯನ್ನು ಗ್ರಾಮ ಪಂಚಾಯಿತಿಗಳಲ್ಲಿ ನಿರಂತರವಾಗಿ ಪ್ರದರ್ಶನ ಮಾಡಬೇಕಿದೆ.
- ಕೆರೆ ಕಟ್ಟೆಗಳ ಸುತ್ತ-ಮುತ್ತ ಮತ್ತು ಕರಾಬು ಹಳ್ಳಗಳ ಅಕ್ಕ-ಪಕ್ಕದಲ್ಲಿ ಗಿಡ ಹಾಕುವ ವ್ಯವಸ್ಥೆ ನಿರಂತರವಾಗಿ ಆಗಬೇಕಿದೆ.
- ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದ ನಂತರ ನಂತರ ಯೋಜನೆಯ ಡಿಪಿಆರ್ ಮಾಡ ಬೇಕಿದೆ. ಅಲ್ಲಿಯವರೆಗೂ ಲೈನ್ ಎಸ್ಟಿಮೇಟ್ ಇದ್ದರೆ ಸಾಕು ಎಂಬ ಭಾವನೆ ಇದೆ. ಅದು ಇಲಾಖೆಗೆ ಬಿಟ್ಟ ವಿಷಯ.
- ಇದೇ ರೀತಿ ತುಮಕೂರು ಜಿಲ್ಲೆಯ 10 ತಾಲ್ಲೋಕುಗಳಲ್ಲಿಯೂ ಸಿದ್ಧವಾಗಬೇಕಿದೆ.
ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ!
ಬಾಯಿದ್ದವನು ಬರದಲ್ಲಿ ಬದುಕಿದ!
ಶಕ್ತಿ ಇದ್ದವನ ರಾಪು!
ಈ ಆಟಕ್ಕೆ ತೆರೆ ಎಳೆಯಲೇ ಬೇಕು.
ಸಾಮಾಜಿಕ ನ್ಯಾಯದ ಅಡಿಯಲ್ಲಿ ಯೋಜನೆ ಜಾರಿಯಾಗ ಬೇಕಾದರೆ. ಪ್ರತಿಯೊಂದು ಗ್ರಾಮದ ಜನತೆ ಸಹಕರಿಸಬೇಕು. ಜೈ ಕಾರ ಹಾಕಿಕೊಂಡು ಕಾಲ ಕಳೆದರೆ ನಿಮ್ಮ ಕರ್ಮ.
ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರು ಈ ಬಗ್ಗೆ ಆಕ್ಟೀವ್ ಆಗಬೇಕಿದೆ.
ಒಂದೇ ಭಾರಿ ಯೋಜನೆಗೆ ಹಣ ಮಂಜೂರಾಗದಿದ್ದರೆ, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಯೋಜನೆ ಕೈಗೊಳ್ಳ ಬಹುದಾಗಿದೆ.ಆದರೇ ಮಾಹಿತಿ ಪಕ್ಕಾ ಇರಲಿ ಎಂಬುದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಖಡಕ್ ನಿರ್ಧಾರ.
ಸಣ್ಣ ನೀರಾವರಿ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಸಹ ಇದನ್ನು ಒಪ್ಪುತ್ತಾರೆ ಎಂಬ ಭರವಸೆ ನನ್ನದಾಗಿದೆ. ಅವರು ಸಲಹೆ ಅಂತಿಮವಾಗಲಿದೆ, ಏಕೆಂದರೆ ಅವರೇ ಸಚಿವರು, ಅವರೇ ದೊರೆ.
‘ಮದುವೆ ಆಗುವವರೆಗೂ ಹುಚ್ಚು ಬಿಡುವುದಿಲ್ಲಾ’ ಎಂಬಂತೆ ಈ ರೀತಿ ಯೋಜನೆ ಆಗುವವರೆಗೂ ನಮ್ಮ ಹುಚ್ಚು ಕಡಿಮೆ ಆಗುವುದಿಲ್ಲ. ಪಾಪ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಯೋಜನೆಯ ಬೀಜ ಹಾಕಿ ಸ್ವರ್ಗದಲ್ಲಿ ನಗುತ್ತಿದ್ದಾರೆ. ಸಾಯಿರಿ ಬಡ್ಡಿ ಮಕ್ಕಳಾ ಅಂತ, ನಾವೂ ಒಂದೇ ಸಮನೆ ಒದ್ದಾಡಿದರೂ ಸಾಧ್ಯವಾಗುತ್ತಿಲ್ಲ ಏಕೆ ಎಂಬುದೇ ಯಕ್ಷ ಪ್ರಶ್ನೆ?
ಇನ್ನೂ ಎಷ್ಟು ವರ್ಷ ತಾಳ್ಮೆಯಿಂದ ಇರಬೇಕು ನೀವೇ ಹೇಳಿ? ಶ್ರೀ ಮೃತ್ಯಂಜಯಸ್ವಾಮಿ ರವರೇ!