15th September 2024
Share

TUMAKURU:SHAKTHI PEETA FOUNDATION

ಕರ್ನಾಟಕ ಜೀವ ವೈವಿಧ್ಯ ಮಡಳಿ ಇದು ನಿಜಕ್ಕೂ ನಮ್ಮ ರಾಜ್ಯದ ಭವಿಷ್ಯ ಬರೆಯುವ ಸಂಸ್ಥೆ, ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಿಎಂಸಿ ಗಳ ಮಾನಿಟರಿಂಗ್ ಮಾಡುವ ಅಫೆಕ್ಸ್ ಸಂಸ್ಥೆ. ನಿಮ್ಮ ಸಂಸ್ಥೆ ಚುರುಕಾದರೆ ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿಯೂ ಆಂದೋಲನ ಸೃಷ್ಠಿಸ ಬಹುದು.

ನಾನು ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ಪ್ರಧಾನಿ ಮೋದಿಯವರಿಗೆ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಸಮಿತಿಗಳ, ಜೀವ ವೈವಿಧ್ಯ ದಾಖಲಾತಿಗಳ, ಪಾರಂಪರಿಕ ವೈಧ್ಯರ, ಹಕೀಮರ ಮತ್ತು ನಾಟಿ ವೈಧ್ಯರ ಹಾಗೂ ನಾಲೆಡ್ಜಬಲ್ ಪರ್ಸನ್ ಇವರ ಡಾಟಾ ಬೇಸ್ ಬಗ್ಗೆ ಪತ್ರ ಬರೆಯ ಬೇಕೆಂಬ ನಿರ್ಧಾರ ಮಾಡಿದ್ದೇನೆ.

ಇದು ನನ್ನ ಕರ್ತವ್ಯವೂ ಹೌದು. ನಾನು ನಿಮ್ಮ ಕಚೇರಿಗೆ ಮೂರು ಭಾರಿ ಭೇಟಿ ನೀಡಿದ್ದೇನೆ, ಒಮ್ಮೆ ಕಚೇರಿ ಅಟೆಂಡರ್ ಮಾತನಾಡಿಸಿ ಕೊಂಡು ಬಂದೆ, ಉಳಿದವರು ಇರಲಿಲ್ಲ. ಇನ್ನೊಮ್ಮೆ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಅನಿತಾ ಅರೆಕಲ್ ರವರು ಮತ್ತು ಶ್ರೀಮತಿ ಪವಿತ್ರರವರ ಜೊತೆಯಲ್ಲಿ ಸಮಾಲೋಚನೆ ಸಭೆ ನಡೆಸಿ ಬಂದೆ. ಮೂರನೇ ಭಾರಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಯಲ್ಲಿ ಬಂದಾಗ ತಾವೂ ಮತ್ತು ತಮ್ಮ ಸದಸ್ಯ ಕಾರ್ಯದರ್ಶಿರವರ ಜೊತೆಯೂ ಸಮಾಲೋಚನೆ ಮಾಡಿ ಬರಲಾಯಿತು.

ಅಂದು ಸದಸ್ಯಕಾರ್ಯದರ್ಶಿಯವರು ಸಾರ್ ನೀವೂ ಬಂದು ಹೋದ ಮೇಲೆ ರಾಜ್ಯದಲ್ಲಿ ಆರು ಕಡೆ  ಕರ್ನಾಟಕ ಮೂಲಿಕಾ ಉತ್ಸವ ಮತ್ತು ಪಾರಂಪರಿಕ ವೈದ್ಯ ಸಮ್ಮೇಳನ ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು. ಬಹಳ ಒಳ್ಳೆಯ ನಿರ್ಧಾರ ನಿಮಗೆ ಅಭಿನಂದನೆ.

ಈ ಸಮ್ಮೇಳನದ ಬಗ್ಗೆ  ಸಲಹೆಗಳು ಈ ಕೆಳಕಂಡಂತಿವೆ.

  1. ರಾಜ್ಯದ ಎಲ್ಲಾ ಬಿಎಂಸಿಗಳು ಈಗಾಗಲೇ ಮಾಡಿರುವ ಸಭೆಗಳ ಮಾಹಿತಿ.
  2. ರಾಜ್ಯದ ಎಲ್ಲಾ ಪಿಬಿಆರ್ ಗಳ ಸ್ಥಿತಿ ಗತಿ ಬಗ್ಗೆ ಮಾಹಿತಿ.
  3. ರಾಜ್ಯದ ಪ್ರತಿ ಗ್ರಾಮದ ನಾಟಿ ವೈದ್ಯರು, ಪಾರಂಪರಿಕ ವೈದ್ಯರು ಮತ್ತು ಹಕೀಮರ ಪಟ್ಟಿ ಮತ್ತು ಮಾನದಂಡಗಳ ಮಾಹಿತಿ.
  4. ರಾಜ್ಯದ ಪ್ರತಿ ಗ್ರಾಮದ ನಾಲೇಡ್ಜಬಲ್ ಪರ್ಸನ್ ಪಟ್ಟಿ ಮತ್ತು ಮಾನದಂಡ ಮಾಹಿತಿ.
  5. ರಾಜ್ಯದ ಪ್ರತಿ ಗ್ರಾಮದಲ್ಲಿರುವ ಔಷಧಿ ಸಸ್ಯಗಳ ಪಟ್ಟಿ.
  6. ರಾಜ್ಯದ ಪ್ರತಿ ಗ್ರಾಮದಲ್ಲಿ ರುವ ಜಲಮೂಲಗಳ ಮಾಹಿತಿ.
  7. ರಾಜ್ಯದ ಎಲ್ಲಾ ಗ್ರಾಮಗಳ ನಕ್ಷೆ ಸಹಿತ ಪಿಬಿಆರ್ ಅಂಶಗಳಲ್ಲಿನ ಮಾಹಿತಿ.

 ನೀವೂ ಈ ಎಲ್ಲಾ ಮಾಹಿತಿ ಇದ್ದಲ್ಲಿ ಈ ಬಗ್ಗೆ ಸಮ್ಮೇಳನಗಳಲ್ಲಿ ಚರ್ಚಿಸಿ, ಅವರಿಗೆ ಗುರುತಿನ ಪತ್ರ ಹಾಗೂ ಅರ್ಹತಾ ಪತ್ರಗಳನ್ನು ನೀಡುವುದು ಒಳ್ಳೆಯದು. ಒಂದು ವೇಳೆ ಈ ಮಾಹಿತಿಗಳ ಪಕ್ಕಾ ಇಲ್ಲದೆ ಇದ್ದಲ್ಲಿ, ತಾಜಾ ಮಾಹಿತಿ ಸಂಗ್ರಹಿಸುವ ಸಮ್ಮೇಳನಗಳು ಇವು ಆಗಲಿ ಎಂಬುದು ನನ್ನ ಅನಿಸಿಕೆ. ತಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸುವಿರಾ?

FRLHT ಸಂಸ್ಥೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಲಾಯಿತು.

PRASANNA SHANKAR, GURUSIDDRADYA, SATHYANAND AND DHARANENDRA

FRLHT ಔಷಧಿ ಸಸ್ಯಗಳ ನರ್ಸರಿ ವೀಕ್ಷಣೆ ಮಾಡಲಾಯಿತು.