22nd December 2024
Share

TUMAKURU:SHAKTHIPEETA FOUNDATION

ಗ್ರೇಟರ್ ನೋಯಿಡಾ ಕೈಗಾರಿಕಾ ಪ್ರದೇಶ 124 ಗ್ರಾಮಗಳ 38000 ಹೆಕ್ಟೇರ್ ಅಂದರೆ ಸುಮಾರು 95000 ಎಕರೆ ಪ್ರದೇಶದಲ್ಲಿದೆ. ಇದನ್ನು ಬಿಟ್ಟರೆ ಎರಡನೆಯ ದೊಡ್ಡ ತುಮಕೂರು ಜಿಲ್ಲೆಯ ವಸಂತನರಸಾಪುರ  ಕೈಗಾರಿಕಾ ಪ್ರದೇಶ ಸುಮಾರು 13500 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಇನ್ನೂ ವಿಸ್ತಾರ ಕೈಗೊಳ್ಳುವ ಲಕ್ಷಣಗಳೇ ಜಾಸ್ತಿ ಇವೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ದೂರದೃಷ್ಟಿ ಯೋಜನೆಯಲ್ಲಿ ಇದು ಒಂದು. ಆಗಿನ ಯುಪಿಎ-1 ನೇತೃತ್ವದ ಪ್ರಧಾನಿಯವರಾದ ಶ್ರೀ ಮನೋಮೋಹನ್ ಸಿಂಗ್‍ರವರ ಸರ್ಕಾರದ ಬೃಹತ್ ಕೊಡುಗೆ ಎಂದರೆ ತಪ್ಪಾಗಲಾರದು. ರಾಜ್ಯದಲ್ಲಿ 2008 ರಲ್ಲಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ನಾನು ಶ್ರೀ ಟಿ.ಆರ್.ರಘೋತ್ತಮರಾವ್ ಈ ಯೋಜನೆಯನ್ನು ಏಕೆ ತುಮಕೂರಿಗೆ ತರಬಾರದು ಎಂದು ಯೋಚನೆ ಮಾಡಿದೆವು.

ಬಸವರಾಜ್ ರವರು ಮಾಜಿಯಾಗಿದ್ದರು. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮನವಿ ಮೇರೆಗೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್ ಸುರೇಶ್ ಕುಮಾರ್ ರವರು ಮತ್ತು ಆವರ ಆಪ್ತ ಕಾರ್ಯದರ್ಶಿಯವರಾದ ಶ್ರೀ ಡಾ.ಮಂಜುನಾಥ್ ರವರು ನಮ್ಮ ಮನವಿಗೆ ಸ್ಪಂಧಿಸಿ ಕೆ.ಐ.ಡಿ.ಬಿ.ಗೆ ಪತ್ರ ಬರೆದಿದ್ದರು.

ಶ್ರೀ ರಾಮಕೃಷ್ಣ ಎಂಬುವರು ಭೂ ಸ್ವಾಧಿನ ಅಧಿಕಾರಿಯಾಗಿದ್ದರು. ಇಬ್ಬರು ತುಮಕೂರು ನಗರದ ಹೊಯ್ಸಳ ಹೋಟೆಲ್ ನಲ್ಲಿ ಕಾಫಿ ಕುಡಿಯುವಾಗ ನಮ್ಮ ಪತ್ರದ ಬಗ್ಗೆ ಚರ್ಚೆ ಮಾಡಿದೆವು. ಇನ್ನೂ ಕೇಂದ್ರ ಸರ್ಕಾರದಲ್ಲಿ ಡ್ರಾಪ್ಟ್ ಹಂತದಲ್ಲಿರುವ ಯೋಜನೆಗೆ 5000 ಹೆಕ್ಟೇರ್ ಭೂಮಿ ಭೂ ಸ್ವಾಧಿನ ಮಾಡಲು ಮಾಡಿದ ಮನವಿ ನೋಡಿ ಅವರು  ನಕ್ಕಿದ್ದರು.

 ಆದರೂ 12500 ಎಕರೆ ಪ್ರದೇಶವನ್ನು ಭೂ ಸ್ವಾಧೀನ ಮಾಡಲು ನೋಟಿಫಿಕೆಷನ್ ಮಾಡುವಲ್ಲಿ ಯಶಸ್ವಿಯಾದೆವು. ಈಗಲೂ ಅವರು ನಿವೃತ್ತಿಯಾಗಿದ್ದರೂ ನನಗೆ ಹಲವಾರು ಯೋಜನೆಗಳ ಬಗ್ಗೆ ಸಲಹೆ ನೀಡುತ್ತಿದ್ದಾರೆ.

ನಂತರ ಶ್ರೀ ಜಿ.ಎಸ್.ಬಸವರಾಜ್‍ರವರು ನಾಲ್ಕನೇ ಭಾರಿ ಗೆದ್ದ ಮೇಲೆ ಯೋಜನೆ ಮಂಜೂರು ಮಾಡಿಸಿದರು. ಆಗಲೂ ರಾಜ್ಯದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿ ಶ್ರೀ ಮುರುಗೇಶ್ ನಿರಾಣಿಯವರು ಇದ್ದು ಸಹಕಾರ ನೀಡಿದ್ದರು.  ಈಗ ಐದನೇ ಭಾರಿ ಗೆದ್ದ ನಂತರ ಬಸವರಾಜ್ ರವರು ಕೇಂದ್ರ ಸರ್ಕಾರದಲ್ಲಿ ರೂ 1700 ಕೋಟಿ ಯೋಜನೆಗೆ ಮಂಜೂರಾತಿಗೆ ಕಾರಣರಾದರು ಅದು ಇತಿಹಾಸ.

ತುಮಕೂರು ಜಿಲ್ಲಾ  ಮಟ್ಟದ ದಿಶಾ ಸಮಿತಿಯಲ್ಲಿ ಹಸಿರು ಕೈಗಾರಿಕಾ ವಲಯ ಮಾಡಲು ನಿರ್ಣಯ ಮಾಡಲಾಗಿದೆ. ಏಕೋ ಏನೋ ನಮ್ಮ ಶ್ರೀ ಸುನಿಲ್ ರವರು ಪ್ರಸ್ತಾವನೆ ಸಿದ್ಧಪಡಿಸಲು ವಿಳಂಭ ಮಾಡಿದ್ದ ಹಿನ್ನಲೆಯಲ್ಲಿ  ನಿನ್ನೆ 12.11.2021 ರಂದು ಅವರ ಕಚೇರಿಗೆ ಹೋಗಿ ಸಮಾಲೋಚನೆ ಮಾಡಲಾಯಿತು.

ಅವರಿಗೆ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಸಭೆ ಕರೆದು ಪ್ರಸ್ತಾವನೆ ಸಿದ್ಧಪಡಿಸಲು ಸಲಹೆ ನೀಡಿದೆ. ಈ ಬಗ್ಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್ ರವರಿಗೂ ಮನವರಿಕೆ ಮಾಡಲಾಯಿತು. ಅವರು ಸಹ ಇದೊಂದು ಒಳ್ಳೆಯ ಯೋಜನೆ. ಗಿಡ ಹಾಕಲೇ ಬೇಕು, ಹಾಕದಿದ್ದರೆ ದಿಶಾ ಸಮಿತಿಯಲ್ಲಿ ನಿಮ್ಮ ಚಾಟಿ ಎದುರಿಸಬೇಕಲ್ಲ ಎಂದು ತಮಾಷೆ ಮಾಡಿದಂತಿತ್ತು ಅವರ ಮಾತು.

ಶ್ರೀ ಮನೊಹನ್ ಸಿಂಗ್ ರವರ ನಿಮ್ಜ್  ಈಗ ಶ್ರೀ ನರೇಂದ್ರಮೋದಿಯವರ ಇಂಡಸ್ಟ್ರಿಯಲ್ ನೋಡ್ ಆಗಿದೆ. ಹೆಸರು ಏನೇ ಇರಲಿ ಪಲ್ಯೂಷನ್ ಫ್ರೀ ಕೈಗಾರಿಕಾ ಪ್ರದೇಶ ಮಾಡಲು ಚಿಂತನೆ ನಡೆಸಬೇಕಿದೆ, ಮರಗಿಡ, ನೀರು, ಪರಿಸರ ಮೌಲ್ಯ ಮಾಪನ ಇತ್ಯಾದಿ ಯೋಜನೆಯ ಅಗತ್ಯವಿದೆ.

ವಿಶ್ವದ ಬೆಸ್ಟ್ ಪ್ರಾಕ್ಟೀಸಸ್ ಯೋಜನೆಯ ಅಧ್ಯಯನ ಮಾಡಿ ಯೋಜನೆ ರೂಪಿಸಬೇಕಿದೆ. ಸುಮಾರು ಕನಿಷ್ಟ 10 ವರ್ಷಗಳ ಕಾಲ ನಿತಂರವಾಗಿ ಮಾನಿಟರ್ ಮಾಡಬೇಕಿದೆ. ಇದು ನಮ್ಮ ಶಕ್ತಿಪೀಠ ಡಾಟಾ ಪಾರ್ಕ್ ನ ಮೊದಲ ಯೋಜನೆ. ವಸಂತ ನರಾಸ ಪುರದ  ಮೊದಲನೇ ಹಂತದಲ್ಲಿ ಶಕ್ತಿಪೀಠ ಡಾಟಾ ಪಾರ್ಕ್ ಆರಂಭವಾಗಲಿದೆ.

ಶಕ್ತಿಪೀಠ ಡಾಟಾ ಪಾರ್ಕ್ ಆರಂಭಕ್ಕೂ ಮುನ್ನ ಹಸಿರು ನಿಮ್ಜ್ ಜಾರಿಯಾಗಲೇ ಬೇಕು. ಗ್ರೀನ್ ಆಡಿಟ್ ಡಾಟಾ ಬೇಸ್ ಆಗಬೇಕು. ಪ್ರತಿಯೊಂದು ಕೈಗಾರಿಕಾ ಪ್ಲಾಟ್ ನವರು ನಿಯಾಮುನುಸಾರ ಗಿಡ ಬೆಳೆಸಬೇಕು. ತಮ್ಮ ಕೈಗಾರಿಕಾ ಪ್ಲಾಟ್ ನ ಮುಂದಿನ ರಸ್ತೆಯ ಅಕ್ಕ-ಪಕ್ಕದ ಪ್ರದೇಶವನ್ನು ದತ್ತು ತೆಗೆದುಕೊಂಡು ಹಸಿರು ಯೋಜನೆ ರೂಪಿಸಬೇಕು.

 ಇದೇ ಪ್ರದೇಶದಲ್ಲಿ ತಲೆ ಎತ್ತಲಿರುವ ಹಿಮಾಲಯ ಡ್ರಗ್ ಕಂಪನಿಯವರಿಗೆ ಅಗತ್ಯವಿರುವ ಔಷಧಿ ಗಿಡಗಳ ಪ್ರಾತ್ಯಾಕ್ಷಿಕೆ ಬೆಳೆದು ಸುತ್ತಮುತ್ತಲಿನ ರೈತರು ಔಷಧಿ ಗಿಡ ಬೆಳೆಯಲು ಪ್ರೋತ್ಸಾಹ ಮಾಡುವಂತಿರಬೇಕು.ಆಯುಷ್ ಮಂಡಿ ಇಲ್ಲಿ ಆರಂಭವಾಗ ಬೇಕು.

ಕೈಗಾರಿಕಾ ಪ್ರದೇಶದಲ್ಲಿನ ಮತ್ತು ಸುತ್ತಲೂ ಒಂದು ಕೀಮೀ ಸುತ್ತಳತೆಯಲ್ಲಿರುವ ಅರಣ್ಯ ಮತ್ತು ಸಾಮಾಜಿಕ ಅರಣ್ಯ ಪ್ರದೇಶಗಳ ಹಸಿರು ಅಭಿವೃದ್ಧಿ ಯೋಜನೆ ರೂಪಿಸಬೇಕು ಇದೊಂದು ಹಸಿರು ಮಯವಾಗಬೇಕು ಎಂಬ ಚಿಂತನೆಗೆ ಚಾಲನೆ ನೀಡುವುದು ಅಗತ್ಯವಾಗಿದೆ. ಈಗಲೂ ಶ್ರೀ ಮುರುಗೇಶ್ ನೀರಾಣಿಯವರು ಬೃಹತ್ ಕೈಗಾರಿಕಾ ಸಚಿವರಾಗಿದ್ದಾರೆ ಈ ಯೋಜನೆಗೆ ಬೆಂಬಲಿಸಿಲಿದ್ದಾರೆ ಎನ್ನುವ ಭರವಸೆ ಇದೆ.

ನಾನು ಮತ್ತು ಕೈಗಾರಿಕೋದ್ಯಮಿ ಶ್ರೀ ಸುಜ್ಞಾನ ಹಿರೇಮಠ್ ರವರು ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಪ್ರೀತಿಯ ಜಗಳವಾಡಿ ಕೈಗಾರಿಕಾ ಪ್ರದೇಶದ ಹಸೀರಕರಣದ ಬಗ್ಗೆ ಚರ್ಚೆ ಮಾಡಿದ್ದೇವು. ಅದ್ದರಿಂದ ಕೈಗಾರಿಕೆಗಳಿಗೆ ಸಂಭಂಧಿಸಿದ ಎಲ್ಲಾ ಸಂಘಟನೆಗಳು ಕೈಜೋಡಿಸುವ ಆಶಾ ಭಾವನೆ ನನ್ನದಾಗಿದೆ.