22nd December 2024
Share

TUMAKURU:SHAKTHIPEETA FOUNDATION                

ತುಮಕೂರು ಜಿಲ್ಲೆಯಲ್ಲಿನ  330 ಗ್ರಾಮ ಪಂಚಾಯಿತಿಗಳಿಗೂ  ಘನ ತ್ಯಾಜ್ಯ ವಸ್ತು ಘಟಕ ಆರಂಭಿಸಲು  ನಿವೇಶನ ನೀಡಿದ ಜಿಲ್ಲಾಡಳಿತ ಮಹತ್ವದ ಕಾರ್ಯ ಮಾಡಿದೆ.

ಕೇವಲ ನಾಲ್ಕು ಗ್ರಾಮಪಂಚಾಯಿತಿಗಳಿಗೆ  ಮಾತ್ರ ನಿವೇಶನ  ನೀಡುವುದು ಬಾಕಿ ಇದೆ ಎಂಬ ಅಂಶ ನಿನ್ನೆ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಚರ್ಚೆಯಾಯಿತು. ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಈ ಅಂಶವನ್ನು ಪ್ರಕಟಿಸಿದರು.

ಜಿಲ್ಲಾ ಪಂಚಾಯತ್ ಸಿಇಓ ರವರಾದ ಶ್ರೀ ಕೆ.ವಿದ್ಯಾಕುಮಾರಿಯವರು ಮಾಹಿತಿ ನೀಡಿದ ಪ್ರಕಾರ ನೀವೇಶನ ನೀಡಿದ ಎಲ್ಲಾ ಗ್ರಾಮಪಂಚಾಯಿತಿಗಳು ನರೇಗಾ ಯೋಜನೆಯಡಿ ಘನತ್ಯಾಜ್ಯ ವಸ್ತು ಘಟಕದ ಕೆಲಸ ಆರಂಭಿಸಿವೆಯಂತೆ. 54 ಗ್ರಾಮ ಪಂಚಾಯಿತಿಗಳಲ್ಲಿ  ಮಾತ್ರ ಬದಲಿ ನಿವೇಶ£ದ ಬಗ್ಗೆ ಸಮಾಲೋಚನೆ ನಡೆಯುತ್ತಿದೆಯಂತೆ.

ಇನ್ನೂ ಒಂದೆರಡು ತಿಂಗಳಲ್ಲಿ ಜಿಲ್ಲೆಯ 330 ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ವಸ್ತು ಘಟಕಗಳ ನಿವೇಶನ ಮತ್ತು ಘಟಕ ಆರಂಭಿಸುವ ಮೂಲಕ ಸ್ವಚ್ಚ ಭಾರತದ ಕನಸಿಗೆ  ಸ್ಪಂಧಿಸಿದ್ದಾರೆ.

ನಿವೇಶನ ನೀಡಿದ ಜಿಲ್ಲಾಡಳಿತ ಮತ್ತು ಘಟಕ ಆರಂಭಿಸಿದ ಜಿಲ್ಲಾಪಂಚಾಯತ್ ಕಾರ್ಯ ನಿಜಕ್ಕೂ ಸ್ವಾಗಾತಾರ್ಹ.

ತುಮಕೂರು ಜಿ.ಐ.ಎಸ್ ಪೋರ್ಟಲ್ ನಲ್ಲಿ ಘನತ್ಯಾಜ್ಯ ವಸ್ತು ಘಟಕದ ಇತಿಹಾಸ ಸಹಿತ ಜಿ.ಐ.ಎಸ್. ಲೇಯರ್ ಮಾಡುವ ಮೂಲಕ ಸಾರ್ವಜನಿಕರ ವೀಕ್ಷಣೆಗೂ ಚಾಲನೆ ನೀಡುವುದು ಅಗತ್ಯವಾಗಿದೆ.