12th July 2024
Share

TUMAKURU:AIRPORT ಮುಂದುವರೆದ ಜಟಾಪಟಿ

TUMAKURU:SHAKTHIPEETA FOUNDATION 

ತುಮಕೂರು ಏರ್ ಪೋರ್ಟ್ ಅಷ್ಟು ಸುಲಭಕ್ಕೆ ಅಧಿಕಾರಿಗಳ ಮಾತು ಒಪ್ಪುವ ಆಗಿಲ್ಲ. ಈ ಬಗ್ಗೆ ದಿನಾಂಕ: 15.11.2021 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರು, ಮೂಲಭೂತ ಸೌಕರ್ಯ ಸಚಿವರಾದ ಶ್ರೀ ವಿ.ಸೋಮಣ್ಣವರಿಗೆ ಮನವಿ ಪತ್ರ ನೀಡಲಾಯಿತು.

  ಮುಖ್ಯ ಮಂತ್ರಿಯವರಿಗೆ ಬಸವರಾಜ್‍ರವರು ಈ ಪತ್ರ ನೀಡಲು ಹೋದಾಗ ಅಲ್ಲಿ ಸಚಿವರಾದ ಶ್ರೀ ಅಶ್ವಥ್ ನಾರಾಯಣರವರು ಇದ್ದರು, ಅವರು ರಾಮನಗರ ಬಿಡದಿ ಸುತ್ತಮುತ್ತ ಏರ್ ಪೋರ್ಟ್ ಮಾಡುವ ಕನಸು ಕಾಣುತ್ತಿದ್ದಾರೆ.

ಬೊಮ್ಮಾಯಿರವರು ಅಣ್ಣ ಬಸಣ್ಣ ಯಾವಾಗಲೂ ಮುಂದಿನ 50 ವರ್ಷಗಳ ಭವಿಷ್ಯದ ಚಿಂತನೆ ಮಾಡಿ ಯೋಜನೆ ರೂಪಿಸುತ್ತಾರೆ. ಯಾವ ಯೋಜನೆ ಬಂದರೂ ಮೊದಲು ತುಮಕೂರಿಗೆ ಬರಬೇಕು ಅಂತಾರೆ. ಇಂಥವರು 10 ಜನ ಎಂಪಿಗಳಿದ್ದರೆ ಕೇಂದ್ರದ ದುಡ್ಡೆಲ್ಲಾ ನಮ್ಮ ರಾಜ್ಯಕ್ಕೆ ಬರಲಿದೆ ಎಂದು ತಮಾಷೆ ಮಾಡಿದರಂತೆ.

ಅಲ್ಲೇ ಇದ್ದ ಮತ್ತೊಬ್ಬ ಎಂಪಿ ಶ್ರೀ ಶಿವಕುಮಾರ ಉದಾಸಿಯವರು ಮುಖ್ಯ ಮಂತ್ರಿಯವರ ಮುಖ ನೋಡಿದಾಗ ನೀವೂ ಅಷ್ಟೆ ಎಂದರಂತೆ. ಅಶ್ವಥ್ ನಾರಾಯಣರವರು ಜಿಲ್ಲಾ ಮಟ್ಟದಿಂದ ಹಿಡಿದು, ರಾಜ್ಯ ಮತ್ತು ಕೇಂದ್ರದ ಮಟ್ಟದಲ್ಲೂ ಬಸವಣ್ಣವರು ಹಠ ಹಿಡಿದು ಕೆಲಸ ಮಾಡುತ್ತಾರೆ. ಈ ವಯಸ್ಸಿನಲ್ಲೂ ಕಚೇರಿ ಕಚೇರಿಗೆ ಭೇಟಿ ನೀಡುವುದು ನಿಜಕ್ಕೂ ಒಂದು ಅದ್ಭುತ ಎಂದರಂತೆ.

ಇವರಿಗೆ,

ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ರವರಿಗೆ,

ಮಾನ್ಯ ಮುಖ್ಯ ಮಂತ್ರಿಗಳು,

ಕರ್ನಾಟಕ ಸರಕಾರ,

ಬೆಂಗಳೂರು

ಮಾನ್ಯರೇ,

ವಿಷಯ: ಬೆಂಗಳೂರು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನ ದಟ್ಟಣೆ ನೀಗಿಸಲು ರಾಜ್ಯ ಯೋಜನಾ ಮಂಡಲಿ ಪ್ರಸ್ಥಾವ ದಂತೆ ಕೆ. ಎ. ಐ. ಎಲ್ ಗೆ ಜೋಡಿಯಾಗಿ ನಿರ್ವಹಿಸಲು ತುಮಕೂರು ಇಂಡಸ್ಟ್ರಿಯಲ್ ನೋಡ್ ಬಳಿ ಏರ್ ಪೂರ್ಟ್ ನಿಲ್ದಾಣದ ಯೋಜನೆಗೆ ಕ್ರಮಕ್ಕೆ ಮನವಿ:-

               ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮಟ್ಟದಲ್ಲಿ ಬೆಂಗಳೂರು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನ ದಟ್ಟಣೆ ನೀಗಿಸಲು ರಾಜ್ಯ ಯೋಜನಾ ಮಂಡಲಿ ಪ್ರಸ್ಥಾವ ದಂತೆ ಕೆ. ಎ. ಐ. ಎಲ್ ಗೆ ಜೋಡಿಯಾಗಿ ನಿರ್ವಹಿಸಲು ಬೆಂಗಳೂರು ಪಡಸಾಲೆ ನಗರಗಳಲ್ಲಿ ಒಂದನ್ನು ಆಯ್ಕೆ ಮಾಡಲು ಕ್ರಮವಹಿಸಿದೆ.

  ಈ ಮಧ್ಯೆ ರಾಜ್ಯ ಯೋಜನಾ ಮಂಡಳಿಯು ತುಮಕೂರು ಇಂಡಸ್ಟ್ರಿಯಲ್ ನೋಡ್ ಬಳಿ ಏರ್ ಪೂರ್ಟ್ ನಿಲ್ದಾಣದ ಯೋಜನೆಗೆ ಸೂಕ್ತ ಸ್ಥಳವಾಗಿದೆಯಂದು ಅಭಿಪ್ರಾಯಿಸಿ ರಾಜ್ಯಸರಕಾರಕ್ಕೆ ತಿಳಿಸಿದೆ. ಸದರಿ ತುಮಕೂರು ಇಂಡಸ್ಟ್ರಿಯಲ್ ನೋಡ್ ಸಮೀಪದಲ್ಲಿ ಯೋಜನೆಗೆ ಅಗತ್ಯವಿರುವ ಸರ್ಕಾರಿ ಮತ್ತು ಖಾಸಗಿ ಭೂಮಿಯ ವಿವರವನ್ನು ಸರಕಾರಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಿದೆ.

 ಈ ಯೋಜನೆಯ ಮುಂದಿನ ಕ್ರಮಗಳು ಮುಂದುವರೆದಿದ್ದು,  ಆದರೆ ಕೇಂದ್ರ ಸರಕಾರದ ವಿಮಾನಯಾನ ಸಚಿವಾಲಯ ಹಾಗೂ ಕೆ. ಎ. ಐ. ಎಲ್ ಜೊತೆ ಆಗಿರುವ  ಒಪ್ಪಂದ ಪ್ರಕಾರ ಕೆ ಎ ಐ ಎಲ್ 150 ಕಿಮೀ ಸುತ್ತಳತೆಯಲ್ಲಿ ಯಾವುದೇ ವಾಣಿಜ್ಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಕಾಶ 30 ವರ್ಷ ಅಂದರೆ 2033 ರವರೆಗೆ ಇರುವುದಿಲ್ಲವೆಂಬ ಕಾರಣ ತುಮಕೂರು ಇಂಡಸ್ಟ್ರಿಯಲ್ ನೋಡ್ ಬಳಿ ಏರ್ ಪೂರ್ಟ್ ನಿಲ್ದಾಣದ ಯೋಜನೆ ಪ್ರಸ್ಥಾವನೆ ವಿಲೆ ಇದೆ.

 ಆದರೆ ಇಂತಹುದೇ ಸಂದಂರ್ಭ ದಲ್ಲಿಯೂ ಮುಂದಾಲೋಚನೆ ಮತ್ತು ಭವಿಷ್ಯದಲ್ಲಿಬೆಂಗಳೂರು ಸಮೀಪದ ಭೌಗೋಳಿಕ ಅವಕಾಶ ಬಳಸಿಕೊಳ್ಳಲು ತಮಿಳುನಾಡು ಸರ್ಕಾರ ಹೊಸೂರು ಬಳಿ ಏರ್ ಪೂರ್ಟ್ ನಿಲ್ದಾಣದ ಸ್ಥಾಪನೆಗೆ ಕ್ರಮವಹಿಸುತ್ತಿದೆ. ಭೂಸ್ವಾಧೀನ ಕ್ರಮ ಮುಂದುವರೆದಿದೆ.

  ಜೊತೆಗೆ ಜುಲೈ 2021 ರಲ್ಲಿ ಅನುಮೋದನೆ ಯಾಗಿರುವ ವಿಮಾನಯಾನ ಪಾಲಿಸಿ 2021ಯ ವಿವರಣೆ ಸಾರಾಂಶ –   –  “Airports Economic Regulatory Authority of India (Amendment) Bill, 2021.Bill seeking to spur smaller airports to expand air connectivity  This will enables Big airports having passenger  traffic  index yearly  more than 3.5 million, to pair the smaller non-profitable airports with profitable airports as a combination/package to bidders to make it a viable combination for investment under PPP (public-private partnership) mode,. This move is also likely to help in expanding the air connectivity to relatively remote areas and as a result, expediting the UDAN regional connectivity scheme’”. The Kempegowda International Airport (KIA), Bengaluru, has as many as 33.65 million passengers during the calendar year 2019, hence it is advantageous to have airport at Tumkur industrial node.

ಈ ಪಾಲಿಸಿಯನ್ನು ಗಮನಿಸಿಕೊಂಡು ಮತ್ತು ಬೆಂಗಳೂರಿನ ಉತ್ತಮ ಮೂಲಭೂತ ಸೌಕರ್ಯದ ಅವಕಾಶಗಳನ್ನು ಬಳಸಿಕೊಂಡು ಹಾಗೂ ಕೈಗಾರಿಕಾ ಮತ್ತು ಐ.ಟಿ ಕ್ಷೇತ್ರದ ಹೂಡಿಕೆಗಳನ್ನು ಬಾಚಿಕೊಳ್ಳಲು “ಹೊಸೂರು ವಿಮಾನ ನಿಲ್ದಾಣ ಸ್ಥಾಪನೆಗೆ” ಕ್ರಮವಹಿಸುತ್ತಿದೆ. ಅದೇ ರೀತಿ ಆಂದ್ರ ಪ್ರದೇಶ ಸಹಾ “ಹಿಂದೂಪುರ”ಅಭಿವ್ರುಧ್ಧಿ ಪಡಿಸಲು ಕ್ರಮವಹಿಸುತ್ತಿದೆ. ಆದ್ದರಿಂದ ಬೆಂಗಳೂರು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನ ದಟ್ಟಣೆ ನೀಗಿಸಲು ರಾಜ್ಯ ಯೋಜನಾ ಮಂಡಲಿ ಪ್ರಸ್ಥಾವ ದಂತೆ ಕೆ. ಎ. ಐ. ಎಲ್ ಗೆ ಜೋಡಿಯಾಗಿ ನಿರ್ವಹಿಸಲು ತುಮಕೂರು ಇಂಡಸ್ಟ್ರಿಯಲ್ ನೋಡ್ ಬಳಿ ಏರ್ ಪೂರ್ಟ್ ನಿಲ್ದಾಣದ ಯೋಜನೆ ಪ್ರಸ್ಥಾವಕ್ಕೆ  ವೇಗನೀಡಬೇಕೆಂದು ಕೋರಿದೆ.

 ಮುಂದುವರೆದಂತೆ ರಾಜ್ಯ ಸರಕಾರವು ಪಕ್ಕದ ರಾಜ್ಯಗಳಾದ ತಮಿಳುನಾಡು ಮತ್ತು ಆಂದ್ರ ಸರಕಾರಗಳು ತಮ್ಮ ರಾಜ್ಯವ್ಯಾಪ್ತಿಯಲ್ಲಿರುವ ಬೆಂಗಳೂರಿನ ಪಡಸಾಲೆ ನಗರಗಳನ್ನು ಅಭಿವೃಧ್ಧಿ ಪಡಿಸುತ್ತಿರುವಂತೆ ರಾಜ್ಯದಲ್ಲಿನ ಬೆಂಗಳೂರು ಸಮೀಪದ ನಗರ ತುಮಕೂರು ಸಹಿತ ಇತರೆ ನಗರಗಳನ್ನು ವೇಗವಾಗಿ ಅಭಿವೃಧ್ಧಿಪಡಿಸಲು ಕೋರುತ್ತಾ ಬೆಂಗಳೂರು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನ ದಟ್ಟಣೆ ನೀಗಿಸಲು ರಾಜ್ಯ ಯೋಜನಾ ಮಂಡಲಿ ಪ್ರಸ್ಥಾವ ದಂತೆ ಕೆ. ಎ. ಐ. ಎಲ್ ಗೆ ಜೋಡಿಯಾಗಿ ನಿರ್ವಹಿಸಲು ತುಮಕೂರು ಇಂಡಸ್ಟ್ರಿಯಲ್ ನೋಡ್ ಬಳಿ ಏರ್ ಪೂರ್ಟ್ ನಿಲ್ದಾಣದ ಯೋಜನೆಗೆ ಪೂರಕ  ಕ್ರಮಕ್ಕೆ ಮನವಿ ಮಾಡಲಾಗಿದೆ.

ಗೌರವಪೂರಕವಾಗಿ,                  ನಿಮ್ಮ ನಂಬುಗೆಯ,

                                                                                          (ಜಿ.ಎಸ್. ಬಸವರಾಜ್)