20th April 2024
Share

TUMAKURU:SHAKTHIPEETA FOUNDATION

ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಬೆಂಗಳೂರಿಗೆ ಅಥವಾ ದೆಹಲಿಗೆ ಹೋದರೆ ಹಲವಾರು ಇಲಾಖೆಗಳೊಂದಿಗೆ ವಿವಿಧ ಯೋಜನೆಗಳ ಕಡತದ ಅನುಸರಣೆ ಮಾಡುವುದು ರೂಢಿಯಾಗಿದೆ. ಇಂದು(24.11.2021) ರಂದು ಬೆಂಗಳೂರಿನಲ್ಲಿ ಈ ಕೆಳಕಂಡ ಇಲಾಖೆಗಳಿಗೆ ನಾನೊಬ್ಬನೆ ಭೇಟಿ ನೀಡಿದ್ದೆ.

ನನಗೆ ಕೆಲವು ಅಧಿಕಾರಿಗಳು ಸಾರ್ ನಿಮ್ಮ ಶಕ್ತಿಪೀಠ ಇ ಪೇಪರ್ ನಲ್ಲಿ ನಮ್ಮ ಹೆಸರು ಮತ್ತು ಫೋಟೋ ಹಾಕಬೇಡಿ ಸಾರ್ ಎಂದು ಹಲವಾರು ಭಾರಿ ಹೇಳಿದ್ದರು.ನಾನು ಗಂಭೀರವಾಗಿ ತೆಗೆದು ಕೊಂಡಿರಲಿಲ್ಲ.ಇಂದು ಸಹ ಕೆಲವು ಅಧಿಕಾರಿಗಳು ಹೇಳಿದ ಮಾತು ಸಾರ್ ನೀವು ಪೇಪರ್ ಅನ್ನು ಉನ್ನತ ಮಟ್ಟದ ಅಧಿಕಾರಿಗಳಿಗೆ ಕಳುಹಿಸುತ್ತೀರಿ. ಅವರು ನಿಮ್ಮ ನ್ಯೂಸ್ ನೋಡಿ ನಮ್ಮನ್ನು ಕರೆದು ಯೋಜನೆ ಬಗ್ಗೆ ಮಾತನಾಡುತ್ತಾರೆ. ಪೋಟೋ ಬಗ್ಗೆಯೂ ಚರ್ಚೆ ಅಗುತ್ತಿದೆ. ದಯವಿಟ್ಟು ನಮ್ಮ ಹೆಸರು ಮತ್ತು ಪೋಟೋ ಹಾಕದ ಹಾಗೆ ನ್ಯೂಸ್ ಮಾಡಿ ಸಾರ್ ಎಂದು ಹೇಳಿದ ಮಾತು ನನಗೆ ಅಚ್ಚರಿ ಯಾಗಿದೆ.

ಇಂದಿನಿಂದ ಎಷ್ಟು ಸಾಧ್ಯವೋ ಅಷ್ಟು ಹೆಸರು ಬರೆಯದ ಹಾಗೆ ನ್ಯೂಸ್ ಮಾಡಲು ಯೋಚಿಸಿದ್ದೇನೆ. ಮುಂದೆ ಯಾವ ರೀತಿ ಸಲಹೆ ಬರಲಿದೆ ಕಾದು ನೋಡೋಣ?

ನೋಡಿ ಈ ಕೆಳಕಂಡ ಇಷ್ಟು ಇಲಾಖೆಗಳಿಗೆ ಭೇಟಿ ನೀಡಿದಾಗ ಒಬ್ಬ ಒಳ್ಳೆಯ ಸಜ್ಜನ ಅಧಿಕಾರಿ, ಇನ್ನೊಬ್ಬ ಕಿರಿ ಕಿರಿ ಅಧಿಕಾರಿ, ಇನ್ನೊಬ್ಬ ಹಣ ಪೀಕುವ ಅಧಿಕಾರಿ, ಇನ್ನೊಬ್ಬ ಪ್ರತಿಷ್ಟೆ ಅಧಿಕಾರಿ, ಇನ್ನೊಬ್ಬ ಚಿಂತಕ, ದೇಶದ ಭವಿಷ್ಯದ ಬಗ್ಗೆ ಯೋಚಿಸುವ ಅಧಿಕಾರಿ. ಹೀಗೆ ಹಲವಾರು ಹವ್ಯಾಸ ಇರುವ ಅಧಿಕಾರಿಗಳೊಂದಿಗೆ ಚರ್ಚಿಸುವ ಅವಕಾಶ ಒಂದು ಅದ್ಭುತ ಕಲೆ ಮೈಗೂಡಲಿದೆ ಅಲ್ಲವೇ?

ದೂರವಾಣಿಯಲ್ಲಿ ಚರ್ಚೆ ಮಾಡುವ ಯೋಜನೆಗಳ ಅನುಸರಣೆಯೂ ಸೇರಿದರೆ ಪ್ರತಿ ನಿತ್ಯ ರಾಜಕಾರಣಿಗಳು ಅದೆಷ್ಟು ಅಧಿಕಾರಿಗಳು ಮತ್ತು ಜನರೊಂದಿಗೆ ಒಡನಾಟ ಇಟ್ಟುಕೊಂಡಿರುತ್ತಾರೆ ನೋಡಿ. ಅದಕ್ಕೆ ಒಬ್ಬ ಏನೂ ತಿಳಿಯದ ಚುನಾಯಿತ ಜನಪ್ರತಿನಿಧಿ ಒಂದು ವರ್ಷ ಕಳೆಯುವ ಮೊದಲೇ ಪಕ್ವವಾಗುತ್ತಾರೆ.

  1. ಕರ್ನಾಟಕ ಜೀವ ವೈವಿದ್ಯ ಮಂಡಳಿ: ಬೆಇಎಂಸಿ ಮತ್ತು ಪಿಬಿಆರ್ ಬಗ್ಗೆ ಸಮಾಲೋಚನೆ.
  2. ಯೋಜನಾ ಇಲಾಖೆ: ದಿಶಾ ಯೋಜನೆಗಳ ಬಗ್ಗೆ ಸಮಾಲೋಚನೆ.
  3. ಸಣ್ಣ ಕೈಗಾರಿಕಾ ಇಲಾಖೆ: ಮೆಗಾ ಟೆಕ್ಸ್ ಟೈಲ್ಸ್  ಪಾರ್ಕ್ ಬಗ್ಗೆ ಸಮಾಲೋಚನೆ.
  4. ಸಣ್ಣ ಕೈಗಾರಿಕಾ ಇಲಾಖೆ: ಕಾಯರ್ ಕ್ಲಸ್ಟರ್ ಬಗ್ಗೆ ಸಮಾಲೋಚನೆ.
  5. ಆರ್ಥಿಕ ಇಲಾಖೆ: ವಾಣಿ ವಿಲಾಸ ಯೋಜನೆ ಕಾಲುವೆ ಆಧುನೀಕರಣ ಯೋಜನೆ ಬಗ್ಗೆ ಸಮಾಲೋಚನೆ.
  6. ಆರ್ಥಿಕ ಇಲಾಖೆ ಪಿಎಂಯು ಘಟಕ: ವಾಣಿ ವಿಲಾಸ ಯೋಜನೆ ಕಾಲುವೆ ಆಧುನೀಕರಣ ಯೋಜನೆ ಬಗ್ಗೆ ಸಮಾಲೋಚನೆ.
  7. ಜಲಸಂಪನ್ಮೂಲ ಇಲಾಖೆ: ಹೇಮಾವತಿ ಮೈಕ್ರೋ ಇರ್ರಿಗೇಷನ್ ಪ್ರಸ್ತಾವನೆ ಬಗ್ಗೆ ಸಮಾಲೋಚನೆ.
  8. ಜಲಸಂಪನ್ಮೂಲ ಇಲಾಖೆ ಅಂಡರ್ ಸೆಕ್ರೇಟರಿ: ಹೆಚ್.ಎ.ಎಲ್. ಘಟಕಕ್ಕೆ ಕುಡಿಯುವ ನೀರಿನ ಯೋಜನೆ ಬಗ್ಗೆ ಸಮಾಲೋಚನೆ.
  9. ಜಲಸಂಪನ್ಮೂಲ ಅಂಡರ್ ಸೆಕ್ರೇಟರಿ: ಎತ್ತಿನಹೊಳೆ ರಾಷ್ಟ್ರೀಯ ಯೋಜನೆ ಬಗ್ಗೆ ಸಮಾಲೋಚನೆ.
  10. ಶಿಕ್ಷಣ ಇಲಾಖೆ ಸಚಿವರ ಕಚೇರಿ: ತುಮಕೂರು ನಗರದ ಎಮ್.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ಕಟ್ಟಡದ ಬಗ್ಗೆ ಸಮಾಲೋಚನೆ.
  11. ಮುಖ್ಯ ಮಂತ್ರಿಯವರ ಕಚೇರಿ: ಎನ್.ಐ.ಪಿ ಯೋಜನೆಗಳ ಬಗ್ಗೆ ಸಮಾಲೋಚನೆ.
  12. ಮೂಲಭೂತ ಸೌಕರ್ಯ ಇಲಾಖೆ- ಹೆಚ್.ಎ.ಎಲ್. ಬಗ್ಗೆ ಸಮಾಲೋಚನೆ.