TUMAKURU:SHAKTHIPEETA FOUNDATION
ರಾಜಧಾನಿ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ ತುಮಕೂರು ಜಿಲ್ಲೆಯಲ್ಲಿ ಆಗಲಿದೆ ಅಥವಾ ಬಿಡದಿ-ರಾಮನಗರದ ಕಡೆ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಯೋಜನಾ ಇಲಾಖೆಯೂ ಈ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದೆ ಎಂಬ ಸುದ್ದಿ ಇದೆ.
ತುಮಕೂರು ಜಿಲ್ಲಾಡಳಿತ ಸುಮಾರು 4000 ಎಕರೆ ಜಮೀನು ಗುರುತಿಸಿ, ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಮತ್ತೆ ಸರ್ಕಾರಿ ಜಾಗ ನೀಡಿದರೆ ಉತ್ತಮ ಎಂಬ ಮೌಖಿಕ ಸಲಹೆಯ ಹಿನ್ನಲೆಯಲ್ಲಿ ವಸಂತನರಸಾಪುರದ ಕೈಗಾರಿಕಾ ನೋಡ್ ಗೆ ಹೊಂದಿಕೊಂಡಂತೆ ಶಿರಾ-ಮಧುಗಿರಿ-ಕೊರಟಗೆರೆ ತಾಲ್ಲೋಕುಗಳಲ್ಲಿ ಸರ್ಕಾರಿ ಜಾಗ ಗುರುತಿಸಿ ಅಲ್ಲಿ ಮಾಡಿದರೇ ಹೇಗೆ ಎಂಬ ಚರ್ಚೆ ಆರಂಭವಾಯಿತು.
ಈ ಮಧ್ಯೆ ಕೆಂಪೆಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆ ಸಂಸ್ಥೆಯು ಇನ್ನೂ 30 ವರ್ಷ ಸುತ್ತಲೂ 150 ಕೀಮೀ ವ್ಯಾಪ್ತಿಯಲ್ಲಿ ಯಾವುದೇ ಹೊಸ ವಿಮಾನ ನಿಲ್ಧಾಣ ಮಾಡಬಾರದು ಎಂಬ ಒಪ್ಪಂದವನ್ನು ಸರ್ಕಾರಗಳೊಂದಿಗೆ ವಿಸ್ತರಣೆ ಮಾಡಿಕೊಂಡಿದೆ ಎಂಬ ಸುದ್ದಿ ಹರಡಿದೆ, ನಮಗೆ ಇನ್ನೂ ಸೂಕ್ತ ದಾಖಲೆ ದೊರಕಿಲ್ಲ.
ಶ್ರೀ ಜಿ.ಎಸ್.ಬಸವರಾಜ್ ರವರು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡುವ ಜೊತೆಗೆ ಖುದ್ಧಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಿಖರವಾದ ಮಾಹಿತಿ ಸಂಗ್ರಹಸಿದ ನಂತರವೇ ಅಂತಿಮ ನಿರ್ಣಯ. ಅವರ ಕನಸು ಭಗ್ನವೇ ಅಥವಾ ಜೀವಂತವಾಗಿದಿಯೇ ಎಂಬ ವಿಚಾರ ತಿಳಿಯಲಿದೆ.