23rd May 2024
Share

TUMAKURU:SHAKTHIPEETA FOUNDATION

ಆಗಸ್ಟ್ 15 – 2022 ರ ಒಳಗೆ ತುಮಕೂರು ಜಿಲ್ಲೆ ಡಿಜಿಟಲ್ ಡಾಟಾ ಜಿಲ್ಲೆಯಾಗಿ ಘೋಷಣೆಯಾಗ ಬೇಕಾದರೆ ಯಾವ ಇಲಾಖೆ ಏನೇನು ಮಾಡಬೇಕು ಎಂಬ ಮಾಹಿತಿಯುಳ್ಳ ಅಧ್ಯಯನ ವರದಿಯನ್ನು ಸಿದ್ಧಪಡಿಸುವುದು ಅಗತ್ಯವಾಗಿದೆ ಎಂಬ ಅಂಶ ನಿನ್ನೆ ನಡೆದ(06.11.2021) ದಿಶಾ ಸಭೆಯಲ್ಲಿ ನನಗೆ ಮನವರಿಕೆಯಾಯಿತು.

ಪ್ರಧಾನಿ ಶ್ರೀ ನರೇಂದ್ರಮೋದಿಯವರು ಮತ್ತು ಮಾಜಿ ಪ್ರಧಾನಿ ಶ್ರೀ ಮನೋಮೋಹನ್ ಸಿಂಗ್ ರವರ ಅವಧಿಯಿಂದ ಡಿಜಿಟಲ್ ಡಾಟಾ ಬಗ್ಗೆ ಒಂದು ಕ್ರಾಂತಿ ಆರಂಭವಾಗಿದೆ.

ಮೋದಿಯವರು ಈ ಯೋಜನೆಗೆ ವೇಗವಾಗಿ ಚಾಲನೆ ನೀಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ  ಅಧ್ಯಕ್ಷತೆಯ ದಿಶಾ ಸಮಿತಿ 2022 ರೊಳಗೆ ತುಮಕೂರು ಜಿಲ್ಲೆಯನ್ನು ಡಾಟಾ ಜಿಲ್ಲೆಯಾಗಿ ಘೋಷಣೆ ಮಾಡಲು ಚಿಂತನೆ ನಡೆಸಿದೆ.

ಈ ಹಿನ್ನಲೆಯಲ್ಲಿ ಈಗಾಗಲೇ

  1. ತುಮಕೂರು ಜಿ.ಐ.ಎಸ್ ಪೋರ್ಟಲ್ ಲೋಕಾರ್ಪಣೆಯಾಗಿದೆ.
  2. ತುಮಕೂರು ಎಂಪಿಪೋರ್ಟಲ್ ಗೆ ಚಾಲನೆ ನೀಡಲಾಗಿದೆ.
  3. ತುಮಕೂರು ದಿಶಾ ಪೋರ್ಟಲ್ ಪ್ರಗತಿಯಲ್ಲಿದೆ.

ತುಮಕೂರು ಜಿಲ್ಲಾ ದಿಶಾ ಸದಸ್ಯ ಕಾರ್ಯದರ್ಶಿ ಶ್ರೀಮತಿ ಕೆ.ವಿದ್ಯಾಕುಮಾರಿಯವರು, ತುಮಕೂರು ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್ ರವರು, ರಾಜ್ಯ ಮಟ್ಟದ ದಿಶಾ ಸದಸ್ಯ ಕಾರ್ಯದರ್ಶಿಯವರಾದ ಶ್ರೀ ಶಾಲಿನಿರಜನೀಶ್ ರವರು ಹಾಗೂ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಪಿ.ರವಿಕುಮಾರ್ ರವರ  ಮಾರ್ಗದರ್ಶನ ಮತ್ತು ಸಲಹೆ ಪಡೆದು ತುಮಕೂರು ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಪಕ್ಕಾ ಮಾಹಿತಿಯುಳ್ಳ ಅಧ್ಯಯನ ವರದಿ ಸಿದ್ಧವಾಗಬೇಕಿದೆ.

ತುಮಕೂರು ಜಿಲ್ಲೆಯ ನ್ಯಾಯಾಂಗ ಇಲಾಖೆಯ ಆಸ್ತಿಗಳ ಜಿ.ಐ.ಎಸ್. ಲೇಯರ್ ಗೆ ನ್ಯಾಯ ಮೂರ್ತಿಗಳ ನೇತೃತ್ವದಲ್ಲಿ ಚಾಲನೆ ನೀಡುವ ಮೂಲಕ ಆರಂಭಿಸಿ, ಪ್ರತಿಯೊಂದು ಇಲಾಖೆಯ ಎಲ್ಲಾ ಯೋಜನೆಗಳ ಜಿ.ಐ.ಎಸ್.ಲೇಯರ್ ಮತ್ತು ಮಾಹಿತಿಗಳನ್ನು ಅಫ್ ಡೇಟ್ ಮಾಡಿಸಿ, ಅಂತಿಮವಾಗಿ ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮಗಳ ಸ್ಮಶಾನಗಳ ಜಿಐಎಸ್ ಲೇಯರ್ ಮಾಡುವ ಮೂಲಕ, ಡಿಜಿಟಲ್ ಇಂಡಿಯಾ ಮಾರ್ಗದರ್ಶಿ ಸೂತ್ರದ ಪ್ರಕಾರ ಬೆರಳ ತುದಿಯಲ್ಲಿ ಡಿಜಿಟಲ್ ಮಾಹಿತಿ ದೊರೆಯಲು ಅಗತ್ಯ ಇರುವ ಮಾಹಿತಿಯ ಕಣಜ ಶೀಘ್ರದಲ್ಲಿ ರಿಯಲ್ ಟೈಮ್/ ಲೈವ್ ಸಂಶೋಧನೆ ಮೂಲಕ ನಡೆಯಲಿದೆ.

ದಿಶಾ ಪೋರ್ಟಲ್ ಓಪನ್ ಮಾಡಿದರೆ ಎಲ್ಲಾ ಇಲಾಖೆಗಳ, ಪ್ರತಿಯೊಂದು ಯೋಜನೆಗಳ ಲಿಂಕ್ ಗಳು ಮತ್ತು ಶೇಕಡವಾರು ಪ್ರಗತಿ ಮಾಹಿತಿ ಒಂದೇ ಕಡೆ ಜನತೆಗೆ ದೊರೆಯುವ ಆಶಾಭಾವನೆ ನಮ್ಮದಾಗಿದೆ.

ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪ್ರಾಜೆಕ್ಟ್ ಮಾಡುವ ವಿದ್ಯಾರ್ಥಿಗಳ ಸಹಕಾರದೊಂದಿಗೆ, ಪ್ರತಿಯೊಂದು ಇಲಾಖೆಗಳವಾರು ವiತ್ತು ಸ್ಥಳೀಯ ಸಂಸ್ಥೆಗಳ ವಾರು ಮಾಹಿತಿ ಸಂಗ್ರಹಿಸಲಿದೆ. ಡಿಜಿಟಲ್ ಮಾಹಿತಿ ಇಲ್ಲದ ವಿಷಯಗಳ ಬಗ್ಗೆ ಯಾರು ಹೇಗೆ ಮಾಹಿತಿ ಮಾಡಬೇಕು ಎಂಬ ಪಟ್ಟಿಯೂ ದೊರೆಯಲಿದೆ.

ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯ ಡಾಟಾ ಆಪರೇಟರ್ ಗಳಿಂದ ಆರಂಭಿಸಿ, ಉನ್ನತ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಲೇ ಬೇಕಿದೆ. ಎಲ್ಲಾ ಯೋಜನೆಗಳ ಡಿಜಿಟಲ್ ಮಾಹಿತಿ ಸಂಗ್ರಹಣೆ ನಂತರ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಮತ್ತು ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರ ಸ್ಪಷ್ಟ ಸಂದೇಶಗಳೊಂದಿಗೆ ಅಧ್ಯಯನ ವರದಿ ಪೂರ್ಣಗೊಳ್ಳಲಿದೆ.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ದಿನಾಂಕ:10.11.2017 ರಂದು ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ಸಮ್ಮಖದಲ್ಲಿ ಜನತೆಯ ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡಲಾಗಿತ್ತು. ನಾಲ್ಕು ವರ್ಷಗಳ ನಂತರ ದಿನಾಂಕ:10.11.2021 ರಂದು ಜಮ್ಮು ಮತ್ತು ಕಾಶ್ಮಿರದಲ್ಲಿರುವ ಪ್ರಮುಖ ಶಕ್ತಿಪೀಠವಾದ ಶ್ರೀ ವೈಷ್ಣವೀ ದೇವಿಗೆ ಪೂಜೆ ಸಲ್ಲಿಸುವ ಮಾಲಕ ತುಮಕೂರು ಡಾಟಾ ಜಿಲ್ಲೆ-2022’ ರ ಅಧ್ಯಯನ ವರದಿ ಆರಂಭಿಸಲು ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂನ್ ಫೋರಂ ವತಿಯಿಂದ ಚಾಲನೆ ನೀಡಲಾಗುವುದು.

ಅಂತಿಮವಾಗಿ ಪೂರ್ಣಗೊಂಡ ನಂತರ ಅಸ್ಸಾಂ ನಲ್ಲಿರುವ ಪ್ರಮುಖ ಶಕ್ತಿಪೀಠವಾದ ಕಾಮಾಕ್ಯ ಶಕ್ತಿಪೀಠದಲ್ಲಿ ಪೂಜೆ ಸಲ್ಲಿಸುವ ಮೂಲಕ ದೇಶದಲ್ಲಿಯೇ ತುಮಕೂರು ಮಾದರಿ ಯೋಜನೆಗೆ ಶ್ರಮಿಸಿದ ತೃಪ್ತಿ ಅನುಭವಿಸಲು ಚಿಂತನೆ ನಡೆಸಲಾಗಿದೆ. ಇದೇ ಶಕ್ತಿಪೀಠದ ಆರಾಧನೆ ಎಂಬ ಭಾವನೆ ನಮ್ಮದಾಗಿದೆ..

ರಿಯಲ್ ಟೈಮ್ ಸಂಶೋಧನೆ ಎಂದರೆ ಅಧ್ಯಯನ ಮಾಡಿದ ಅಂಶಗಳು ತುಮಕೂರು ಜಿಲ್ಲಾ ದಿಶಾ ಪೋರ್ಟಲ್ ನಲ್ಲಿ ದಾಖಲೆಯಾಗಲಿವೆ. ಒಂದು ವೇಳೆ ದಾಖಲೆ ಆಗದೇ ಇದ್ದಲ್ಲಿ ಯಾವ ಕಾರಣಕ್ಕೆ ಸಾಧ್ಯಾವಿಲ್ಲ ಎಂಬ ಮಾಹಿತಿಯೂ ದೊರೆಯಲಿದೆ.

ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ರಘು ರವರೊಂದಿಗೆ ಡಿಜಿಟಲ್ ಚರ್ಚೆ ಮಾಡುವ ಮೂಲಕ, ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್ ರವರು ನಿನ್ನೆ(06.11.2021) ರಂದು ನಡೆದ ದಿಶಾ ಸಮಿತಿಯಲ್ಲಿ ಆರ್.ಟಿ.ಐ ಮಾಲಕ ನೀಡುವ ಎಲ್ಲಾ ಮಾಹಿತಿಗಳು ಒಂದೇ ಪೋರ್ಟಲ್ ನಲ್ಲಿ ಬರಲು ತೊಂದರೆ ಏನು ಎಂಬ ಪ್ರಶ್ನೆ ಮೂಲಕ ಎಲ್ಲಾ ಅಧಿಕಾರಿಗಳಿಗೂ ಸ್ಪಷ್ಟ ಸಂದೇಶ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎನ್.ಐ.ಸಿ ಶುಭ ಆರಂಭ ಮಾಡಲಿದೆ. ಪ್ರತಿ ವಾರದ ಆಕ್ಷನ್ ಪ್ಲಾನ್ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಆರಂಭವಾಗಲಿದೆ. ನಮ್ಮ ಕೆಲಸ ಪ್ರತಿ ಇಲಾಖೆಯಲ್ಲಿರುವ ಮಾಹಿತಿಯನ್ನು ಎನ್.ಐ.ಸಿಗೆ ದೊರಕುವಂತೆ ಅಥವಾ ಪೋರ್ಟಲ್‍ಗೆ ಲಿಂಕ್ ಮಾಡುವಂತೆ  ಮತ್ತು ಹೊಸದಾಗಿ ಅಗತ್ಯವಿರುವ ಮಾಹಿತಿಯನ್ನು ಸಿದ್ಧಪಡಿಸಲು ಆಯಾ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡುವುದೇ ಅಧ್ಯಯನ ವರದಿಯ ಪ್ರಮುಖ ಅಂಶವಾಗಿದೆ.

ಒಂದು ಜಿಲ್ಲೆ- ಒಂದು ನಕ್ಷೆ ಹಾಗೂ ಒಂದು ಜಿಲ್ಲೆ- ಒಂದೇ ಡಾಟಾ ಬಗ್ಗೆ ಸರ್ಕಾರಿ ಅದೇಶದ ಅಗತ್ಯವಿದೆಯಂತೆ ನಂತರ ನೋಡೋಣ.

ತುಮಕೂರು ಜಿಲ್ಲೆಯಲ್ಲಿರುವ 352 ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಸಮಿತಿಗಳ ಸಹಕಾರ ಪಡೆಯುವ ಮೂಲP,À ಜೀವ ವೈವಿಧ್ಯ ದಾಖಲಾತಿ ಪರಿಪೂರ್ಣಗೊಳಿಸಲು ಪ್ರತಿ ಗ್ರಾಮಗಳ ಇತಿಹಾಸ ಪುಸ್ತಕ ಮಾಡುವ ಮೂಲಕ ಒಂದು ಕ್ರಾಂತಿ ಮಾಡಲೇ ಬೇಕು ಎಂಬ ಮಹತ್ವಾಕಾಂಕ್ಷೆ ಶ್ರೀ ಜಿ.ಎಸ್.ಬಸವರಾಜ್ ರವರದ್ದಾಗಿದೆ.

ಇದು ನಿಖರವಾದ ಗ್ರಾಮಗಳ ಡಿಜಿಟಲ್ ಮಾಹಿತಿ ಸಂಗ್ರಹಣೆಗೆ ವರದಾನವಾಗಲಿದೆ. ಈ ಬಗ್ಗೆ ದಿಶಾ ಸಮಿತಿಯಲ್ಲಿ ಚರ್ಚೆಯಾಗಿದೆ.

ಮುಂದಿನ ಸಂಚಿಕೆಯಲ್ಲಿ ವಿವರವಾದ ಮಾಹಿತಿ ನೀಡಲಾಗುವುದು.