9th October 2024
Share

TUMAKURU:SHAKTHIPEETA FOUNDATION

ದಿನಾಂಕ:06.11.2021 ರಂದು ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಭೆಯಲ್ಲಿ ರಾಷ್ಟ್ರೀಯ ಹೆದ್ಧಾರಿ ಬಗ್ಗೆ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ಹೆದ್ದಾರಿ 4:

ರಸ್ತೆ ದುರಸ್ಥಿ

ಮಾನ್ಯ ಅಧ್ಯಕ್ಷರು ಮಾತನಾಡಿ ಕ್ಯಾತಸಂದ್ರ ಟೋಲ್ ನಿಂದ ಕೋರಾದವರೆಗಿನ ರಸ್ತೆ ಹಾಳಾಗಿದೆ. ದಿನ ನಿತ್ಯ ನೂರಾರು ಜನರು ತೊಂದರೆ ಅನುಭವಿಸುತ್ತಿದ್ದಾರೆ, ಕಳೆದ ಸಭೆಯಲ್ಲಿ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದರು.

ಮಾನ್ಯ ಜಿಲ್ಲಾಧಿಕಾರಿಯವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಬಂಧಿಸಿದಂತೆ ಸ್ಥಳ ಭೇಟಿ ಮಾಡಲು ತಿಳಿಸಲಾಗಿತ್ತು.  ಆದರೆ, ಈವರೆಗೂ ಸ್ಥಳ ಭೇಟಿ ಮಾಡಿರುವುದಿಲ್ಲ ಎಂದು ಸಭೆಯ ಗಮನಕ್ಕೆ ತಂದರು.  ಪ್ರತಿಯಾಗಿ ಸಭೆಯಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಹೆದ್ದಾರಿ 4ರ ಅಧಿಕಾರಿಯವರು ಮಾತನಾಡಿ, ಪ್ರಸಕ್ತ ಮಾಹೆಯ ಒಂದನೇ ದಿನಾಂಕದಂದು ಸದರಿ ಕಾಮಗಾರಿಯು (ಪ್ರಸ್ತಾಪಿತ) ಪೂರ್ಣಗೊಂಡಿರುವುದಾಗಿ ಸಭೆಗೆ ಮಾಹಿತಿ ನೀಡಿದರು. 

ಸಭೆಯ ಮಾನ್ಯ ಅಧ್ಯಕ್ಷರು ಮಾತನಾಡಿ, 35 ಕಿ.ಮೀ ಉದ್ದದ 6 ಲೇನ್ ಕಾಮಗಾರಿಯನ್ನು (ವಿಶೇಷ ದುರಸ್ತಿಗಾಗಿ) ಈಗ ಆರು ತಿಂಗಳ ಅವಧಿಗೆ ನವೀಕರಿಸಲಾಗಿದೆ.   ಅದರಂತೆ, ಈಗ ಇರುವುದನ್ನು ಕಿತ್ತುಹಾಕಿ ಹೊಸದಾಗಿ ರಸ್ತೆಯನ್ನು ಕಾಮಗಾರಿ ನಿರ್ವಹಿಸಲಾಗುತ್ತದೆ.  ತುಮಕೂರು ನೆಲಮಂಗಲ ರಸ್ತೆಯನ್ನು ವಿಲೀನಗೊಳಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಕೆಳಸೇತುವೆ.

ಮುಂದುವರೆದು ಮಾತನಾಡಿ, ತುಮಕೂರು ನಗರ ವ್ಯಾಪ್ತಿಯ ಅಣ್ಣೆತೋಟ, ಜಗನ್ನಾಥಪುರ, ಸತ್ಯಮಂಗಲ, ಹನುಮಂತಪುರ ಬಳಿ ಕೆಳಸೇತುವೆ ಕಾಮಗಾರಿಗಳ ಕುರಿತು ಪ್ರಸ್ತಾಪಿಸಿದರು.  ಪ್ರತಿಯಾಗಿ ಅಧಿಕಾರಿಯವರು ಮಾತನಾಡಿ, ಸದರಿ ಎಲ್ಲ ಕಾಮಗಾರಿಗಲೂ ಆನ್‍ಲೈನ್‍ನಲ್ಲಿ (6 ಲೇನ್) ಸೇರ್ಪಡೆಯಾಗಿರುವುದಾಗಿ ಸಭೆಗೆ ಮಾಹಿತಿ ಸ್ಪಷ್ಟಪಡಿಸಿದರು. 

 ಮಾನ್ಯ ಅಧ್ಯಕ್ಷರು ಮಾತನಾಡಿ, ಟ್ರ್ಯಾಕ್ಟರ್‍ಗಳು ಓಡಾಡಲು ಅವಕಾಶವಾಗುವಂತೆ ಕಾಮಗಾರಿ ನಿರ್ವಹಿಸಬೇಕೆಂದು ಅಧಿಕಾರಿಯವರಿಗೆ ತಿಳಿಸಿದರು.  ಪ್ರತಿಯಾಗಿ ಅಧಿಕಾರಿಯವರು ಮಾತನಾಡಿ ಇದೀಗ ಹಬ್ಬ ಮುಗಿದಿದ್ದು, ಈಗ ಕಾಮಗಾರಿ ನಿರ್ವಹಿಸುವುದಾಗಿ ಸಭೆಗೆ ತಿಳಿಸಿದರು.

ಅಪಘಾತ

 ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ರವರು ಮಾತನಾಡಿ, ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆ ಅತ್ಯಧಿಕವಾಗಿದ್ದು, ತುಮಕೂರು ಸ್ಮಾರ್ಟ್ ಸಿಟಿಯ ಐಸಿಸಿಸಿ ವತಿಯಿಂದ ಪೋಲೀಸಿನವÀರು ತನಿಖೆ ನಡೆಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

 ಬೆಂಗಳೂರಿನ ಕಡೆಯಿಂದ ಬರುವ ವಾಹನಗಳು ಕ್ಯಾತ್ಸಂದ್ರದಿಂದ ಮುಂದೆ ಬರುವಾಗಿ ಸಿಗ್ನಲ್ ಬಳಿ ಅತಿ ಹೆಚ್ಚು ಅಪಘಾತಗಳು ಆಗುತ್ತಿವೆ.  ಇತ್ತೀಚಿನ ಅಪಘಾತದಲ್ಲಿ 12 ಮಂದಿ ಮೃತಪಟ್ಟಿರುತ್ತಾರೆ ಎಂದು ಸಭೆಯ ಗಮನಕ್ಕೆ ತಂದರಲ್ಲದೆ ತತ್ಸಂಬಂಧದ ವರದಿಯನ್ನು ನೀಡುವಂತೆ ಐಸಿಸಿಸಿ, ಪೋಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಯವರಿಗೆ ಸೂಚಿಸಿದರು.  ಪ್ರತಿಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾ 4ರ ಮುಖ್ಯ ಅಧಿಕಾರಿಯವರನ್ನು ಸಭೆಗೆ ಕರೆಸಬೇಕೆಂದು ಯೋಜನಾ ನಿರ್ದೇಶಕರಿಗೆ ತಿಳಿಸಿದರು.

ತುಮಕೂರು ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ:

 ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ರವರು ಮಾತನಾಡಿ 0-12 ಕಿ.ಮೀ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ 4 ವಹಿಸಿರುವುದಾಗಿ ಸಭೆಯ ಗಮನಕ್ಕೆ ತಂದಾಗ ಸಭೆಯಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ಅಧಿಕಾರಿಯವರು ಮಾತನಾಡಿ, ಡಿ.ಪಿ.ಆರ್ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.

ಅಧ್ಯಕ್ಷರು ಮಾತನಾಡಿ ಶೀಘ್ರವಾಗಿ ಕಳುಹಿಸಲು ಸೂಚಿಸಿದರು.

ಬೀದರ್ ಶ್ರೀರಂಗ ಪಟ್ಟಣ ರಸ್ತೆ.

 ಮಾನ್ಯ ಜಿಲ್ಲಾಧಿಕಾರಿಯವರು ಮಾತನಾಡಿ, ಜೆ.ಸಿ.ಪುರ ರಸ್ತೆಯಲ್ಲಿ ರಸ್ತೆ ಕಾಮಗಾರಿಯ ನಂತರ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದ್ದು, ಆ ಕಡೆ 1 1/2 ಕಿ.ಮೀ ಈ ಕಡೆ 1 1/2 ಕಿ.ಮೀ ರಸ್ತೆ ಬಂದ್ ಮಾಡಲಾಗಿತ್ತು.  ಈ ಕುರಿತು ದಟ್ಟಣೆಯನ್ನು ನಿಭಾಯಿಸಿ, ಜನರನ್ನು ಸಮಾಧಾನಪಡಿಸಲಾಯಿತು. ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮನೆಗಳಿಗೆ ನುಗ್ಗಿರುವ ನೀರನ್ನು ಹೊರಹಾಕಿಸಿ ರಸ್ತೆಯ ಇಕ್ಕೆಲಗಳಲ್ಲಿ ನಿಯಮಾನುಸಾರ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಂಡು ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕೆಂದು ಹಾಜರಿದ್ದ ಇಂಜಿನಿಯರ್‍ರವರಿಗೆ ತಿಳಿಸಿದರು.

  ಹಾಜರಿದ್ದ ಇಂಜಿನಿಯರ್ ರವರು ಮಾತನಾಡಿ, ಕೆ.ಬಿ ಕ್ರಾಸ್‍ನಿಂದ ಮಾಯಸಂದ್ರ ರಸ್ತೆಗೆ ಸಿದ್ಧತೆಯಾಗಿವುದಾಗಿ ಸಭೆಯ ಗಮನಕ್ಕೆ ತಂದರು.  ನಂತರ ಮಾತನಾಡಿ ಶಿರಾ, ಮಧುಗಿರಿ 4 ಲೇನ್ ಕಾಮಗಾರಿಗೆ ಡಿ.ಪಿ.ಆರ್ ಕರೆಯಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. 

ಕೇಶಿಪ್ ರಸ್ತೆ

ಮಾನ್ಯ ಜಿಲ್ಲಾಧಿಕಾರಿಯವರು ಮಾತನಾಡಿ, ಕುಣಿಗಲ್ ಮಾರ್ಗದ ಹೇಮಾವತಿ ನಾಲಾ ವಿಭಾಗದ ಕಛೇರಿಯ ಮುಂದಿನ ರಸ್ತೆ ಯಾರ ವ್ಯಾಪ್ತಿಗೆ ತರುತ್ತದೆ ಎಂದು ಪ್ರಶ್ನಿಸಿದರು.  ಪ್ರತಿಯಾಗಿ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್‍ರವರು ಮಾತನಾಢಿ, ತುಮಕುರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವುದಾಗಿ ಸಭೆಗೆ ತಿಳಿಸಿದರು.  ಮಾನ್ಯ ಜಿಲ್ಲಾಧಿಕಾರಿಯವರು ಮಾತನಾಡಿ, ಸದರಿ ರಸ್ತೆಯು ಪಾಲಿಕೆಗೆ ಇನ್ನೂ ಹಸ್ತಾಂತರವಾಗಿರುವುದಿಲ್ಲವೆಂದು ಈ ಕುರಿತು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಜಿಲ್ಲಾಧಿಕಾರಿಯವರಿಗೆ ಮೂರು ಬಾರಿ ದೂರವಾಣಿ ಕರೆ ಮಾಡಿರುವುದಾಗಿಯೂ ಸಭೆಯ ಗಮನಕ್ಕೆ ತಂದರು. 

 ಪ್ರತಿಯಾಗಿ ಮಾನ್ಯ ಸದಸ್ಯರು ಮಾತನಾಡಿ, ಈ ಹಿಂದೆ ಲೋಕೋಪಯೋಗಿ ಇಲಾಖೆ ಕಾರ್ಪೊರೇಷನ್‍ಗೆ ರಸ್ತೆಯನ್ನು ಹಸ್ತಾಂತರಿಸಿರುವುದಾಗಿಯು ಸಭೆಗೆ ಮಾಹಿತಿ ಸ್ಪಷ್ಟಪಡಿಸಿದರು. ಕೆಶಿಪ್ ವತಿಯಿಂದ ಕಾಮಗಾರಿ ನಿರ್ವಹಿಸಿರುವ ಬಗ್ಗೆ ಮತ್ತು ರಸ್ತೆಯ ಇತಿಹಾಸದ ಬಗ್ಗೆ ವಿವರವಾದ ವರದಿ ನೀಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಹೊಸ ರಾಷ್ಟ್ರೀಯ ಹೆದ್ಧಾರಿ ಪ್ರಸ್ತಾವನೆ.           

ಮಾನ್ಯ ಸದಸ್ಯರಾದ ಶ್ರೀ ಕುಂದರನಹಳ್ಳಿ ರಮೇಶ್ ಮಾತನಾಡಿ ಬೆಂಗಳೂರು-ಮುಂಬೈ ರಸ್ತೆಯ ಚಿಕ್ಕಹಳ್ಳಿ, ಚೇಳೂರು, ನಿಟ್ಟೂರು, ಮೂಲಕ ಬೆಂಗಳೂರು-ಹಾಸನ ರಸ್ತೆವರೆಗೆ ರಾಷ್ಟ್ರೀಯ ಹೆದ್ಧಾರಿಗೆ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಸಲ್ಲಿಸುವಂತೆ ಪಿ.ಡಬ್ಲ್ಯೂ.ಡಿ ಕಾರ್ಯಪಾಲಕ ಇಂಜಿನಿಯರ್‍ರವರಿಗೆ ತಿಳಿಸಿದರು.  ನಂತರ ಮಾತನಾಡಿ, ಕಳ್ಳಂಬೆಳ್ಳ-ನಿಟ್ಟೂರು-ಚೇಳೂರು-ಕಡಬ ಐದು ಹೋಬಳಿಗಳು (ಮಾಯಸಂದ್ರ-ಮಂಗಳೂರು ಹೈವೇ) ಸೇರುತ್ತವೆ ಎಂದು ಸಭೆಗೆ ತಿಳಿಸಿದರು. 

ಈ ಮಾತಿಗೆ ಮಾನ್ಯ ಅಧ್ಯಕ್ಷರು ಸಹಮತ ವ್ಯಕ್ತಪಡಿಸಿ ಜಿಲ್ಲೆಯಲ್ಲಿ ಅಗತ್ಯವಿರುವ ರಸ್ತೆಗಳ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಿದರು.