20th December 2024
Share

TUMAKURU:SHAKTHIPEETA FOUNDATION

 ಮುಖ್ಯ ಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ಶ್ರೀ ಜಿ.ಎಸ್.ಬಸವರಾಜ್‍ರವರ ಮನವಿ. ಪತ್ರದಲ್ಲಿ ಮಾತ್ರ ಡಿಫೆನ್ಸ್ ಕಾರಿಡಾರ್ ಹುಬ್ಬಳ್ಳಿ, ಬೆಳಗಾವಿವರೆಗೆ ತೋರಿಸುವುದು. ಮಾಡಿಕೊಳ್ಳುವುದು ಮಾತ್ರ ತುಮಕೂರಿಗೆ ಇದು ಬಸಣ್ಣನವರ ತಂತ್ರಗಾರಿಕೆ ಎಂದು ತಮಾಷೆ ಮಾಡುವ ಮೂಲಕ ನಿರ್ದೇಶನ ನೀಡಿದ ಮುಖ್ಯ ಮಂತ್ರಿಯವರು.

ಮಾನ್ಯರೇ,

ವಿಷಯ: ಕೈಗಾರಿಕಾ ಹೂಡಿಕೆಗೆ ಪೂರಕವಾಗುವ DEFENCE CORRIDOR ಕಾರಿಡಾರ್ ಕರ್ನಾಟಕದ ,ತುಮಕೂರು ಶಿವಮೊಗ್ಗ ಮತು ದಾವಣಗೆರೆ ,ಹುಬ್ಬಳ್ಳಿ ಮೂಲಕ ಬೆಳಗಾವಿಯ ವರೆಗೆ ವಿಸ್ತರಿಸಲು ಕೇಂದ್ರ ಸರಕಾರಕ್ಕೆ ಆಗ್ರಹಿಸಲು ಮನವಿ:

  ಮೇಲಿನ ವಿಷಯಕ್ಕೆ ಸಂಭಂಧಿಸಿದಂತೆ, 2014ರಿಂದಲೇ ನಾನು ಕೇಂದ್ರ ಸರಕಾರ ರಕ್ಷಣಾ ಸಚಿವಾಲಯಕ್ಕೆ ಆಗ್ರಹಿಸಿ ರಾಜ್ಯದಲ್ಲಿ DEFENCE ಹಬ್ ಸ್ಥಾಪಿಸಿದರೆ ರಕ್ಷಣಾವಲಯಕ್ಕೆ ಅಗತ್ಯಗೆ ಪೂರೈಕೆ ಮತ್ತು ದೇಶೀಯವಾಗಿ ಪಡೆಯಲು ಅನುಕೂಲವಾಗುತ್ತದೆ ಎಂದು ವಿವರಿಸಿ, ಒಂದನ್ನು ತುಮಕೂರು ಜಿಲ್ಲೆಯಲ್ಲಿ ಸ್ಥಾಪಿಸಲು ಕೋರಲಾಗಿತ್ತು.

  ಈ ಹಿಂದಿನ  ರಕ್ಷಣಾ ಸಚಿವರು ಆಗಿದ್ದ ದಿ. ಮನೋಹರ್ ಪರಿಕ್ಕಾರ್ ರವರು ಪ್ರಸ್ಥಾವನೆಯನ್ನು ಪರಿಶೀಲಿಸುವುದಾಗಿ ತಮ್ಮ ದಿನಾಂಕ 23/11/2014 ರಲ್ಲಿ ಉತ್ತರಿಸಿದ್ದರು. ಅವಗಾಹನೆಗಾಗಿ ಪ್ರತಿ ಲಗತ್ತಿಸಿದೆ. ಮುಂದಿನ ಬೆಳವಣಿಗೆ ಯಂತೆ  ಕೇಂದ್ರ ಸರಕಾರ ರಕ್ಷಣಾ ಸಚಿವಾಲಯ ಉತ್ತರ ಭಾರತದ ಉತ್ತರಪ್ರದೇಶ-ಬಿಹಾರ್ ಮತ್ತು ದಕ್ಷಿಣ ಭಾರತದ ತಮಿಳುನಾಡಿನಲ್ಲಿ DEFENCE ಕಾರಿಡಾರ್  ಪರಿಚಯಿಸಿ, ಈ ಕಾರಿಡಾರ್‍ನ ಉತ್ತರ ಭಾರತದಲ್ಲಿ 6 ಸಂಖ್ಯೆ ಮತ್ತು ದಕ್ಷಿಣದಲ್ಲಿ5 ನೋಡಲ್ ಪಾಯಿಂಟ್ಸ್ ಆಭಿವೃಧ್ಧಿ ಪಡಿಸಿಲು ಕ್ರಮವಹಿಸಿದೆ.

  ದಕ್ಷಿಣ ಭಾರತದ DEFENCE ಕಾರಿಡಾರ್ ಸದ್ಯ ಹೊಸೂರುವರೆಗೆ ಇರಲಿದ್ದು ಅದು ಬೆಂಗಳೂರು ತುಮಕೂರು ಇಂಡಸ್ಟ್ರಿಯಲ್ ನೋಡ್ ವರೆಗೆ ವಿಸ್ತರಿಸಲಾಗುವುದು ಎಂದು ಈ ಹಿಂದೆ ರಕ್ಷಣಾಸಚಿವರಾಗಿದ್ದ ಶ್ರೀಮತಿ ನಿರ್ಮಲಾ ಸೀತಾರಾಮನ್ ಒಮ್ಮೆ ಹೇಳಿಕೆ ನೀಡಿದ್ದರು.

  ಆದ್ದರಿಂದ ಕರ್ನಾಟಕ ರಾಜ್ಯ ಸರಕಾರವೂ ಕೇಂದ್ರದ ಮೇಲೆ ಒತ್ತಡ ತಂದು DEFENCE ಕಾರಿಡಾರ್ ನ್ನು ಕರ್ನಾಟಕ್ಕೂ ವಿಸ್ತರಿಸುವಂತೆ ಆಗ್ರಹಿಸುವುದು. ಈ ಕಾರಿಡಾರ್ ನ್ನು ಎರಡು ಕವಲಾಗಿ ಒಂದು ಭಾಗ ಶಿವಮೊಗ್ಗವರೆಗೆ ಮತ್ತೊಂದು ಭಾಗ ದಾವಣಗೆರೆ , ಹುಬ್ಬಳ್ಳಿ ಮೂಲಕ ಬೆಳಗಾವಿ ವರೆಗೆ ವಿಸ್ತರಿಸಲು ಕೋರುವುದು. ಈ ಎರಡು ಭಾಗದಲ್ಲಿರುವ ರಕ್ಷಣಾಸಚಿವಾಲಯ, ಇತರೆ DEFENCE ಚಟುವಟಿಕೆಗೆ ಕಾರಣವಾಗುವ ಇತರೆ ಪತ್ರದಲ್ಲಿ ಹೆಸರಿಸಿರುವ ಸಂಸ್ಧೆಗಳು ಸಕ್ರಿಯವಾಗಿ/ ಪುನ್ಚೇಕವಾಗಿ  ರಾಜ್ಯದಲ್ಲಿ ಹೆಚ್ಚಿನ ಹೂಡಿಕೆಗೆ, ಉದ್ಯೋಗ ಸೃಷ್ಠಿಗೆ ಕಾರಣವಾಗುತ್ತೆ ಎಂದೂ ಸಹಾ ಕೇಂದ್ರದ ಗಮನಕ್ಕೆ ತರುವುದು.

  ಬೆಂಗಳೂರು ಉತ್ತರ ಭಾಗದಲ್ಲಿ ರಾಜ್ಯಸರಕಾರ ಅಭಿವೃಧ್ಧಿ ಪಡಿಸುತ್ತಿರುವ ಏರೋಸ್ಪೇಸ್ ಪಾರ್ಕ್ ಮತ್ತು ಐಟಿಐಆರ್ ತುಮಕೂರು ಬಳಿ ಗುರುತಿಸಿರುವ ತುಮಕೂರು ಇಂಡಸ್ಟ್ರಿಯಲ್ ನೋಡ್ ಆವರಣದಲ್ಲಿ ಹೆಚ್ಚಿನ ಹೂಡಿಕೆಗೆ ಅವಕಾಶ ಮತ್ತು ರಕ್ಷಣಾಸಚಿವಾಲಯಕ್ಕೆ ಸೇರಿದ ಹೆಚ್. ಎ. ಎಲ್ ಪೂರ್ಣ ಪ್ರಮಾಣದಲ್ಲಿ  ಬಳಸಲು, ಅದೇ ರೀತಿ ತುಮಕೂರು ಇಸ್ರೋ ಸಂಸ್ಧೆಯಲ್ಲೂ ಚಟುವಟಿಕೆ ಪ್ರಾಂರಂಭವಾಗಲು ಕಾರಣವಾಗುತ್ತದೆ.

  ತರೀಕೆರೆಯ ಬಿಹೆಚ್‍ಎಎಲ್ ಅಂಗ ಸಂಸ್ಧೆಯಾದ ವಿಜ್ನಾನ ಇಂಡಸ್ಟ್ರೀಸ್ ಮತ್ತು ಭದ್ರಾವತಿ ನಿಷ್ಕ್ರಿಯ ವಿಐಎಸ್‍ಎಲ್   ಸಂಸ್ಧೆಗೆ ಸೇರಿದ ಟೌನ್ ಶಿಪ್ ಆವರಣ ಬಿಟ್ಟು ಉಳಿಕೆ ಜಾಗ ಸುಮಾರು 532 ಎಕರೆ ಇದ್ದು ಬಳಸಲು ಅನುಕೂಲಕರವಾಗುತ್ತದೆ. ಚಳ್ಳಕೆರೆ ಬಳಿಯ ಡಿಆರ್ ಡಿಒ ಸಂಸ್ಧೆಗೆ ಪೂರಕ ವಾಗುತ್ತದೆ ಅದೇ ರೀತಿ ಮುಂಬೈ-ಬೆಂಗಳೂರು ಎಕನಾಮಿಕ್ ಕಾರಿಡಾರ್ ಉದ್ದಲಗಕ್ಕೂ ಈಗಾಗಲೇ ಗುರುತಿಸಿರುವ ಇಂಡಸ್ಟ್ರಿಯಲ್ ನೋಡ್‍ಗಳಾದ ಚಿತ್ರದುರ್ಗ-ದಾವಣಗೆರೆ ಮಧ್ಯಭಾಗದ ಭರಮಸಾಗರ, ಅದೇ ರೀತಿಯ ಹುಬ್ಬಳ್ಳಿ-ಧಾರವಾಡ ನಡುವೆ ಬರುವ ಧಾರವಾಡ್ ನೋಡ್, ಮತ್ತು ಬೆಳ್ಗಾವಿ ಸಮೀಪದ ಎರೋಸ್ಪೇಸ್ ಪಾರ್ಕ್ ಅವರಣದಲ್ಲಿ ಹೆಚ್ಚಿನ ಹೂಡಿಕೆ ಬರಲು ಕಾರಣ ವಾಗುತ್ತದೆ. ಈ  ಕ್ರಮವು ರಾಜ್ಯ ಸರ್ಕಾರದ ಇನ್ ವೆಸ್ಟ್ ಕರ್ನಾಟಕ  2022 ಕ್ಕೆ ಪೂರಕವಾಗಲಿದೆ.

ಮೇಲೆ ತಿಳಿಸಿದ ಅಂಶಗಳನ್ನು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿ ಚೈನ್ನೈ-ಬೆಂಗಳೂರು-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ನ್ನು ತಮಿಳುನಾಡು ಮತ್ತು ಕೇರಳ ಸರ್ಕಾರದ ಒತ್ತಾಯದ ಮೇರೆಗೆ ಈಗ ಕೊಯಮೊತ್ತೂರು ಮೂಲಕ ಕೇರಳದ ಕೊಚ್ಚಿವರೆಗೆ ವಿಸ್ತರಿಸಿಕೊಡಂತೆ ಕರ್ನಾಟಕ ಸರ್ಕಾರವೂ ಸಹಾ ಕೇಂದ್ರದಮೇಲೆ ಒತ್ತಡತಂದು ಕೈಗಾರಿಕಾ ಹೂಡಿಕೆಗೆ ಪೂರಕವಾಗುವ DEFENCE ಕಾರಿಡಾರ್ ಕರ್ನಾಟಕದ, ತುಮಕೂರು ಶಿವಮೊಗ್ಗ ಮತು ದಾವಣಗೆರೆ, ಹುಬ್ಬಳ್ಳಿ ಮೂಲಕ ಬೆಳಗಾವಿಯವರೆಗೆ ವಿಸ್ತರಿಸಲು ಆಗ್ರಹಿಸಬೇಕೆಂದು ಮನವಿ ಮಾಡಲಾಗಿದೆ. ಈ ವಿಷಯದ ಬಗೆಗಿನ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮಾಡಲಾದ ಪತ್ರ ವ್ಯವಹಾರದ ಪ್ರತಿಗಳನ್ನು ತಮ್ಮ  ಅವಗಾಹನೆಗೆ ಲಗತ್ತಿಸಲಾಗಿದೆ.                                                                                                 

ಗೌರವಪೂರಕವಾಗಿ,                                 ತಮ್ಮ  ವಿಶ್ವಾಸಿ,

                                                            (ಜಿ.ಎಸ್ ಬಸವರಾಜ್)