9th October 2024
Share

ತುಮಕೂರು:ಸರ್ಕಾರಿ ಬಾಡಿಗೆ ಕಚೇರಿಗಳಿಗೆ ಇತಿ ಶ್ರೀ ಹಾಡಲು ಸಾಧ್ಯವಿಲ್ಲವೇ?

TUMAKURU:SHAKTHIPEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ಆಗಿದೆ. ಆದರೇ ಜಿಲ್ಲಾಧಿಕಾರಿಗಳ ಕಚೇರಿಯೇ ಸೋರುತ್ತಿದೆ. ಮಿನಿ ವಿಧಾನಸೌಧದಲ್ಲಿರುವ ಆನೇಕ ಕಚೇರಿಗಳು ಆಗಾಗ್ಗೆ ಜಲರುದ್ರಾಭಿಷೇಕ ಆಗುತ್ತಿದೆ. ಆದರೂ ಈ ಬಗ್ಗೆ ವಿಶೇಷ ಕಾಳಜಿ ಏಕೆ ಇಲ್ಲ ಎಂಬುದು ಒಂದು ಯಕ್ಷ ಪ್ರಶ್ನೆ.

ತುಮಕೂರು ನಗರದಲ್ಲಿ ಸರ್ಕಾರಿ ಕಚೇರಿಗಳು ಬಾಡಿಗೆ ಮಯವಾಗಿವೆ. ಬಾಡಿಗೆ ದಾರರ ಲಾಭಿಯಿಂದ ಸರ್ಕಾರಿ ಕಚೇರಿ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬಂತಾಗಿದೆ. ಸರ್ಕಾರಿ ಯೋಜನೆಗಳಿಗೆ ಜಮೀನು ನೀಡುವಲ್ಲಿ ನಮ್ಮ ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್ ರವರು ವಿಶೇಷ ಆಸಕ್ತಿ ವಹಿಸಿದ್ದಾರೆ.ಅವರ ಅವಧಿಯಲ್ಲಿಯೇ ಎಲ್ಲಾ ಸರ್ಕಾರಿ ಯೋಜನೆಗಳಿಗೆ ನಗರದ ಸುತ್ತ-ಮುತ್ತ ಜಮೀನು ನೀಡುವುದು ಸೂಕ್ತವಾಗಿದೆ.

ಸರ್ಕಾರಿ ಕಚೇರಿಗಳಿಗೆ ಸರ್ಕಾರಿ ಜಮೀನು ಒಂದು ಆಂದೋಲನವಾಗಬೇಕು. ಜನರಿಗೆ ಒಂದೇ ಕಡೆ ಬಹುತೇಕ ಕಚೇರಿಗಳ ಸೌಲಭ್ಯವಾದರೂ ದೊರೆಯಬೇಕು.ಮುಂದಿನ ದಿಶಾ ಸಭೆಯಲ್ಲಿ ಇದು ಪ್ರಮುಖ ಚರ್ಚೆಯಾಗಲಿದೆ.

ಆದರೂ ಕೆಳಕಂಡ ಯೋಜನೆಗಳ ಬಗ್ಗೆ ಆನೇಕ ಭಾರಿ ಚರ್ಚೆಯಾದರೂ ತುಮಕೂರು ತಹಶೀಲ್ಧಾರ್ ಶ್ರೀ ಮೋಹನ್ ರವರು ಮತ್ತು ಅವರ ಸ್ನೇಹಿತರಾದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ನರಸಿಂಹರಾಜುರವರು ಕಳೆದ 10 ವರ್ಷಗಳಿಂದ ನನ್ನ ಜೊತೆ ಈ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಚರ್ಚೆ ಮಾಡುತ್ತಿದ್ದಾರೆ. ಅಧಿಕಾರ ಇದ್ದಾಗ ಮೌನ?

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಪತ್ರ ನೀಡಿದರೂ ಮೌನವಾಗಿದ್ದಾರೆ. ನಾನಂತು ಅವರ ಬಳಿ ಹತ್ತಾರು ಸರ್ಕಾರಿ ಜಮೀನುಗಳ ಮಾಹಿತಿಯೊಂದಿಗೆ ನಿರಂತರವಾಗಿ ಚರ್ಚೆ ಮಾಡುತ್ತಿದ್ದೇನೆ. ಅವರು ಸಹ ಇನ್ನೂ ಒಂದೇ ದಿವಸದಲ್ಲಿ ಕಡತ ರೆಡಿ, ನಕ್ಷೆ ನಿಮ್ಮ ಕೈಯಲ್ಲಿ ಎನ್ನುತ್ತಲೇ ಇದ್ದಾರೆ. ಆದರೇ ಇನ್ನೂ ರಾಹುಕಾಲ ಮುಗಿದಿಲ್ಲವೇನೋ?

  1. ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ಕ್ಕೆ ಜಮೀನು.
  2. ಸರ್ಕಾರಿ ಐಟಿಐ ಕಾಲೇಜಿಗೆ ಜಮೀನು
  3. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಜಮೀನು
  4. ಸಬ್ ರಿಜಿಸ್ಟ್ರಾರ್ ಕಚೇರಿಗೆ ಜಮೀನು.
  5. ಸರ್ಕಾರಿ ಜಯದೇವ ಆಸ್ಪತ್ರೆಗೆ ಜಮೀನು.
  6. ಸರ್ಕಾರಿ ಮೆಡಿಕಲ್ ಕ್ಯಾಂಪಸ್‍ಗೆ ಜಮೀನು.
  7. ಹೌಸಿಂಗ್ ಫಾರ್ ಯೋಜನೆಗೆ ಜಮೀನು.
  8. ಸ್ತ್ರೀ ಶಕ್ತಿ ಸಂಘಗಳ ಉತ್ಪನ್ನಗಳ ಕಟ್ಟಡ ಮಳಿಗೆಗೆ ಜಮೀನು.
  9. ಇತ್ಯಾದಿ.

2021 ಮುಗಿಯುವುದರೊಳಗೆ ಸರ್ಕಾರಿ ಕಚೇರಿಗಳಿಗೆ ಸರ್ಕಾರಿ ಜಮೀನು ಕಡತಯಜ್ಞ ನಡೆಯಲೇ ಬೇಕು. ಈ ಬಗ್ಗೆ ದಿನಾಂಕ:25.11.2021 ರಂದು ತುಮಕೂರು ತಹಶೀಲ್ಧಾರ್ ಕಚೇರಿಯಲ್ಲಿ ಜಾಂಡಾ ಹೂಡಲು ಚಿಂತನೆ ಮಾಡುತ್ತಿದ್ದೇನೆ. ಇವರು ದಾಖಲೆ ನೀಡಿದರೆ, ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಯೋಜನೆಗಳಿಗೆ ಜಮೀನು ಕಡತ ಉಳಿಯುವುದೇ ಇಲ್ಲ. ಪಟಾ ಪಾಟ್ ವಿಲೇವಾರಿ ಆಗಲಿದೆ.