15th January 2025
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 5 ಗ್ರಾಮ ಪಂಚಾಯಿತಿಗಳನ್ನು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿದ್ದಾರೆ.

ಕೊರೊನಾ ವiಹಾಮಾರಿ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳ ವರ್ಗಾವಣೆಯಿಂದ ಸಂಸದರ ಆದರ್ಶ ಗ್ರಾಮ ಗಳ ಪ್ರಗತಿ ಕುಂಠಿತವಾಗಿದೆ. ಜಿಲ್ಲಾ ಪಂಚಾಯತ್ ನ 5 ಅಧಿಕಾರಿಗಳು ಸಹ ಒಂದೊಂದು ಗ್ರಾಮಪಂಚಾಯಿತಿ ನೋಡೆಲ್ ಆಫೀಸರ್ ಆಗಿ ನೇಮಕವಾಗಿದ್ದಾರೆ.

ಅವರೆಲ್ಲರೂ ದಿನಾಂಕ:06.11.2021 ರಂದು ನಡೆದ ದಿಶಾ ಸಭೆಯಲ್ಲಿ ಒಂದು ವಾರದೊಳಗೆ ವಿಲೇಜ್ ಡೆವಲಪ್ ಮೆಂಟ್ ಪ್ಲಾನ್ ಮಾಡಿ ಅಫ್ ಲೋಡ್ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಒಂದು ಗ್ರಾಮಪಂಚಾಯಿತಿ ವಿಡಿಪಿ ಮಾಡಿದೆ.

ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ವಿಡಿಪಿ ಮಾಡಿ ಪಟ್ಟಿ ತನ್ನಿ ನಾನು ಸಭೆಯಲ್ಲಿ ಭಾಗವಹಿಸಿ ಅನುದಾನ ನೀಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಿಇಓ ರವರು ಖಡಕ್ ಸೂಚನೆ ನೀಡಿದ್ದಾರೆ.

ಈ 5 ಜನ ಅಧಿಕಾರಿಗಳು ಮನಸ್ಸು ಮಾಡಿದರೇ ನಿಜಕ್ಕೂ ಅದರ್ಶ ಮಾಡಬಹುದು. ಇವರ ಜೊತೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮನ್ವಯ ಸಾಧಿಸಲು ಪಿಡಿಓಗಳು ಅಥವಾ ಗ್ರಾಮ ಪಂಚಾಯತ್ ಸದಸ್ಯರು, ಉಪಾದ್ಯಕ್ಷರು ಮತ್ತು ಅಧ್ಯಕ್ಷರು ಶ್ರಮಿಸಬೇಕಿದೆ.

ಇಂದಿನ ವ್ಯವಸ್ಥೆ ಅಧ್ಯಯನ ಮಾಡಿದರೆ, ಈ 5 ಗ್ರಾಮಪಂಚಾಯಿತಿಗಳ ಗುತ್ತಿಗೆದಾರರಿಗೆ ಸಂಸದರು ಪತ್ರನೀಡಿ ಸ್ಪಂಧಿಸಿದರೆ, ಅವರಿಗೆ ಯೋಜನೆಗಳನ್ನು ಮಂಜೂರು ಮಾಡಿಸುವ ‘ಪಟ್ಟು ಮತ್ತು ಗುಟ್ಟು’ ಎರಡು ಗೊತ್ತಿದೆ. ಸ್ವಲ್ಪವಾದರೂ ಕೆಲಸ ಆಗಲಿದೆ. ಇದು ಇಂದಿನ ಪ್ರಜಾ ಪ್ರಭುತ್ವದ ಮೂಲ ಭೂತ ಹಕ್ಕಿನಂತಾಗಿದೆ.

5 ಜನ ನೋಡೆಲ್ ಆಫೀಸರ್ ರವರು ಮತ್ತು ಪಿಡಿಓ ರವರು ಈ ಬಗ್ಗೆಯೂ ಚಿಂತನೆ ನಡೆಸುವುದು ಸೂಕ್ತ ಎನಿಸುತ್ತಿದೆ.