12th November 2024
Share

TUMAKURU:SHAKTHIPEETA FOUNDATION

ಕಲಬುರಗಿಯ  ಅರ್ಥ ಶಾಸ್ತ್ರಜ್ಞೆ  ಶ್ರೀಮತಿ ಸಂಗೀತಾ ಕಟ್ಟಿಮನಿ ಕರೆ ಮಾಡಿ ಮಾತನಾಡುತ್ತಿದ್ದರು. ಸಾರ್ ನಾವು ಮುಂದೊಂದು ದಿನ ಬಹಳ ಬೆಲೆ ಹೊರಬೇಕಾಗಿರುವುದು ಹವಾಮಾನ ವೈಪರೀತ್ಯ. ಈ ಬಗ್ಗೆ ನಾವು ಒಂದು ಸಂದೇಶ ಸಾರಬೇಕು ಎಂಬ ಮಾತಿನ ದಾಟಿ ಅವರದ್ದಾಗಿತ್ತು.

ಈ ಸಂಭಂದ ಪರಿಣಿತರ ವಿಷನ್ ಗ್ರೂಪ್ ರಚಿಸಿಕೊಂಡು ವ್ಯವಸ್ಥಿತವಾದ ಒಂದು ರೂಪುರೇಷೆ ನಿರ್ಧರಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದೆವು. ಮುಂದಿನ ಫೆಬ್ರವರಿಗೆ ನಿವೃತ್ತಿಯಾಗಲಿದೆ, ನಂತರ ನಿಮ್ಮ ಜೊತೆ ನಾನು ಕೈಜೋಡಿಸುತ್ತೇನೆ ಎಂಬ ಮುನ್ಸೂಚನೆ ಅವರ ಮಾತಿನಲ್ಲಿತ್ತು.

ನಾನು ಅವರಿಗೆ ಹೇಳಿದೆ ಇಂದಿನಿಂದಲೇ ನೀವೂ ಈ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಿ, ಈ ಬಗ್ಗೆ ಪ್ಯಾರೀಸ್ ಒಪ್ಪಂದದ ಪ್ರಕಾರ ಸರ್ಕಾರಗಳು ಏನು ಹೇಳಿದ್ದರು, ಈಗ ಏನು ಮಾಡಿದ್ದಾರೆ ಎಂಬ ಮೌಲ್ಯಮಾಪನ ಮೊದಲು ಆಗಬೇಕು.

ನಂತರ ಮುಂದೆ ಏನು ಆಗಬೇಕು, ಏನು ಮಾಡುತ್ತಿದ್ದಾರೆ ಎಂಬ ಚಿಂತನೆ ನಿರಂತರವಾಗಿ ಆಗಬೇಕಿದೆ. ರಾಜ್ಯದ ಆಸಕ್ತರ ಪಟ್ಟಿ ಸಿದ್ಧಮಾಡಿ ಎಲ್ಲರ ಅಭಿಪ್ರಾಯ ಕ್ರೋಡೀಕರಿಸಿ. ನಮ್ಮ ಶಕ್ತಿಪೀಠ ಕ್ಯಾಂಪಸ್ ಇಂತಹ ವಿಷನ್ ಗ್ರೂಪ್ ಗಳಿಗೆ ಸಾಮಾನ್ಯ ಸೌಲಭ್ಯ ಕೇಂದ್ರವಾಗಲಿದೆ.

ನಮ್ಮ ಕ್ಯಾಂಪಸ್ ಈ ಬಗ್ಗೆ ಒಂದು ಸಂದೇಶ ನೀಡಲು ಸಜ್ಜಾಗುತ್ತಿದೆ. ವಿಷನ್ ಗ್ರೂಪ್  ರಾಜ್ಯದ ಎಲ್ಲಾ 6554 ಬಿಎಂಸಿಗಳನ್ನು ಚುರುಕುಗೊಳಿಸಿ ಕೆಲಸ ಮಾಡಿಸುವುದೇ ಒಂದು ನಿರ್ಧಿಷ್ಠ ಗುರಿಯಾಗಬೇಕಿದೆ.

ಮೊದಲು ಹಿರಿಯರಿಂದ  ‘ಏನಿದು ಗುಂಡುತೋಪು? ರಹಸ್ಯ ಅರಿಯಿರಿ ಮೇಡಂ ಎಂಬ ವಿಚಾರ ಹಂಚಿಕೊಂಡಿದ್ದೇವೆ.

ರಾಜ್ಯ ಮಟ್ಟದ ದಿಶಾ ಸಮಿತಿ. ಕರ್ನಾಟಕ

ಕ್ರಮಾಂಕ: ಎನ್‍ಆರ್‍ಡಿಎಂಎಸ್/2/2021                                           ದಿನಾಂಕ:18.11.2021

ಗೆ.

ಅಪರ ಮುಖ್ಯ ಕಾರ್ಯದರ್ಶಿ.

ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

ಹಾಗೂ ಸದಸ್ಯ ಕಾರ್ಯದರ್ಶಿ. ರಾಜ್ಯ ಮಟ್ಟದ ದಿಶಾ ಸಮಿತಿ

ಬಹುಮಹಡಿಗಳ ಕಟ್ಟಡ. ಬೆಂಗಳೂರು .

GEO-SPATIAL  –  ಅಧಿಕಾರಿಗಳ ಆಂದೋಲನಾ. ಪತ್ರ-2

 ಹವಾಮಾನ ವೈಪರಿತ್ಯ ಮುಂದೊಂದು ದಿನ ಉಗ್ರಗಾಮಿಯಾಗಲಿದೆ, ವಿಶ್ವ, ದೇಶ, ರಾಜ್ಯ, ಜಿಲ್ಲಾ, ತಾಲ್ಲೋಕು, ಹೋಬಳಿ, ಗ್ರಾಮ ಪಂಚಾಯಿತ್, ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ನಾವು ವೈಪರೀತ್ಯ ಹವಾಮಾನಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ನಾವು ಈ ಉಗ್ರಗಾಮಿಯಿಂದ ಬಚವಾಗಲು ಏನೇನು ಮಾಡಬೇಕು ಎಂಬ ಬಗ್ಗೆ ಗಂಭೀರ ಚಿಂತನೆ ಅಗತ್ಯ.

 ನಮ್ಮ ಪೂರ್ವಜರು ಪ್ರತಿ ಗ್ರಾಮದಲ್ಲಿಯೂ ಒಂದೊಂದು ಗುಂಡುತೋಪು ಮಾಡಿದ್ದರು. ಇದು ಸರ್ಕಾರಿ ಆಸ್ತಿ, ಇಂದು ಇವುಗಳ ಜಿಐಎಸ್ ಲೇಯರ್ ಸಿದ್ಧವಾಗಬೇಕು. ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿರುವ ಬಯೋಮ್ಯಾನೇಜ್‍ಮೆಂಟ್ ಕಮಿಟಿ ಇದರ ಹೊಣೆಗಾರಿಕೆ ಹೊರಬೇಕು. ಇಲ್ಲಿ ಏನೇನು ಇರಬೇಕು ಎಂಬ ಬಗ್ಗೆ ಪರಿಣಿತರು ಮಾರ್ಗಸೂಚಿ ಸಿದ್ಧಪಡಿಸಬೇಕು.

 ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್ ಮಾಡಲು ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಸೂಚಿಸಿದ್ದರಿಂದ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರತಿ ಗ್ರಾಮದಲ್ಲಿರುವ ಸರ್ಕಾರಿ ಜಮೀನು ಹುಡುಕಾಟ ಆರಂಭಿಸಲು ಎಲ್ಲಾ ಹಂತದ ಅಧಿಕಾರಿಗಳಿಗೂ ಕೆಲಸ ಹಚ್ಚಿದ್ದಾರೆ.

ರಾಜ್ಯಾಧ್ಯಾಂತ ಎಲ್ಲಾ 31 ಜಿಲ್ಲೆಗಳ ಎನ್.ಆರ್.ಡಿ.ಎಸ್ ಪ್ರತಿಯೊಂದು ಗ್ರಾಮದ ಗುಂಡು ತೋಪುಗಳ ಜಿಐಎಸ್ ಲೇಯರ್ ಮಾಡಿರುವ ಬಗ್ಗೆ ಮಾಹಿತಿ ನೀಡಲು ಈ ಮೂಲಕ ಕೋರಿದೆ.

ವಂದನೆಗಳೊಂದಿಗೆ                                            ತಮ್ಮ ವಿಶ್ವಾಸಿ

          ಕುಂದರನಹಳ್ಳಿ ರಮೇಶ್, ಮೊ:9886774477.    ಸದಸ್ಯ. ರಾಜ್ಯ ಮಟ್ಟದ ದಿಶಾ ಸಮಿತಿ.