22nd November 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವಾಲಯ ಜೀವಮಾನದಲ್ಲಿ ಮಾಡಿರುವ ಅತ್ಯಂತ ಒಳ್ಳೆಯ ಕೆಲಸಗಳಲ್ಲಿ  ಭಧ್ರಾ ಮೇಲ್ಧಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕಡತ ಅನುಸರಣೆ ಮಾಡಿರುವುದು ಒಂದು.

ಸುಮಾರು 29.90 ಟಿ.ಎಂ.ಸಿ ಅಡಿ ನೀರಿನ ಯೋಜನೆಯಲ್ಲಿ ಸುಮಾರು 2,25,515 ಹೆಕ್ಟೇರ್ ಪ್ರದೇಶಕ್ಕೆ ಹನಿನೀರಾವರಿ, 6 ಟಿ.ಎಂ.ಸಿ ಅಡಿ ನೀರಿನಿಂದ ಸುಮಾರು 367 ಕೆರೆಗಳಿಗೆ ನೀರು ತುಂಬಿಸುವುದು ಮತ್ತು ವಾಣಿವಿಲಾಸ ಡ್ಯಾಂಗೆ 2 ಟಿ.ಎಂ.ಸಿ.ಅಡಿ ನೀರು ಅಲೋಕೇóನ್ ಆಗಿದೆ.

ಸುಮಾರು 16125.48 ಕೋಟಿ ವೆಚ್ಚದ ಅನುದಾನದ ನೀರಿಕ್ಷೆ ನಮ್ಮ ರಾಜ್ಯದ್ದಾಗಿದೆ. ಕೇಂದ್ರ ಸರ್ಕಾರ ಅಂತಿಮವಾಗಿ ಗ್ರೀನ್ ಸಿಗ್ನಲ್ ಕೊಡಬೇಕಿದೆ. ಕೇಂದ್ರದ ಪಾಲು ರಾಜ್ಯದ ಪಾಲು ಎಷ್ಟು ಎಂಬುದು ನಿಖರವಾಗಿ ತಿಳಿಯುತ್ತಿಲ್ಲ ಕೇಂದ್ರ ಸರ್ಕಾರ ಘೋಷಣೆ ಮಾಡಿದ ಮೇಲೆ ಅಷ್ಟೆ ಹೇಳಬಹುದು ಎಂಬುದು ಕೆಲವು ಅಧಿಕಾರಿಗಳ ಅನಿಸಿಕೆ.

ಈ ಆರ್ಥೀಕ ವರ್ಷದ ಅನುದಾನದಲ್ಲಿಯೇ ದೇಶದಲ್ಲಿ  ಕೆಲಸ ಮಾಡದ ಕಡೆ ಬಾಕಿ ಇರುವ ಅನುದಾನವನ್ನು ಕೇಂದ್ರ ಸರ್ಕಾರ ನೀಡಬಹುದು ಅಥವಾ ಮುಂದಿನ ಆರ್ಥಿಕ ವರ್ಷದಿಂದ ಅನುದಾನ ನೀಡಬಹುದು ಎಂದು ಶಬರಿ ಹಾಗೆ ಕಾದು ಕುಳಿತಿದೆ ನಮ್ಮ ರಾಜ್ಯ ಸರ್ಕಾರ.

ಅಧಿಕಾರಿಗಳು ಮಾಡುವ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಈಗ ರಾಜಕೀಯ ಲಾಭಿಯ ಪಾತ್ರ ಬಹಳ ಮಹತ್ತರವಾಗಿದೆ. ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಲೋಸಭಾ ಕ್ಷೇತ್ರಗಳ ವ್ಯಾಪ್ತಿಗೆ ಈ ಯೋಜನೆ ಬರಲಿದೆ.

ಇದರಲ್ಲಿ ಶ್ರೀಮತಿ ಶೋಭಾ ಕರಂದ್ಲಾಜೆಯವರು ಮತ್ತು ಶ್ರೀ ಎ.ನಾರಾಯಣಸ್ವಾಮಿರವರು ಇಬ್ಬರೂ ಕೇಂಧ್ರದಲ್ಲಿ ಸಚಿವರಾಗಿದ್ದಾರೆ. ಶ್ರೀ ಸಿದ್ದೇಶ್ ರವರು ಮಾಜಿ ಕೇಂದ್ರ ಸಚಿವರಾಗಿದ್ದಾರೆ. ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಜಲಶಕ್ತಿ ಸಚಿವಾಲಯದ ಸಮಿತಿ ಸದಸ್ಯರಾಗಿದ್ದಾರೆ.

ನಮ್ಮ ರಾಜ್ಯದ 40 ಜನ ಸಂಸದರು ಪಕ್ಷಾತೀತವಾಗಿ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಮನಸ್ಸು ಗೆಲ್ಲುವರೇ ಕಾದು ನೋಡಬೇಕಿದೆ. ನನಗೆ ತಿಳಿದಿರುವ ಮಾಹಿತಿ ಪ್ರಕಾರ ಯಾವ ಕ್ಷಣದಲ್ಲಾದರು ಕೇಂದ್ರ ಸರ್ಕಾರ ಘೋಷಣೆ ಮಾಡಬಹುದು. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಎಲ್ಲಾ ಒತ್ತಡಗಳ ನಡುವೆಯೂ ಈ ಯೋಜನೆಯ ಕಡತದ ಬೆನ್ನು ಹತ್ತಿದ್ದಾರೆ.

ಚಳಿಗಾಲದ ಲೋಕಸಭಾ ಅಧಿವೇಶನದ ಅವಧಿ ಭಧ್ರಾಮೇಲ್ದಂಡೆ ಯೋಜನೆಯ ಶುಭ ಸಮಾಚಾರ ನೀಡಲಿದೆ ಎಂಬ ಆಶಾಭಾವನೆ ಇದೆ.