17th January 2026
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದಂತೆ ತುಮಕೂರು ದಿಶಾ ಮಾನಿಟರಿಂಗ್ ಸೆಲ್, ದಿಶಾ ಪೋರ್ಟಲ್ ಮತ್ತು ಎಂಪಿ ಪೋರ್ಟಲ್ ಬಗ್ಗೆ ಇಂದು ಎನ್.ಐ.ಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು. ನಾನು ನೀಡಿದ ಸುಮಾರು 77 ಅಂಶಗಳ ಬಗ್ಗೆ ಅಂಶವಾರು ಚರ್ಚೆ ನಡೆಸಲಾಯಿತು. ಇನ್ನೂ ಹೊಸದಾಗಿ ಮೂರು ಅಂಶಗಳನ್ನು ಸೇರ್ಪಡೆ ಮಾಡಲಾಯಿತು.

ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಸಲಹೆ ಮೇರೆಗೆ ತುಮಕೂರು ಜಿಲ್ಲೆಯನ್ನು 2022 ರೊಳಗೆ ಡಾಟಾ ಜಿಲ್ಲೆಯಾಗಿ ಘೋಷಣೆ ಮಾಡಿಸಲು ಕೈಗೊಳ್ಳಬೇಕಾದ ಕಾಲಮಿತಿ ನಿಗದಿ ಅಂಶಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ದಿಶಾ ಸಮಿತಿಯ ನಿರ್ಣಯದ ಮೇರೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಂಬಂದ ಕೈಗೊಳ್ಳ ಬೇಕಾದ ಅಂಶಗಳ ಬಗ್ಗೆಯೂ ಚರ್ಚಿಸಲಾಯಿತು.