12th September 2024
Share

TUMAKURU:SHAKTHI PEETA FOUNDATION

ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಕುಮಾರ್ ನಾಯಕ್ ರವರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸುತ್ತಿರುವ ಶ್ರೀ ಜಿ.ಎಸ್.ಬಸವರಾಜ್ ರವರು

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಪತ್ರ. ಅವರ ಕನಸುಗಳನ್ನು ನನಸು ಮಾಡಲು ಮುಂದಾದ ಶಕ್ತಿಪೀಠ ಫೌಂಡೇಷನ್.

ಕ್ರಮಾಂಕ:ತುಎಂಪಿ/ಜೀವೈ/ಪಿಬಿಆರ್/1/2021                                 ದಿನಾಂಕ:08.11.2021

ಗೆ.

ಅಧ್ಯಕ್ಷರು.

ಕರ್ನಾಟಕ ಜೀವ ವೈವಿದ್ಯ ಮಂಡಳಿ

ಕರ್ನಾಟಕ ಸರ್ಕಾರ. ಬೆಂಗಳೂರು

ಮಾನ್ಯರೇ.

ವಿಷಯ: ಬಯೋಡೈವರ್ಸಿಟಿ ಯೋಜನೆಗಳ ಬಗ್ಗೆ.

  ತುಮಕೂರಿನ ಶಕ್ತಿಪೀಠ ಫೌಂಡೇಷನ್ (988677447)  ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಾಮುನುಸಾರ. ತುಮಕೂರು ಜಿಲ್ಲೆಯ ತುಮಕೂರು ವಿಶ್ವವಿದ್ಯಾಲಯ, ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜುಗಳು, ಎನ್.ಎಸ್.ಎಸ್. ಇಕೋಕ್ಲಬ್ ಗಳು, ಯುವ ಸಂಘಟನೆಗಳು, ಸ್ರ್ತೀಶಕ್ತಿ ಸಂಘಟನೆಗಳು, ರೈತರ ಸಂಘಟನೆಗಳು, ಹಿರಿಯ ನಾಗರೀಕರು, ವಿದ್ಯಾರ್ಥಿಗಳು, 352 ಎನ್.ಜಿ.ಓ ಗಳು, ಪರಿಣಿತ ವ್ಯಕ್ತಿಗಳು, ನಾಟಿ ವೈದ್ಯರು, ಹಕೀಮರು, ಪಾರಂಪರಿಕ ವೈದ್ಯರು ಮತ್ತು ನಾಲೇಡ್ಜಬಲ್ ಪರ್ಸನ್‍ರವರ ನೇತೃತ್ವದಲ್ಲಿ ವಿಷನ್ ಗ್ರೂಪ್ ರಚಿಸಿಕೊಂಡು ಅವರ ಶ್ರಮದಾನ ಮತ್ತು ಸಹಕಾರÀದೊಂದಿಗೆ ಮತ್ತು ಸರ್ಕಾರಗಳ ವಿವಿಧ ಯೋಜನೆಗಳ ಕನ್ವರ್ಜೆನ್ಸ್ ಅಡಿಯಲ್ಲಿ,  ಈ ಕೆಳಕಂಡ ಯೋಜನೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ. ಆದ್ದರಿಂದ ಇವರ ಜೊತೆ ಸಮಾಲೋಚನೆ ನಡೆಸಿ, ಅರ್ಹತೆ ಆಧಾರದ ಮೇಲೆ  ಅಗತ್ಯ ಕ್ರಮಕೈಗೊಳ್ಳಲು ಕೋರಿದೆ.

  1. ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಜೆ.ಜಿ.ಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿನ ಬಗ್ಗನಡು ಕಾವಲ್‍ನಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಜೀವ ವೈವಿಧ್ಯ ಪಾರ್ಕ್ ನಿರ್ಮಾಣ ಮಾಡುವುದು.
  2. ತುಮಕೂರು ಜಿಲ್ಲೆಯಲ್ಲಿನ 11 ವಿಧಾನಸಭಾ ಕ್ಷೇತ್ರಗಳಲ್ಲಿನ. 330 ಗ್ರಾಮಪಂಚಾಯಿತಿಯಗಳು, 11 ನಗರ ಸ್ಥಳೀಯ ಸಂಸ್ಥೆಗಳು,  10 ತಾಲ್ಲೋಕು ಪಂಚಾಯಿತಿಗಳು ಮತ್ತು 1 ಜಿಲ್ಲಾ ಪಂಚಾಯಿತಿ ಸೇರಿದಂತೆ 352 ಬಿಎಂಸಿಗಳ ಮಾನಿಟರಿಂಗ್ ಸೆಲ್ ಅರಂಭಿಸುವುದು.
  3. ತುಮಕೂರು ಜಿಲ್ಲೆಯ 352 ಪಿಬಿಆರ್ ಮೌಲ್ಯಮಾಪನ ಮಾಡುವುದು.
  4. ತುಮಕೂರು ಜಿಲ್ಲೆಯಲ್ಲಿ ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣ ಮಾಡುವುದು.
  5. ತುಮಕೂರು ಜಿಲ್ಲೆಯಲ್ಲಿ ಊರಿಗೊಂದು ಗ್ರಾಮ ಇತಿಹಾಸ ಪುಸ್ತಕ ರಚಿಸುವುದು.

ವಂದನೆಗಳೊಂದಿಗೆ                                                   ತಮ್ಮ ವಿಶ್ವಾಸಿ

                                                               (ಜಿ.ಎಸ್.ಬಸವರಾಜ್)

ಪ್ರತಿಯನ್ನು ಸದಸ್ಯ ಕಾರ್ಯದರ್ಶಿರವರಿಗೆ ಅಗತ್ಯ ಕ್ರಮ ಕೈಗೊಳ್ಳಲು ರವಾನಿಸಿದೆ.

ತಾವೂ ನಮ್ಮೊಂದಿಗೆ ಕೈಜೋಡಿಸ ಬಹುದು.